ನಿತ್ಯವಾಣಿ, ಚಿತ್ರದುರ್ಗ,(ಅ.25) : M L C ರಘು ಆಚಾರ್ ರವರಿಗೆ ಚಿತ್ರದುರ್ಗ ಜಿಲ್ಲಾ ವಕೀಲರ ಸಂಘವು ಅಭಿನಂದನೆಗಳನ್ನು ತಿಳಿಸುತ್ತದೆ
ವಕೀಲರ ಸಂಘದ ಮನವಿಯನ್ನು ಪರಿಗಣಿಸಿ ವಕೀಲರ ಸಂಘದ ಗ್ರಂಥಾಲಯ ಅಭಿವೃದ್ಧಿಗೆ ತಮ್ಮ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನ ದಲ್ಲಿ ಹತ್ತು ಲಕ್ಷ ರೂಗಳನ್ನು ನೀಡಿದ್ದಾರೆ
ಇದರಿಂದ ಜಿಲ್ಲಾ ಗ್ರಂಥಾಲಯವನ್ನು ಆದುನಿಕರಿಸಿ ಇ ಗ್ರಂಥಾಲಯವನ್ನು ಮಾಡಲಾಗುವುದು ಇದರಿಂದ ಅಂತರಜಾಲದಲ್ಲಿ ಹೊಸ ಹೊಸ ಬಗೆಯ ತೀರ್ಪುಗಳನ್ನು ಕೈ ಬೆರಳಿನಲ್ಲಿ ನೋಡಬಹುದು .ಅದ್ದರಿಂದ ಸಂಘದ ಮನವಿಗೆ ಸ್ಪಂದಿಸಿ ಹತ್ತು ಲಕ್ಷ ರೂಪಾಯಿ ಅನುದಾನ ನೀಡಿದ ರಘು ಆಚಾರ್ ರವರಿಗೆ ಜಿಲ್ಲಾ ವಕೀಲರ ಸಂಘದ ಅದ್ಯಕ್ಷರಾದ ಶಿವುಯಾದವ್ ಉಪಾಧ್ಯಕ್ಷ ದಯಾನಂದ ಪ್ರದಾನ ಕಾರ್ಯಕ್ರಮ ಮೂರ್ತಿ ಖಜಾಂಚಿ ಅಜ್ಜಯ್ಯ ಸಹ ಕಾರ್ಯದರ್ಶಿ ವಿಶ್ವನಾಥ ರೆಡ್ಡಿ ಮತ್ತು ಪದಾಧಿಕಾರಿಗಳು ಅಭಿನಂದನೆಗಳನ್ನು ತಿಳಿಸಿದ್ದಾರೆ