ಬೆಂಗಳೂರು: ಬಿಗ್‌ಬಾಸ್ ಮತ್ತೆ ನಿಮ್ಮ ಮನೆಗೆ ಬರಲು ರೆಡಿಯಾಗಿದ್ದಾನೆ. ಕಲರ್ಸ್ ಕನ್ನಡ ವಾಹಿನಿಯ ಈ ಜನಪ್ರಿಯ ಕಾರ್ಯಕ್ರಮದ ಎಂಟನೇ ಸೀಸನ್ ಪ್ರಸಾರವಾಗಲು ಸಿದ್ಧವಾಗಿದೆ. ಇದರ ಪ್ರಸಾರ ಯಾವಾಗ ಆರಂಭವಾಗುತ್ತದೆ ಎಂಬುದನ್ನು ಸ್ವತಃ ನಟ ಸುದೀಪ್ ಅವರೇ ಹೊಸ ಪ್ರೊಮೋ ಮೂಲಕ ಬಹಿರಂಗಪಡಿಸಿದ್ದಾರೆ.
ಈಗಾಗಲೇ ಕಾರ್ಯಕ್ರಮದ ಮೊದಲ ಪ್ರೊಮೋ ಬಿಡುಗಡೆಯಾಗಿ ಸಾಕಷ್ಟು ಜನಪ್ರಿಯವಾಗಿದೆ. ಇದೀಗ ಎರಡನೇ ಪ್ರೊಮೋ ಕೂಡ ಸೋಮವಾರ ಬಿಡುಗಡೆಯಾಗಿದ್ದು, ಬಿಗ್‌ಬಾಸ್ ಅಭಿಮಾನಿಗಳಲ್ಲಿ ಕುತೂಹಲ ಗರಿಗೆದರಿದೆ. ಇದರಲ್ಲಿ ಸುದೀಪ್ ಜೋಯಿಸರಾಗಿ ಕಾಣಿಸಿಕೊಂಡಿರುವುದು ವಿಶೇಷವಾಗಿದೆ. ಜೋಯಿಸ ಸುದೀಪ್ ಹತ್ತಿರ ನಟ ಸುದೀಪ್ ಬಂದು ”ಬಿಗ್‌ಬಾಸ್ ಯಾವಾಗ ಶುರುವಾಗುತ್ತದೆ” ಎಂದು ಕೇಳುತ್ತಾರೆ. ಸಾಕಷ್ಟು ಲೆಕ್ಕಾಚಾರ ಹಾಕಿದ ನಂತರ ಜೋಯಿಸರು, ”ಬಿಗ್‌ಬಾಸ್-8 ಸೀಸನ್ ಫೆಬ್ರವರಿ 28ರಂದು ಆರಂಭವಾಗುತ್ತದೆ” ಎಂದು ‘ಮುಹೂರ್ತ’ ನಿಗದಿಪಡಿಸುತ್ತಾರೆಫೆ. 28ರಂದು ಸಂಜೆ 6 ಗಂಟೆಗೆ ಬಿಗ್‌ಬಾಸ್ ಪ್ರಾರಂಭವಾಲಿದ್ದು, ಈ ಸೀಸನ್‌ನಲ್ಲಿ ಭಾಗವಹಿಸುವ ಸ್ಪರ್ಧಿಗಳನ್ನು ಅಧಿಕೃತವಾಗಿ ಪರಿಚಯಿಸಲಾಗುತ್ತದೆ. ಆ ನಂತರ ಸೋಮವಾರದಿಂದ ಶುಕ್ರವಾರ ಪ್ರತಿ ರಾತ್ರಿ 9ಕ್ಕೆ ಈ ಕಾರ್ಯಕ್ರಮ ಪ್ರಸಾರವಾಗಲಿದೆ.