2020ರ ನಾಡ ಪ್ರಭು ಕೆಂಪೇಗೌಡ ಜಯಂತಿಗೆ ಮುಹೂರ್ತ ಫಿಕ್ಸ್

ಬೆಂಗಳೂರು:- ಕೊರೊನಾ ವೈರಸ್ ಹಿನ್ನೆಲೆ ಮುಂದೂಡಿಕೆಯಾಗಿದ್ದ ಕೆಂಪೇಗೌಡ ಜಯಂತಿ ಆಚರಣೆಗೆ ಮುಹೂರ್ತ ಫಿಕ್ಸ್ ಆಗಿದೆ.

ಪ್ರತಿ ವರ್ಷ ಏಪ್ರಿಲ್‌ನಲ್ಲಿ ನಡೆಸುವ ಕಾರ್ಯಕ್ರಮ ಕೊರೊನಾ ಸೋಂಕಿನಿಂದ ಕಾರ್ಯಕ್ರಮವನ್ನ ಮುಂದೂಡಲಾಗಿತ್ತು. ಇದೀಗ ಸೆಪ್ಟೆಂಬರ್ 2 ರಂದು ಸರಳ ರೀತಿಯಲ್ಲಿ ಕೆಂಪೇಗೌಡ ಜಯಂತಿ ಆಚರಣೆ ನಡೆಸಲು ತೀರ್ಮಾನ ಮಾಡಲಾಗಿದೆ.

ಇನ್ನು ಪ್ರತಿ ವರ್ಷ ಎಲ್ಲಾ ವಲಯದ ಸಾಧಕರಿಗೆ ಪ್ರಶಸ್ತಿ ನೀಡಲಾಗುತ್ತಿತ್ತು, ಆದರೆ ಈ ಬಾರಿ 25 ಪುರುಷ ಕೊರೊನಾ ವಾರಿಯರ್ಸ್‌ , 25 ಮಹಿಳಾ ಕೊರೊನಾ‌ ವಾರಿಯರ್ಸ್‌ ಒಟ್ಟು 50 ಜನಕ್ಕೆ ಮಾತ್ರ ಪ್ರಶಸ್ತಿ ನೀಡಲು ಬಿಬಿಎಂಪಿ ತೀರ್ಮಾನ ಮಾಡಿದೆ.

Leave a Reply

Your email address will not be published.