ವೀರ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಸರಳ ಆಚರಣೆ, ಕಪ್ಪು ಬಟ್ಟೆ ಪ್ರದರ್ಶನ

      ನಿತ್ಯವಾಣಿ, ಚಿತ್ರದುರ್ಗ, ನ.23 :   ಅಖಿಲ ಭಾರತ ಲಿಂಗಾಯತ ಪಂಚಮಸಾಲಿ  ಮಹಾಸಭಾ ಕೂಡಲ ಸಂಗಮ ಪೀಠ ಮತ್ತು ಹರಿಹರ ಪೀಠ ಹಾಗೂ ಚಿತ್ರದುರ್ಗ ಜಿಲ್ಲಾ ಆಡಳಿತ ಸಹಯೋಗದೊಂದಿಗೆ ಕಿತ್ತೂರು ರಾಣಿ ಚೆನ್ನಮ್ಮನವರ   244 ನೇ ಜಯಂತಿ ಯ ವಿಜಯೋತ್ಸವವು ವಿಧಾನಸಭೆ ಡೆಪ್ಯೂಟಿ ಸ್ಪೀಕರ್ ಆನಂದ್ ಮಾಮನಿ ಅವರು ಮರಣ ಹೊಂದಿದ   ಸಲುವಾಗಿ ಸರ್ಕಾರದ ಆದೇಶದ ಮೇರೆಗೆ ಸರಳ ರೀತಿಯಲ್ಲಿ            ವೀಡಿಯೋಸ್ 

                                                                          2A ಮೀಸಲಾತಿಯಾಗಿ ಕಪ್ಪು ಬಟ್ಟೆ ಪ್ರದರ್ಶನ                                                                       

         

ಇಂದು   ಭಾನುವಾರ  ಬೆಳಗ್ಗೆ 10 ಗಂಟೆಗೆ ಸರಿಯಾಗಿ ಕಿತ್ತೂರು ರಾಣಿ ಚೆನ್ನಮ್ಮನವರ ಭಾವಚಿತ್ರ  ಮೆರವಣಿಗೆ   ಶ್ರೀ ನೀಲಕಂಠೇಶ್ವರ ಸ್ವಾಮಿ  ದೇವಸ್ಥಾನದಿಂದ ತರಾಸು ರಂಗಮಂದಿರದವರೆಗೆ  ಸರಳ ಮೆರವಣಿಗೆ ನಡೆಯಿತು. ಈ ಸಮಯದಲ್ಲಿ ವಿಶೇಷವಾಗಿ 2a ಮೀಸಲಾತಿಗಾಗಿ ಕಪ್ಪು ಕೈ ಪಟ್ಟಿ ಧರಿಸಿ ಮೌನ ಮೆರವಣಿಗೆ ನಡೆಸಿ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟರು  , ನಂತರ   ಸಮಯ 11.30 ಕ್ಕೆ   ತರಾಸು ರಂಗಮಂದಿರದಲ್ಲಿ ಜಯಂತಿಯ ಸ್ಟೇಜ್ ಕಾರ್ಯಕ್ರಮ ರದ್ದುಗೊಂಡು ಭಾವಚಿತ್ರಕ್ಕೆ ಜಿಲ್ಲಾ ಆಡಳಿತ ಪರವಾಗಿ ಅಪ್ಪರ ಜಿಲ್ಲಾಧಿಕಾರಿಗಳು ಪುಷ್ಪ ನಮನ ಸಲ್ಲಿಸಿದರು, ಈ ಸಂದರ್ಭದಲ್ಲಿ    ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾ ಕೂಡಲಸಂಗಮಪೀಠ ಹಾಗೂ ಹರಿಹರ ಪೀಠದ ಜಿಲ್ಲಾಧ್ಯಕ್ಷರಾದ   ಕೆಸಿ ಗಂಗಾಧರಪ್ಪ,  ಪ್ರಕಾಶ್ ಹಂಪಯ್ಯನಮಾಳಿಗೆ, ಎಸ್ಎಂಎಲ್ ತಿಪ್ಪೇಸ್ವಾಮಿ, ಕೆಇಬಿ ಷಣ್ಮುಖಪ್ಪ, ರುದ್ರಾಣಿ ಗಂಗಾಧರ್, ಮೋಕ್ಷ ರುದ್ರಸ್ವಾಮಿ, ವೀರಶೈವ ಲಿಂಗಾಯಿತ ಮಹಾಸಭಾ  ಕಾರ್ಯದರ್ಶಿ ಜಿ ಎನ್  ಮಹೇಶ್, ನಾಗರಾಜ ಸಂಗಮ್  ವಕೀಲರಾದ ಉಮೇಶ್ ಹಾಗೂ ಯುವ ಘಟಕ ಅಧ್ಯಕ್ಷರಾದ ಎಚ್ ಎಂ ಮಂಜುನಾಥ್,ತಿಪ್ಪೇಸ್ವಾಮಿ ಗಾರೆಹಟ್ಟಿ, ದೊಡ್ಡ ಸಿದ್ದವನಹಳ್ಳಿ ಪರಮೇಶ್, ವಿಶ್ವನಾಥ್, ಮಹಾಸಭಾ ಯುವ  ಘಟಕದ   ಅಧ್ಯಕ್ಷ ಕಾರ್ತಿಕ್ ಬಿ ವಿ ಕೆ ಎಸ್, ಪ್ರಶಾಂತ್, ಮನು ಇನ್ನು ಅನೇಕ ಮುಖ್ಯಸ್ಥರು ಹಾಗೂ ಸಮಾಜದ ಬಾಂಧವರು ಭಾಗವಹಿಸಿದ್ದರು

Leave a Reply

Your email address will not be published.