2000 ಅಡಿಯ ಕಿಚ್ಚನ ವರ್ಚುವಲ್ ಕಟೌಟ್

ಸ್ಯಾಂಡಲ್ ವುಡ್ ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಫ್ಯಾಂಟಮ್ ಸಿನಿಮಾದ ಹೊಸ ಹೆಸರಾದ ‘ವಿಕ್ರಾಂತ್ ರೋಣ’ ಶೀರ್ಷಿಕೆಯ ಲೋಗೋದೊಂದಿಗೆ 2000 ಅಡಿಯ ಕಿಚ್ಚನ ವರ್ಚುವಲ್ ಕಟೌಟ್ ಪ್ರಪಂಚದ ಅತೀ ಎತ್ತರದ ಕಟ್ಟಡವಾದ ಬುರ್ಜ್ ಖಲೀಫಾ ದ ಮೇಲೆ ಅನಾವರಣಗೊಂಡಿದೆ.

ರವಿವಾರ ರಾತ್ರಿ 9:30ರ ಸುಮಾರಿಗೆ ಕಟೌಟ್ ಬಿಡುಗಡೆಗೊಂಡಿದ್ದು, ಆ ಮೂಲಕ ಇಷ್ಟು ಎತ್ತರದ ಕಟೌಟ್ ನಲ್ಲಿ ಕಾಣಿಸಿಕೊಂಡ ಸ್ಯಾಂಡಲ್ ವುಡ್ ನ ಮೊದಲ ನಟ ಎಂಬ ಖ್ಯಾತಿಗೆ ಕಲಾಕೇಸರಿ ಸುದೀಪ್ ಪಾತ್ರವಾಗಿದ್ದಾರೆ.

ಕಳೆದ ಜನವರಿ 21 ರಂದು ಚಿತ್ರಕ್ಕೆ ಸಂಬಂಧಿಸಿದಂತೆ ಬಿಗ್ ಅಪ್ ಡೇಟ್ ನೀಡುತ್ತೇವೆ ಎಂದಿದ್ದ ನಿರ್ದೇಶಕ ಅನೂಪ್ ಬಂಡಾರಿ, ಆ ದಿನದಂದು ಚಿತ್ರಕ್ಕೆ ಹಿಂದೆ ನೀಡಲಾಗಿದ್ದ ಫ್ಯಾಂಟಮ್ ಎಂಬ ಶೀರ್ಷಿಕೆ ಯನ್ನು ಚಿತ್ರತಂಡ ವಿಕ್ರಾಂತ್ ರೋಣ ಎಂದು ಬದಲಾಯಿಸಿದ್ದು, ಹೊಸ ಶೀರ್ಷಿಕೆ ಯನ್ನು ಒಳಗೊಂಡಂತೆ ಕಿಚ್ಚನ ಕಟೌಟ್ ಅನ್ನು ಪ್ರಪಂಚದ ಅತೀ ಎತ್ತರದ ಕಟ್ಟಡವಾದ ಬುರ್ಜ್ ಖಲೀಫಾದಲ್ಲಿ ಬಿಡುಗಡೆಗೊಳಿಸಲಾಗುವುದು ಎಂದಿದ್ದರು.

ನಿರ್ದೇಶಕ ಅನೂಪ್ ಭಂಡಾರಿ ಆಯಕ್ಷನ್ ಕಟ್ ನಲ್ಲಿ ಮೂಡಿಬರುತ್ತಿರುವ ಈ ಸಿನಿಮಾವನ್ನು ಜಾಕ್ ಮಂಜು ಮತ್ತು ಅಲಂಕಾರ್ ಪಾಂಡಿಯನ್ ನಿರ್ಮಾಣ ಮಾಡುತ್ತಿದ್ದಾರೆ. ನಿರೂಪ್ ಭಂಡಾರಿ, ನೀತಾ ಅಶೋಕ್ ಪ್ರಮುಖ ಪಾತ್ರದಲ್ಲಿ ತೆರೆ ಮೇಲೆ ಕಾಣಿಸಿಕೊಳ್ಳಲಿರುವ ಈ ಸಿನಿಮಾದಲ್ಲಿ ಅಜನೀಶ್ ಲೋಕನಾಥ್ ಸಂಗೀತವಿರಲಿದೆ ಎನ್ನಲಾಗಿದೆ.

Leave a Reply

Your email address will not be published.