ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ಸಾರ್ವಜನಿಕರ ಅನುಕೂಲಕ್ಕಾಗಿ ಮದುವೆ, ಪ್ರವಾಸ ಇನ್ನಿತರೆ ಕಾರಣಗಳಿಗಾಗಿ ಎಲ್ಲಾ ವರ್ಗದ ಬಸ್ಸುಗಳನ್ನು ಸಾಂದರ್ಭಿಕ ಒಪ್ಪಂದದ ಮೇಲೆ ಒದಗಿಸುತ್ತಿದೆ. ಇದೀಗ ಪ್ರೀಮಿಯಂ ಬಸ್ಸುಗಳನ್ನು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಡೆದುಕೊಳ್ಳಲು ಸಾರ್ವಜನಿಕರನ್ನು ಉತ್ತೇಜಿಸುವ ಸಲುವಾಗಿ ನಿಗಮದ ಬಸ್ಸುಗಳ ಒಪ್ಪಂದದ ದರಗಳನ್ನು ದಿನಾಂಕ 06-01-2021ರಿಂದ ಇಳಿಕೆ ಮಾಡಿದೆ. ಈ ಮೂಲಕ ಕೆ ಎಸ್ ಆರ್ ಟಿ ಸಿ ಬಸ್ ಗಳನ್ನು ಒಪ್ಪಂದದ ಮೇರೆಗೆ ಕರೆದೊಯ್ಯುವವರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದೆ.
ಈ ಕುರಿತಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಮಗ ಪರಿತ್ರಿಕಾ ಪ್ರಕಟಣೆ ಹೊರಡಿಸಿತ್ತು, ಐರಾವತ ಕ್ಲಬ್ ಕ್ಲಾಸ್ (ಮಲ್ಟಿ ಆಕ್ಸೆಲ್) (ಬಿಎಸ್-3) 47/49 ಆಸನಗಳ ಬಸ್ಸಿನ ದರಗಳನ್ನು ಪ್ರತಿ ಕಿಲೋಮೀಟರ್ ಗೆ ರೂ.5 ರಿಂದ ರೂ.7ರವರೆಗೆ ಇಳಿಕೆ ಮಾಡಲಾಗಿದೆ. ದಿನಕ್ಕೆ ಕನಿಷ್ಠ 500 ರಿಂದ 400 ಕಿಲೋಮೀಟರ್ ಗೆ ನಿಗದಿ ಪಡಿಸಿದೆ.
ಇನ್ನೂ ಐರಾವತ ಕ್ಲಬ್ ಕ್ಲಾಸ್ (ಮಲ್ಟಿ ಆಕ್ಸಲ್) (ಬಿಎಸ್-4) 47 ಆಸನಗಳ ಬಸ್ಸಿನ ಸಾಂದರ್ಭಿಕ ಒಪ್ಪಂದದ ದರಗಳನ್ನು ರೂ.5 ರಿಂದ ರೂ.10ರವರೆಗೆ ಇಳಿಕೆ ಮಾಡಲಾಗಿರುತ್ತದೆ.
ಐರಾವತ ಕ್ಲಬ್ ಕ್ಲಾಸ್ (ಮಲ್ಟಿ ಆಕ್ಸಲ್ ) (14.5 ಮೀಟರ್ ಚಾಸಿಸ್) 51 ಆಸನಗಳ ಬಸ್ಸಿನ ಸಾಂದರ್ಭಿಕ ಒಪ್ಪಂದದ ದರಗಳನ್ನು ಪ್ರತಿ ಕಿಲೋಮೀಟರ್ ಗೆ ರೂ.10ರಂತೆ ಇಳಿಕೆ ಮಾಡಲಾಗಿರುತ್ತದೆ. 32 ಆಸನಗಳ ಎಸಿ ಸ್ಲೀಪರ್ ಬಸ್ಸಿನ ಸಾಂದರ್ಭಿಕ ಒಪ್ಪಂದದ ದರಗಳನ್ನು ಪ್ರತಿ ಕಿಲೋಮೀಟರ್ ಗೆ ರೂ.5 ರಿಂದ 6 ರವರೆಗೆ ಇಳಿಕೆ ಮಾಡಲಾಗಿರುತ್ತದೆ. 40 ಆಸನಗಳ ಪ್ಲೈ ಬಸ್ಸಿನ ಸಾಂದರ್ಭಿಕ ಒಪ್ಪಂದದ ದರಗಳನ್ನು ಪ್ರತಿ ಕಿಲೋಮೀಟರ್ ರೂ.10 ರಿಂದ ರೂ.16ರವರೆಗೆ ಇಳಿಕೆ ಮಾಡಲಾಗಿದೆ.