ಚಿತ್ರದುರ್ಗ ಜಿಲ್ಲಾ ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಂದ ಶಾಸಕ ತಿಪ್ಪಾರೆಡ್ಡಿರವರಿಗೆ ಮನವಿ

 

ನಿತ್ಕವಾಣಿ, ಚಿತ್ರದುರ್ಗ,  ಫೆ.19 : ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯದಾದ್ಯಂತ 224 ಕ್ಷೇತ್ರಗಳ ಶಾಸಕರು ಸಂಸದರು ರಾಜ್ಯ ಸಭೆ ಸದಸ್ಯರು, ಮಾನ್ಯ ಮುಖ್ಯಮಂತ್ರಿಗಳಿಗೆ ಸರ್ಕಾರಿ ನೌಕರರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಶಿಫಾರಸು ಪತ್ರಗಳನ್ನು ಈಗಾಗಲೆ ನೀಡಿದ್ದಾರೆ. ಅದೇ ರೀತಿ ಚಿತ್ರದುರ್ಗದ  ಶಾಸಕರಾದ  ಜಿ ಹೆಚ್ ತಿಪ್ಪಾರೆಡ್ಡಿ ಅವರಿಗೆ ಮನವಿ ಸಲ್ಲಿಸಲಾಗಿದೆ. ಶಾಸಕರು ಕೂಡ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿ ನಾನು ಕೂಡ ನೌಕರರೊಂದಿಗೆ ನಿಮ್ಮೊಂದಿಗೆ ಇದ್ದೇನೆ, ನಿಮ್ಮ ಬೇಡಿಕೆಗಳ ಈಡೇರಿಕೆಗಾಗಿ ಮುಖ್ಯಮಂತ್ರಿ ಗಳೊಂದಿಗೆ ಮಾತನಾಡುವುದಾಗಿ ಭರವಸೆ ನೀಡಿದ್ದಾರೆ. ನೌಕರರ ಸಮಸ್ಯೆಗಳ ವಿವರಗಳನ್ನು ಮನವಿ ಪತ್ರದಲ್ಲಿ ಮಂಡಿಸಲಾಗಿದೆ..
 ಸದರಿ ವಿಚಾರಗಳನ್ನು  ರಾಜ್ಯ ಸರ್ಕಾರಕ್ಕೆ ಮತ್ತು ಮುಖ್ಯಮಂತ್ರಿಗಳಿಗೆ ಒತ್ತಡ ಹಾಕಿ ನೌಕರರ ನ್ಯಾಯದ ಬೇಡಿಕೆಗಳಿಗೆ ಸಹಕರಿಸಬೇಕಾಗಿ ಮನವಿ.

ಅದರಲ್ಲೂ ವಿಶೇಷವಾಗಿ ಚಿತ್ರದುರ್ಗದ 28000 ನೌಕರರ ಬಹುದಿನದ ಬೇಡಿಕೆ ಸರ್ಕಾರಿ ನೌಕರರ ಸಮುದಾಯ ಭವನ ನಿರ್ಮಾಣಕ್ಕಾಗಿ ಜಮೀನು ಮಂಜೂರು ಮಾಡುವಂತೆ  ಶಾಸಕರಿಗೆ ಮನವಿ ಮಾಡಲಾಗಿದೆ. ಮನವಿಗೆ ಸ್ಪಂದಿಸಿದ ಶಾಸಕರು ಜಿಲ್ಲಾಧಿಕಾರಿಗಳಿಗೆ ಮಾತನಾಡಿ ಕೊಡಿಸುವುದಾಗಿ ಭರವಸೆ ನೀಡಿದರು.

 

Leave a Reply

Your email address will not be published.