ಬೆಂಗಳೂರು ಏ.28- ರೋಗನಿರೋಧಕ ಶಕ್ತಿ ಹೆಚ್ಚಿಸುವ ನಿಂಬೆಹಣ್ಣಿನ ಮಹಿಮೆ ಆಮೋಘ, ಅಪೂರ್ವ, ಕೊರೊನಾಗೆ ರಾಮಬಾಣ ಎಂದು ಸುದ್ದಿ ಹರಡಿದ್ದೇ ತಡ ಈಗ ಎಲ್ಲೆಡೆ ನಿಂಬೆಹಣ್ಣಿಗೆ ಡಿಮ್ಯಾಂಡ್ ಹೆಚ್ಚಾಗಿದೆ. ಮೊದಲಿನಿಂದಲೂ ನಿಂಬೆಹಣ್ಣಿಗೆ ಅಡಿಗೆ ಮನೆಯಿರಲಿ, ದೇವರ ಮನೆಯಿರಲಿ ವಿಶೇಷ ಸ್ಥಾನವಿದೆ.
ಈಗ ಮಾನವ ಕುಲಕ್ಕೆ ಸಂಚಕಾರವಾಗಿರುವ ಕೊರೊನಾ ಮಹಾಮಾರಿಗೆ ನಿಂಬೆ ಹಣ್ಣು ರಾಮಬಾಣ ಎನ್ನಲಾಗಿದೆ ಹಾಗೂ ಅದರ ರಸದಲ್ಲಿರುವ ಸಿಟ್ರಿಕ್ ಆಯಸಿಡ್ ಸೋಂಕನ್ನು ನಿಯಂತ್ರಿಸುತ್ತದೆ ಮತ್ತು ದೇಹದ ಆರೋಗ್ಯವನ್ನು ಕೂಡ ಕಾಪಾಡುತ್ತದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಕೇವಲ 3-5 ರೂ. ಗೆ ಸಿಗುತ್ತಿದ ನಿಂಬೆಹಣ್ಣು ಈಗ ಒಂದು ಹಣ್ಣಿಗೆ 8-10 ರೂ. ಗೆ ಮಾರಾಟವಾಗುತ್ತಿದೆ. ಒಟ್ಟಾರೆ ನಿಂಬೆಹಣ್ಣಿನ ಅಭಾವ ಸೃಷ್ಠಿಯಾಗಿದೆ.