ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ನಿಯೋಗ ಮುಖ್ಯಮಂತ್ರಿಗೆ ಮನವಿ

ನಿತ್ಯವಾಣಿ, ಚಿತ್ರದುರ್ಗ, (ಫೆ,25) : ಬಜೆಟ್ ತಯಾರಿ ಪೂರ್ವ ಸಭೆಯಲ್ಲಿ ನಮ್ಮ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರು ಮತ್ತು ಕೇಂದ್ರ ಸಂಘದ ನಿಯೋಗದೊಂದಿಗೆ ರಾಜ್ಯಾಧ್ಯಕ್ಷರು ಕೇಂದ್ರ ಮಾದರಿ ವೇತನ ಜಾರಿಗೊಳಿಸಲು ಮತ್ತು nps ರದ್ದುಪಡಿಸಿ ops ಮರು ಜಾರಿ ಹಾಗೂ ಇನ್ನಿತರ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಸಲ್ಲಿಸಿದ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳಿಂದ ದೊರಕಿರುವ ತಾತ್ವಿಕ ಒಪ್ಪಿಗೆ ಇವುಗಳು ಬರುವ ಬಡ್ಜೆಟ್ ಅಧಿವೇಶನದಲ್ಲಿ ಈಡೇರಲಿ ಎಂದು ಆಶಿಸೋಣ ಅತ್ಯಂತ ಚಾಣಾಕ್ಷತೆಯಿಂದ ಪ್ರಸ್ತಾವನೆ ಸಿದ್ಧಪಡಿಸಿದ ರಾಜ್ಯಾಧ್ಯಕ್ಷರಾದ ಸಿ ಎಸ್ ಷಡಕ್ಷರಿರವರು ಮತ್ತು ಕೇಂದ್ರ ಸಂಘದ ಪದಾಧಿಕಾರಿಗಳಿಗೆ ಚಿತ್ರದುರ್ಗ ಜಿಲ್ಲಾ ಸರಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಕೆ ಮಂಜುನಾಥ್, ಹಾಗೂ ಪದಾಧಿಕಾರಿಗಳು ಜಿಲ್ಲೆಯ ಎಲ್ಲಾ ಸರ್ಕಾರಿ ನೌಕರರು ಅನಂತ ಅನಂತ ಧನ್ಯವಾದಗಳನ್ನ ಪತ್ರಿಕಾ ಪ್ರಕಟಣೆ ಮುಖಾಂತರ ತಿಳಿಸಿದ್ದಾರೆ