ಅನಂತ್ ನಾಗ್ ಪಾತ್ರಕ್ಕೆ ಪ್ರಕಾಶ್ ರಾಜ್ ತಂದಿಲ್ಲ : ಪ್ರಶಾಂತ್ ನೀಲ್

ಬೆಂಗಳೂರು : ಸ್ಯಾಂಡಲ್‌ವುಡ್‌ನ ಬಹು ನಿರೀಕ್ಷಿತ ಸಿನಿಮಾ ಕೆ.ಜಿ.ಎಫ್ ಚಾಪ್ಟರ್ 2 ಸಿನಿಮಾ ಇದೀಗ ಕಾಂಟ್ರೊವರ್ಸಿಗೆ ದಾರಿ ಮಾಡಿಕೊಟ್ಟಿದೆ.‌ನಿನ್ನೆಯಷ್ಟೇ ಪ್ರಕಾಶ್ ರಾಜ್ ಅವರ ಫೋಟೊ ರಿವೀಲ್ ಆಗಿದ್ದು, ಅನಂತ್ ನಾಗ್ ಪಾತ್ರಕ್ಕೆ ಪ್ರಕಾಶ್ ರೈ ಅವರನ್ನ ಕರೆತರಲಾಗಿದೆ ಎನ್ನುವ ಸುದ್ದಿ ಹರಿದಾಡಿತ್ತು.

ಸಾಮಾಜಿಕ ಜಾಲತಾಣದಲ್ಲಿ ಬಾಯ್ಕಾಟ್ ಕೆಜಿಎಫ್ ಸಿನಿಮಾ ಟ್ರೆಂಡ್ ಆಗುತ್ತಿದ್ದಂತೆ ಎಚ್ಚೆತ್ತ ಪ್ರಶಾಂತ್ ನೀಲ್, ಇದೀಗ ಪ್ರಕಾಶ್ ರಾಜ್ ಪಾತ್ರದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಇದು ಹೊಸ ಪಾತ್ರ, ಅನಂತ್​ ನಾಗ್​​ ಅವರ ಪಾತ್ರಕ್ಕೆ ಇವರನ್ನು ತಂದಿಲ್ಲ ಎಂದು ನೀಲ್​ ಸ್ಪಷ್ಟಪಡಿಸಿದ್ದಾರೆ.‌ಆದರೂ ಕೆ.ಜೆ.ಎಫ್​ 2ಗೆ ಪ್ರಕಾಶ್​ ರೈ ಅವರನ್ನು ತೆಗೆದುಕೊಂಡಿರುವುದು ಸಾಕಷ್ಟು ಮಂದಿಯಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ

Leave a Reply

Your email address will not be published.