ನಿತ್ಯವಾಣಿ,ಚಿತ್ರದುರ್ಗ,(ಜೂ.22) : ಅಸಂಘಟಿತ ಕಾರ್ಮಿಕರಿಗೆ ಸರ್ಕಾರ ಮಾಸಿಕ 10 ಸಾವಿರ ರೂಗಳ ಪರಿಹಾರ ನೀಡಬೇಕೆಂದು ಕರ್ನಾಟಕ ಪ್ರದೇಶ ಸಮಿತಿ ಐ ಎನ್ ಟಿ ಯು ಸಿ ವಿಭಾಗದ ರಾಜ್ಯಾಧ್ಯಕ್ಷ ಎಸ್ ಎಸ್ ಪ್ರಕಾಶಂ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ,ಚಿತ್ರದುರ್ಗ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡುತ್ತಾ ಅವರು ಕರೋನಾ ಸಂದರ್ಭದಲ್ಲಿ ಕಾರ್ಮಿಕರಿಗೆ ರೇಷನ್ ಕಿಟ್ಟುಗಳನ್ನು ನೀಡುವಲ್ಲಿಯೂ ಬಿಜೆಪಿ ಸರ್ಕಾರ ಬಹಳ ತಾರತಮ್ಯ ವಹಿಸಿದೆ,

ರಾಜ್ಯದಲ್ಲಿ ಬಿಜೆಪಿಯ ಶಾಸಕರು ಗೆದ್ದಿರುವ ಕ್ಷೇತ್ರಗಳಲ್ಲಿ 10000 ರೇಷನ್ ಕಿಟ್ ಗಳನ್ನು ನೀಡಿದರೆ ಕಾಂಗ್ರೆಸ್ಸಿನ ಶಾಸಕರು ಗೆದ್ದಿರುವ ಸ್ಥಳಗಳಲ್ಲಿ 5000 ರೇಷನ್ ಕಿಟ್ ಗಳನ್ನು ಮಾತ್ರ ನೀಡುತ್ತಿದೆ, ಈ ರೀತಿ ಮಾಡುತ್ತಿರುವ ಸರ್ಕಾರ ಎಲ್ಲಾ ರೀತಿಯಲ್ಲೂ ಕಾಂಗ್ರೆಸ್ಸಿಗೆ ಅನ್ಯಾಯವನ್ನು ಮಾಡುತ್ತಿದೆ, ಕೋವಿಡ್ ಮೊದಲ ಅಲೆಯಲ್ಲಿ ಕೂಡ ಕಳೆದ ವರ್ಷ ಎಲ್ಲಾ ತರದ ಕಾರ್ಮಿಕರಿಗೆ ಘೋಷಿಸಿದ ಹಣ ಇನ್ನೂ ಕೂಡ ಬಿಡುಗಡೆ ಮಾಡಿಕೊಟ್ಟಿಲ್ಲ, ಇಂಟೆಕ್ ಚಿತ್ರದುರ್ಗ ಜಿಲ್ಲಾ ಅಧ್ಯಕ್ಷ ಅಶೋಕ್ ನಾಯ್ಡು ಅವರಿಗೆ ರಾಜ್ಯ ಅಧ್ಯಕ್ಷರು ಇಂಟೆಕ್ ಸಂಬಂಧಪಟ್ಟ ಎಲ್ಲರನ್ನೂ ಒಟ್ಟುಗೂಡಿಸಿ ಸರ್ಕಾರದ ವಿರುದ್ಧ ಪ್ರತಿಭಟನೆಗಳನ್ನು ಮಾಡಿ ಕಾರ್ಮಿಕ ಇಲಾಖೆಯಲ್ಲಿ ಎಲ್ಲರಿಗೂ ಬರುವಂತಹ ಸೌಲಭ್ಯಗಳನ್ನು ಕೊಡಿಸಿ ಎಂದು ತಿಳಿಸಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು ,
ಈ ಸಮಯದಲ್ಲಿ ಜಿಲ್ಲಾಧ್ಯಕ್ಷ ಅಶೋಕ್ ನಾಯ್ಡು ಅವರು ಮಾತನಾಡುತ್ತಾ ಈ ಒಂದು ಸಂಘಟನೆಗೆ ನಾನು ಶ್ರಮವಹಿಸಿ ಸರ್ಕಾರದಿಂದ ಅನ್ಯಾಯ ವಾಗುತ್ತಿರುವ ಕಾರ್ಮಿಕರಿಗೆ ನ್ಯಾಯ ಕೊಡಿಸಲು ಬದ್ಧನಾಗಿರುತ್ತೇನೆ ಎಂದು ತಿಳಿಸಿದರು,
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್, ಮಾಜಿ ಅಧ್ಯಕ್ಷ ಫಾತ್ಯರಾಜನ್, ಇಂಟೆಕ್ ಜಿಲ್ಲಾಧ್ಯಕ್ಷ ಅಶೋಕ್‍ನಾಯ್ಡು, ಹಿಂದುಳಿದ ವರ್ಗಗಳ ವಿಭಾಗದ ಜಿಲ್ಲಾಧ್ಯಕ್ಷ ಎನ್.ಡಿ.ಕುಮಾರ್, ಅಸಂಘಟಿತ ಕಾರ್ಮಿಕ ವಿಭಾಗದ ಜಿಲ್ಲಾಧ್ಯಕ್ಷ ಮೋಹನ್ ಪೂಜಾರಿ, ಕಾರ್ಮಿಕ ವಿಭಾಗದ ಜಿಲ್ಲಾಧ್ಯಕ್ಷ ಸೈಯದ್ ಮೋಹಿದ್ದೀನ್, ಕಾಂಗ್ರೆಸ್ ಕಾನೂನು ವಿಭಾಗದ ಅಧ್ಯಕ್ಷ ಸುದರ್ಶನ್, ಅಲ್ಪಸಂಖ್ಯಾತ ವಿಭಾಗದ ಜಿಲ್ಲಾಧ್ಯಕ್ಷ ಅಬ್ದುಲ್ಲಾ, ಸೈಯದ್ ಖುದ್ದೂಸ್, ಆಜಂ, ಶಶಾಂಕ್, ಮನುಯಾದವ್, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಮಹಮದ್‍ಸಾಬ್ ಜಿ.ಆರ್.ಹಳ್ಳಿ, ರಹಮತ್‍ವುಲ್ಲಾ, ಡಿ.ಎನ್.ಮೈಲಾರಪ್ಪ, ನ್ಯಾಯವಾದಿಗಳಾದ ಬೀಸ್ನಳ್ಳಿಜಯಣ್ಣ, ರವೀಂದ್ರ, ಇಂಟೆಕ್ ರಾಜ್ಯ ಪದಾಧಿಕಾರಿಗಳಾದ ಶೌಕತ್‍ಆಲಿ, ವೆಂಕಟೇಶ್, ಶ್ಯಾಮರೆಡ್ಡಿ ಹಾಜರಿದ್ದರು.ಉಚಿತ ಸುದ್ದಿ, ಜಾಹೀರಾತಿಗಾಗಿ ,👉ನಿತ್ಯವಾಣಿ ಕನ್ನಡ ದಿನಪತ್ರಿಕೆ, ಸಂಪಾದಕರು ಎಸ್. ಟಿ .ನವೀನ್ ಕುಮಾರ್, ಚಿತ್ರದುರ್ಗ, ಮೊಬೈಲ್ -9901254020 , www.nithyavaninews.com