ಸಾರಿಗೆ ನೌಕರರು ಬಂದ್ ಯಶಸ್ವಿಯಾಗಿದ್ದರಿಂದ ಮೊದಲ ದಿನ ಸಾರಿಗೆ ಇಲಾಖೆಗೆ 17 ಕೋಟಿ ರೂ. ನಷ್ಟ ಉಂಟಾಗಿದೆ. 9ನೇ ವೇತನ ಆಯೋಗ ಜಾರಿಗೆ ಪಟ್ಟು ಹಿಡಿದು ಸಾರಿಗೆ ನೌಕರರು ಬುಧವಾರದಿಂದ ಅನಿರ್ದಿಷ್ಟಾವಧಿಗೆ ಪ್ರತಿಭಟನೆ ಹಮ್ಮಿಕೊಂಡಿದ್ದು, ಮೊದಲ ದಿನವಾದ ಬುಧವಾರ ಸಾರಿಗೆ ಸಂಸ್ಥೆಯ 4 ನಿಗಮಗಳಿಂದ 17 ಕೋಟಿ ರೂ. ನಷ್ಟ ಸಂಭವಿಸಿದೆ.
ಕೆಎಸ್ಸಾರ್ಟಿಸಿಗೆ 7 ಕೋಟಿ ರೂ., ಬಿಎಂಟಿಸಿಗೆ 3 ಕೋಟಿ ರೂ. ವಾಯುವ್ಯ ವಿಭಾಗಕ್ಕೆ 3.5 ಕೋಟಿ ರೂ. ಹಾಗೂ ಈಶಾನ್ಯ ವಿಭಾಗಕ್ಕೆ 3.5 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಇಲಾಖೆ ವಿವರ ನೀಡಿದೆ.