f
ಇಂದಿನ ದಿನಮಾನದಲ್ಲಿ ಯಾರಿಗೂ ಸಹಾ ನೆಲ,ಜಲ, ಭಾಷೆಯ ಬಗ್ಗೆ ಅಭಿಮಾನ ಇಲ್ಲ ಎಲ್ಲಾ ಅವರವರ ಜಾತಿ,ಜನಾಂಗ ಮತ್ತು ಧರ್ಮದ ಬಗ್ಗೆ ಹೋರಾಟ ಮಾಡುತ್ತಿದ್ದಾರೆ ಎಂದು ಸಾಹಿತಿ ಬಿ.ಎಲ್.ವೇಣು ವಿಷಾಧ ವ್ಯಕ್ತಪಡಿಸಿದ್ದಾರೆ.
ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ವಿರೋಧಿಸಿ ಡಿ.5ರಂದು ಜರುಗಲಿರುವ ಕರ್ನಾಟಕ ಬಂದ್ ಬೆಂಬಲಿಸಿ ಹಾಗೂ ಕನ್ನಡ ನಾಡು, ನೆಲ, ಭಾಷೆ ಉಳಿವು, ಬೆಳವಣಿಗೆಗೆ ವಿಶೇಷ ಯೋಜನೆ ರೂಪಿಸುವಂತೆ ಒತ್ತಾಯಿಸಿ ವೀರ ಸಂಗೋಳ್ಳಿ ರಾಯಣ್ಣ ಸೇನೆ ಸಾಹಿತಿ ಬಿ.ಎಲ್.ವೇಣು ರವರ ಮನೆಯ ಹತ್ತಿರ ಹಮ್ಮಿಕೊಳ್ಳಲಾದ ಕಾರ್ಯಕ್ರಮದಲ್ಲಿ ಭುವನೇಶ್ವರಿ ಭಾವಚಿತ್ರಕ್ಕೆ ಪುಪ್ಪ ನಮನ ಸಲ್ಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಕರ್ನಾಟಕದಲ್ಲಿ ಕನ್ನಡ ಭಾಷೆ ಎನ್ನುವುದು ಅನಾಥವಾಗಿದೆ ಬೆಂಗಳೂರಿನಲ್ಲಿ ಎಲ್ಲಿ ನೊಡಿದರು ಸಹಾ ಎನ್ನಡ, ಎಕ್ಕಡ ಎಂಬುವಂತಾಗಿದೆ, ಇಲ್ಲಿ ಕನ್ನಡ ಎನ್ನುವುದನ್ನು ಹುಡುಕುವ ವಾತಾವರಣ ನಿರ್ಮಾಣವಾಗಿದೆ, ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ ಎನ್ನುವುದು ಬರೀ ಮಾತಾಗಿದೆ, ಸ್ಥಾನಗಳೆಲ್ಲವು ಬೇರೆಯವರ ಪಾಲಾಗುತ್ತಿದೆ. ಸರ್ಕಾರಗಳು ಸಹಾ ಭಾಷೆಯ ಅಭೀವೃದ್ದಿಯ ಬಗ್ಗೆ ಪೂರ್ಣ ಪ್ರಮಾಣದ ಗಮನ ನೀಡಿಲ್ಲ ಕರ್ನಾಟಕದಲ್ಲಿ ಮರಾಠರ ಅಭೀವೃದ್ದಿ ನಿಗಮ ಸ್ಥಾಪನೆ ಮಾಡಿದಂತೆ ರಾಜ್ಯದಲ್ಲಿ ಬೇರೆಯವರು ಸಹಾ ನಮ್ಮಗೂ ಸಹಾ ನಿಗಮವನ್ನು ಸ್ಥಾಪನೆ ಮಾಡುವಂತೆ ಒತ್ತಾಯ ಮಾಡುವುದು ತಪ್ಪುವುದಿಲ್ಲ ಅಲ್ಲದೆ ಬೇರೆ ರಾಜ್ಯದಲ್ಲಿ ಯಾರೂ ಸಹಾ ಕನ್ನಡ ಅಭೀವೃದಿ ನಿಗಮವನ್ನು ಸ್ಥಾಪನೆ ಮಾಡಿಲ್ಲ ನಮ್ಮ ರಾಜ್ಯದಲ್ಲಿ ಮಾತ್ರ ಏಕೆ ಇದ್ದೇಲ ರಾಜಕೀಯ ಹಾಗೂ ಮತಗಳಿಗಾಗಿ ಎಂದು ವೇಣು ದೂರಿದರು.
ಸಾಹಿತಿಗಳದ್ದು ಹಾಳೆ ಮೇಲಿನ ಹೋರಾಟ ಮಾತ್ರ ಬಹಿರಂಗವಾಗಿ ಬೀದಿಗಿಳಿದು ಹೋರಾಟ ಮಾಡುವಂತಿಲ್ಲ ಇದನ್ನು ಇಂದಿನ ಯುವಜನತೆ ಮಾಡಬೇಕಿದೆ ನಿಮಗೆ ನಾವು ಅವರಿಗೆ ಸಾಹಿತ್ಯದ ಮೂಲಕ ಬೆಂಬಲ ನೀಡುತ್ತೇವೆ, ನಮ್ಮದೆ ಆದ ಕಟ್ಟು ಪಾಡುಗಳಿವೆ ನಾವು ಯಾವುದೇ ಪಕ್ಷಕ್ಕೆ ಸೇರಿದವರಲ್ಲ ಇಷ್ಠಾದರೂ ಸಹಾ ಬೀದಿಗಿಳಿದು ಹೋರಾಟ ಮಾಡುವವರ ಅಗತ್ಯ ಇಂದಿನ ದಿನಮಾನದಲ್ಲಿ ಇದೆ ಎಂದ ವೇಣು, ನಾಲ್ಕು ಗೋಡೆಗಳ ಮಧ್ಯ ಸಾಹಿತ್ಯ, ಪತ್ರದ ಮೂಲಕ ಹೋರಾಟ ಮಾಡಿದರೆ ಸರ್ಕಾರಗಳು ಎಚ್ಚೆತ್ತುಕೊಳ್ಳುವುದಿಲ್ಲ, ಆಗ ಮಾತ್ರ ಸ್ಫಂದನೆ ಸಿಗಬಹುದಾಗಿದೆ ಆದರೆ ಇಂದಿನ ಸರ್ಕಾರದಲ್ಲಿ ಸ್ಫಂದನೆ ಸಿಗುತ್ತದೆ ಎಂಬ ನಂಬಿಕೆ ಇಲ್ಲ ಬಂದ್ ಸಹಾ ಶಾಂತಿಯುತವಾದ ಹೋರಾಟವಾಗಬೇಕಿದೆ ಬಲವಂತದ ಬಂದ್ ಆಗಬಾರದು ಜನತೆಯೂ ಭಾಷೆಯ ಮೇಲಿನ ಅಭಿಮಾನವನ್ನು ಸ್ವಯಂ ಪ್ರೇರೀತರಾಗಿ ಬಂದ್ ಮಾಡಬೇಕಿದೆ ಎಂದು ಕರೆ ನೀಡಿದರು.
ಇಂದಿನ ದಿನಮಾನದಲ್ಲಿ ಭಾಷಾಭಿಮಾನ ಕಡಿಮೆಯಾಗುತ್ತಿದೆ, ಕನ್ನಡ ಅಭೀವೃದ್ದಿ ಪ್ರಾಧಿಕಾರ ಕನ್ನಡ ಸಂಸ್ಕøತಿ ಇಲಾಖೆ ಇದೆ ಅದರೆ ಇದರ ಮಂತ್ರಿಗೆ ಕನ್ನಡದ ಬಗ್ಗೆ ಸರಿಯಾಗಿ ಗೊತ್ತಿಲ್ಲ ಸಾಹಿತ್ಯದ ಬಗ್ಗೆಯೂ ಗೊತ್ತಿಲ್ಲ ಇಂತಹವರು ನಮ್ಮನ್ನಾಳುತ್ತಿದ್ದಾರೆ ಇದು ನಮ್ಮ ದುರಂತ ಇಂದಿನ ದಿನಮಾನದಲ್ಲಿ ಎಲ್ಲದಕ್ಕೂ ಸಹಾ ಹೋರಾಟವನ್ನು ಮಾಡುವಂತ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಹೋರಾಟಗಳು ಅವರ ಧರ್ಮ, ಜಾತಿ ಜನಾಂಗದ ಅಭೀವೃದ್ದಿ ಮತ್ತು ಮೀಸಲಾತಿಯನ್ನು ಪಡೆಯುವುದಕ್ಕಾಗಿ ಹೋರಾಟ ಮಾಡುತ್ತಿದ್ದಾರೆ ಸಂಘಟನೆಯಾಗುತ್ತಿದ್ದಾರೆ ಇದು ನಮ್ಮ ದುರಂತವಾಗಿದೆ ಎಂದರು.
ದೇಶ ಜಾತ್ಯಾತೀತವಾಗಿ ಎಲ್ಲ ಜಾತಿ, ಧರ್ಮಗಳು ಇವೆ, ಇದು ಇವುಗಳ ಹೆಸರಿನಲ್ಲಿ ಈ ರೀತಿಯಾದ ಗೊಂದಲವನ್ನು ಸೃಷ್ಟಿ ಮಾಡುವುದರ ಮೂಲಕ ಜಾತಿ, ಧರ್ಮಗಳ ಮಧ್ಯೆ ಗೊಂದಲವನ್ನು ಸೃಷ್ಟಿ ಮಾಡುತ್ತಾ ನಮ್ಮ ರಾಜಕೀಯದ ಬೆಳೆಯನ್ನು ಬೇಯಿಸಿಕೊಳ್ಳುತ್ತಿದ್ದಾರೆ ಎಂದು ನೂಂದು ನುಡಿದ ಸಾಹಿತಿ ವೇಣು, ಈಗ ಲವ್ ಜಿಹಾದ್ ಹಾಗೂ ಗೋಹತ್ಯೆಯನ್ನು ನಿಷೇಧ ಮಾಡುತ್ತೇವೆ ಎನ್ನುತ್ತಿದ್ದಾರೆ ಆದರೆ ಲವ್ ಜಿಹಾದ್ ಎನ್ನುವುದು ಇಂದಿನ ಕಾಲದ್ದಲ್ಲ ರಾಮಾಯಣ, ಮಹಾಭಾರತ ಕಾಲದಿಂದಲೂ ಇದೆ ಆಗ ಅಷ್ಠಾಗಿ ಗೊತ್ತಾಗುತ್ತಿರಲಿ ಈಗ ಎಲ್ಲವೂ ಸಹಾ ಗೊತ್ತಾಗುತ್ತಿದೆ ಜಾತಿ ಎನ್ನುವುದು ಹೆಚ್ಚಾಗಿದೆ ಮತಾಂತರ ಈಗಿನಿಂದಿಲ್ಲ ಹಿಂದಿನ ಕಾಲದಿಂದಲೂ ಸಹಾ ಇದೆ ಅಂಬೇಡ್ಕರ್ ರವರು ಸಹಾ ಬೌದ್ದ ಧರ್ಮಕ್ಕೆ ಮತಾಂತರವಾದರು ಅದೇ ಅಷ್ಟು ಪ್ರಮಾಣದಲ್ಲಿ ಜಾತಿ ಇರಬೇಕಾದರೇ ಈಗ ಇನ್ನಷ್ಟು ಜಾಸ್ತಿಯಾಗಿದೆ ಎಂದರು.
ಎಲ್ಲಾ ಜಾತಿಯ ಮಠಗಳ ಮಠಾಧೀಶರು ಅವರ ಮೀಸಲಾತಿಗಾಗಿ ಹೋರಾಟವನ್ನು ಮಾಡುತ್ತಿದ್ಧಾರೆ ಹೊರೆತು ಜನತೆಯ ನಮಸ್ಯೆಯ ಬಗ್ಗೆ ಯಾರು ಸಹಾ ಹೋರಾಟವಾಗಲೀ. ಪ್ರತಿಭಟನೆಯಾಗಲೀ ಮಾಡಿಲ್ಲ, ಕನಕ, ವಾಲ್ಮೀಕಿ, ಬುದ್ದ, ಬಸವÀರಂತ ಮಹಾನ್ ನಾಯಕರನ್ನು ಒಂದು ಜಾತಿಗೆ ಸೀಮಿತ ಮಾಡುವುದು ಸರಿಯಲ್ಲ ಅವರು ನೀಡಿದ ಸಂದೇಶಗಳು ಎಲ್ಲರಿಗೂ ಅನ್ವಯವಾಗುವಂತೆ ಇವೆ ಆದರೆ ಅದನ್ನು ಪಾಲಿಸುವವರು ಮಾತ್ರ ಜಾತಿ, ಜಾತಿ ಎಂದು ಹೇಳುತ್ತಿದ್ದಾರೆ. ಪ್ರೀತಿಸಿ ಮದುವೆಯಾದ ಹಲವಾರು ಪ್ರಕರಣಗಳು ಸುಖವಾಗಿಲ್ಲ ಅದರಲ್ಲಿಯೂ ಸಹಾ ಬಿರುಕುಗಳು ಇವೆ ಗೋಹತ್ಯೆ ನಿಷೇಧದ ಬಗ್ಗೆ ಮಾತನಾಡುವವರೇ ಹೆಚ್ಚಾಗಿ ಗೋ ಮಾರಾಟ ಮಾಡುತ್ತಿದ್ದಾರೆ ಅದರಲ್ಲಿಯೂ ಜೈನ್ ಸಮುದಾಯದವರೇ ಈ ರೀತಿಯಾದ ಕೆಲಸ ಮಾಡುತ್ತಿದ್ದಾರೆ ಗೋವಿನ ಬಗ್ಗೆ ತಿಳಿಯದೇ ಇರುವವರು ಅದರ ಕೆಲಸವನ್ನು ಮಾಡಿದವರಲ್ಲ, ಉತ್ತರ ಪ್ರದೇಶದಲ್ಲಿ ಇರುವ ಸರ್ಕಾರದ ಪಕ್ಷದವರೇ ಹೆಚ್ಚಾಗಿ ಮಾರಾಟ ಮಾಡುತ್ತಿದ್ದಾರೆ. ಎಂದು ವಿಷಾಧಿಸಿ ಪ್ರಶ್ನೆ ಮಾಡುವ ಯುವಜನತೆ ಇದರ ಬಗ್ಗೆ ಮಾತನಾಡುತ್ತಿಲ್ಲ ಬದುಕಿನ ಬಗ್ಗೆಯೂ ಸಹಾ ಹೋರಾಟವನ್ನು ಮಾಡಬೇಕಿದೆ, ಜಾತಿ, ಧರ್ಮಗಳು ತೊಲಗಬೇಕಿದೆ ಇದರ ಬಗ್ಗೆ ಹೋರಾಟ ಅನಿವಾರ್ಯವಾಗಿದೆ ಎಂದರು.
ವೀರ ಸಂಗೊಳ್ಳಿ ರಾಯಣ್ಣ ಸೇನೆಯ ಅಧ್ಯಕ್ಷ ಟಿ.ಆನಂದ್ ಪದಾಧಿಕಾರಿಗಳಾದ ಮಹಾಂತೇಶ್ ಕುಮಾರ್, ರಾಘವೇಂದ್ರ,ಪ್ರಕಾಶ್, ಮಾರುತಿ, ಕಿರಣ್,ಮೋಹನ್ ಕುಮಾರ್, ಚೇತನ ಸೇರಿದಂತೆ ಇತರರು ಭಾಗವಹಿಸಿದ್ದರು.