ನಿತ್ಯವಾಣಿ,ಚಿತ್ರದುರ್ಗ,(ಅ.27) : ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಜಿಲ್ಲಾ ವಕೀಲರ ಸಂಘ ಮೆದೆಹಳ್ಳಿ ಗ್ರಾಮ ಪಂಚಾಯಿತಿ ಸರಸ್ವತಿ ಕಾನೂನು ಕಾಲೇಜು ಸಂಯುಕ್ತ ಆಶ್ರಯದಲ್ಲಿ ಮೆದೆಹಳ್ಳಿ ಯಲ್ಲಿ ಕಾನೂನು ಜಾಗೃತಿ ಮತ್ತು ವಿವಿದ ಕಾನೂನಿನ ತಿಳುವಳಿಕೆ ಮೂಡಿಸುವ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಈ ಕಾರ್ಯಕ್ರಮವನ್ನು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಸಿ ಶಿವುಯಾದವ್ ಉದ್ಘಾಟನೆ ಮಾಡಿದರು ನಂತರ ಮಾತನಾಡಿ ಅವರು ಗ್ರಾಮೀಣ ಬಾಗದ ಜನರು ಶಾಂತಿ ಸಹನೆ ಯಿಂದ ಜೀವನ ನಿರ್ವಹಣೆ ಮಾಡಬೇಕು ಸಿಟ್ಟಿನ ಕೈಗೆ ಸುದ್ದಿಯನ್ನು ಕೊಡಬಾರದು ನೀವು ತಾಳ್ಮೆ ಕಳೆದುಕೊಂಡರೆ ಪೊಲೀಸ್ ರಾಣೆ ಮತ್ತು ವಕೀಲರ ಹತ್ತಿರ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಇದರಿಂದ ಆರ್ಥಿಕ ಮತ್ತು ಸಾಮಾಜಿಕವಾಗಿ ಕಷ್ಟ ನಷ್ಟ ತೊಂದರೆಗಳನ್ನು ಎದುರಿಸಬೇಕಾಗುತ್ತದೆ
ಅದ್ದರಿಂದ ಸಣ್ಣ ಪುಟ್ಟ ಸಮಸ್ಯೆಗಳನ್ನು ಹಿಂದಿನ ಕಾಲದಂತೆ ಹಳ್ಳಿ ಕಟ್ಟಿ ಪಂಚಾಯತಿಯಲ್ಲಿ ತಮ್ಮ ಗ್ರಾಮದ ಹಿರಿಯರ ಸಮ್ಮುಖದಲ್ಲಿ ಇತ್ಯರ್ಥ ಮಾಡಿಕೊಳ್ಳಬೇಕು ಇಲ್ಲದೇ ಹೋದರೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಬಂದು ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕು ಇದರಿಂದ ನೆಮ್ಮದಿಯ ಜೀವನ ಸಾಗಿಸಬಹುದು ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ ಸರಸ್ವತಿ ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಸುದಾದೇವಿಯವರು ಗ್ರಾಮ ಪಂಚಾಯತಿ ಅದ್ಯಕ್ಷರು ಸದಸ್ಯರ ಅಧಿಕಾರ ಮತ್ತು ಕರ್ತವ್ಯ ಗಳು ಮತ್ತು ಗ್ರಾಮ ಪಂಚಾಯತಿಗಳ ಕಾರ್ಯ ನಿರ್ವಹಣೆ ಬಗ್ಗೆ ಉಪನ್ಯಾಸ ನೀಡಿದರು
ಕಾನೂನು ಕಾಲೇಜ್ ಸಹ ಪ್ರಾಧ್ಯಾಪಕರಾದ ಶ್ರೀ ಮತಿ ಹರ್ಷ ಪೊಸ್ಕೋ ಕಾನೂನು ಬಗ್ಗೆ ಡಾ ರವಿಕುಮಾರ್ ರವರು ಜನತಾ ನ್ಯಾಯಾಲಯ ಲೊಕ ಅದಾಲತ್ ಬಗ್ಗೆ ಉಪನ್ಯಾಸ ನೀಡಿದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತಿ ಅದ್ಯಕ್ಷರಾದ ಭಾಗ್ಯಮ್ಮ ವಹಿಸಿದ್ದರು
ಮುಖ್ಯ ಅತಿಥಿಗಳಾಗಿ ವಕೀಲರ ಸಂಘದ ಉಪಾಧ್ಯಕ್ಷರಾದ ದಯಾನಂದ ಪ್ರದಾನ ಕಾರ್ಯದರ್ಶಿ ಮೂರ್ತಿ ಗ್ರಾಮ ಪಂಚಾಯತಿ ಉಪಾಧ್ಯಕ್ಷ ದನ್ಯಕುಮಾರ್ ಮತ್ತು ಎಲ್ಲಾ ಗ್ರಾಮ ಪಂಚಾಯತಿ ಸದಸ್ಯರು ಮತ್ತು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸಂತೋಷ ಕುಮಾರ್ ಇನ್ನೂ ಮುಂತಾದವರು ಬಾಗವಹಿಸಿದ್ದರು.