ನಿತ್ಯವಾಣಿ ನ್ಯೂಸ್, ಚಿತ್ರದುರ್ಗ, ನ.06 : ಮಾಳಪ್ಪನ ಹಟ್ಟಿ ಕಾರ್ಯಕ್ಷೇತ್ರದ ಪ್ರಗತಿ ಜ್ಞಾನವಿಕಾಸ ಕೇಂದ್ರದ ಸಭೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ವಕೀಲರ ಸಂಘ ಚಿತ್ರದುರ್ಗ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್( ರಿ)ಸಿರಿಗೆರೆ ಯೋಜನಾ ಕಚೇರಿ ಚಿತ್ರದುರ್ಗ ತಾಲ್ಲೂಕು ಇವರ ಸಯುಕ್ತ ಆಶ್ರಯದಲ್ಲಿ ಬೃಹತ್ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ದ ಗಿರೀಶ್ ಬಿ.ಕೆ ಅವರು ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡುತ್ತಾ ಎಲ್ಲಾ ಮಹಿಳೆಯರಿಗೂ ಕಾನೂನು ಅರಿವು ನೆರವು ಬಗ್ಗೆ ಮಾಹಿತಿ ಮಾರ್ಗದರ್ಶನವನ್ನು ನೀಡಿದರು ಎಲ್ಲಾ ಸಮಯದಲ್ಲಿ ಕಷ್ಟದಲ್ಲಿ ಇರತಕ್ಕಂತಹ ಎಲ್ಲಾ ಮಹಿಳೆಯರಿಗೆ ಹಾಗೂ ಎಲ್ಲರಿಗೂ ಜಿಲ್ಲಾ ಕಾನೂನು ಸೇವೆಗಳ ಅಧಿಕಾರವಿದೆ ಅದರಉಪಯೋಗಗಳನ್ನುಪಡೆದುಕೊಳ್ಳಿ .ಸಮಾಜ ಲ್ಲಿ ಅನ್ಯಾಯಗೊಳ ಗಾದವರಿಗೆ ನ್ಯಾಯ ಹಾಗೂ ರಕ್ಷಣೆ ನೀಡುವಲ್ಲಿ ಪೊಲೀಸ್ ಇಲಾಖೆ ಮತ್ತು ನ್ಯಾಯಾಂಗ ಇಲಾಖೆ ಪ್ರಮುಖ ಪಾತ್ರ ವಹಿಸುತ್ತವೆ,
ಗ್ರಾಮೀಣ ಭಾಗದ ಜನರು ಉಚಿತ ಕಾನೂನಿನ ನೆರವು ಪಡೆದು, ರಾಜಿಸಂಧಾನ ಮೂಲಕ ವ್ಯಾಜ್ಯ ಮತ್ತು ವೈಯಕ್ತಿಕ ವಿವಾದಗಳನ್ನು ನ್ಯಾಯುತವಾಗಿ ಪರಿಹಾರ ಕಂಡುಕೊಳ್ಳುವಂತೆ ತಿಳಿಸಿದರು. ಈ ಸಂದರ್ಭದಲ್ಲಿ ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಶಿವಲೀಲಾ,ವಲಯ ಮೇಲ್ವಿಚಾರಕ ಶ್ರೀನಿವಾಸ್ ಎಸ್.ಎಂ ಒಕ್ಕೂಟ ಅಧ್ಯಕ್ಷರು ಶ್ರೀಮತಿ ಮಂಜುಳಾ ,ಸೇವಪ್ರತಿನಿದಿ ಜ್ಯೋತಿ ಹಾಗೂ ಸ್ವಸಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು