ಕಾರ್ಮಿಕರಿಗೆ ಹೊಸ ವೇತನ ಮಸೂದೆ ಜಾರಿಗೆ

ಹೊಸ ವೇತನ ಸಂಹಿತೆಯು ದೈನಂದಿನ ಕೆಲಸದ ಅವಧಿಯನ್ನ 12 ಗಂಟೆಗಳಿಗೆ ಸೀಮಿತಗೊಳಿಸಿದೆ ಎಂಬ ಸುದ್ದಿಯ ನಡುವೆಯೇ, ಕಾರ್ಮಿಕರ ಕೆಲಸದ ಅವಧಿಯನ್ನ 8 ಗಂಟೆಗಳಿಗೆ ಸೀಮಿತಗೊಳಿಸಲಾಗಿದ್ದು, ಇನ್ಮುಂದೆ ಇದಕ್ಕಿಂತ ಹೆಚ್ಚು ಕಾರ್ಯ ನಿರ್ವಹಿಸಿದ್ರೆ ಓವರ್ ಟೈಮ್ ಎಂದು ಪರಿಗಣಿಸಲಾಗುವುದು ಎಂದು ವರದಿಯಾಗಿದೆ.

ಹೊಸ ವೇತನ ನಿಯಮಗಳ ಪ್ರಕಾರ, ಸಾಮಾನ್ಯ ಕೆಲಸದ ಗಂಟೆಯ ನಂತರ 15 ನಿಮಿಷದಿಂದ 30 ನಿಮಿಷಗಳವರೆಗೆ ಕೆಲಸ ಮಾಡುವ ಯಾವುದೇ ಉದ್ಯೋಗಿಯನ್ನ ಅರ್ಧ ಗಂಟೆ ಓವರ್ ಟೈಮ್ ಎಂದು ಪರಿಗಣಿಸಲಾಗುತ್ತದೆ. ಅಂದರೆ, ಕೆಲಸದ ಅವಧಿ ಮುಗಿದ ನಂತರ, ಯಾವುದೇ ಉದ್ಯೋಗಿಯು 15 ನಿಮಿಷಗಳಿಗಿಂತ ಹೆಚ್ಚು ಸಮಯ ನೀಡಿದರೆ, ಆತನಿಗೆ/ಆಕೆಗೆ 30 ನಿಮಿಷಗಳ ಓವರ್ ಟೈಮ್ ನೀಡಲಾಗುತ್ತದೆ.

ಇಂಗ್ಲಿಷ್‌ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯ ಪ್ರಕಾರ, ಸರ್ಕಾರಿ ಅಧಿಕಾರಿಗಳು ದೈನಂದಿನ ಕೆಲಸದ ಸಮಯವನ್ನ 8 ಗಂಟೆ ಮಾತ್ರ ಇಟ್ಟುಕೊಳ್ಳುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ. ಆದರೆ ಓವರ್ ಟೈಮ್ʼನಲ್ಲಿ ಸಂಬಳವು ದೈನಂದಿನ ಸಂಬಳದ ಕನಿಷ್ಠ ಎರಡು ಪಟ್ಟು ಇರಲಿದೆ.

ಕಳೆದ ವರ್ಷ ಆಗಸ್ಟ್ʼನಲ್ಲಿ ರಾಜ್ಯಸಭೆ ವೇತನ ಮಸೂದೆ 2019ನ್ನ ಅಂಗೀಕರಿಸಿದ್ದರೆ, ಲೋಕಸಭೆ 2019ರ ಜುಲೈನಲ್ಲಿ ಮಸೂದೆಯನ್ನ ಅಂಗೀಕರಿಸಿತ್ತು ಎಂಬುದನ್ನ ಇಲ್ಲಿ ಸ್ಮರಿಸಬಹುದು. ರಾಷ್ಟ್ರಪತಿಗಳ ಒಪ್ಪಿಗೆಯ ನಂತರ ಮಸೂದೆಯು ಕಾಯಿದೆಯಾಗುತ್ತೆ.

ವೇತನ ಮಸೂದೆ, 1936ರ ವೇತನ ಪಾವತಿ ಕಾಯಿದೆ, ಸ್ವಾತಂತ್ರ್ಯ ಪೂರ್ವ ಮತ್ತು 1948ರ ಕನಿಷ್ಠ ವೇತನ ಕಾಯಿದೆಯಲ್ಲಿ 71 ವರ್ಷ ಹಳೆಯದು. ಬೋನಸ್ ಕಾಯ್ದೆ, 1965 ಮತ್ತು ಸಮಾನ ಸಂಭಾವನೆ ಕಾಯ್ದೆ 1976 ರನ್ನೂ ಮಸೂದೆಯಲ್ಲಿ ಒಳಗೊಳಿಸಲಾಗುತ್ತದೆ. ನಾಲ್ಕು ಸಂಹಿತೆಗಳಲ್ಲಿ ಇದು ಕಾಯಿದೆಯಾದ ಮೊದಲ ಸಂಹಿತೆಯಾಗಲಿದೆ. ವೇತನ ಸಂಹಿತೆ, ಕೈಗಾರಿಕಾ ಸಂಬಂಧಗಳು, ಸಾಮಾಜಿಕ ಭದ್ರತೆ ಮತ್ತು ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ರೂಪಿಸಿರುವ ಕಾರ್ಯ ಪರಿಸ್ಥಿತಿಗಳು. ಕಾರ್ಮಿಕ ಕಾನೂನುಗಳನ್ನು ಸರಳೀಕರಣಗೊಳಿಸಿ, ತರ್ಕಬದ್ಧಗೊಳಿಸಿ, ನಾಲ್ಕು ಕಾರ್ಮಿಕ ಸಂಹಿತೆಗಳೊಂದಿಗೆ ವಿಲೀನಗೊಳಿಸುವ ಉದ್ದೇಶವನ್ನ ಎರಡನೇ ರಾಷ್ಟ್ರೀಯ ಕಾರ್ಮಿಕ ಆಯೋಗದ ಶಿಫಾರಸಿಗೆ ಅನುಗುಣವಾಗಿ ಜಾರಿಗೆ ತರುವ ಗುರಿಯನ್ನ ಸಚಿವಾಲಯ ಹೊಂದಿದೆ.

ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವ ಸಂತೋಷ್ ಕುಮಾರ್ ಗಂಗ್ವಾರ್ ಮಾತನಾಡಿ, ಅಸಂಘಟಿತ ವಲಯದ ಸುಮಾರು 50 ಕೋಟಿ ಕಾರ್ಮಿಕರಿಗೆ ಕನಿಷ್ಠ ವೇತನ ಮತ್ತು ಸಮಯಕ್ಕೆ ಸರಿಯಾಗಿ ವೇತನ ಪಾವತಿ ಮಾಡುವ ಮಸೂದೆ ಐತಿಹಾಸಿಕ ಮಸೂದೆಯಾಗಿದೆ ಎಂದರು.

 

Leave a Reply

Your email address will not be published.