ಶಾಲಾ ಶುಲ್ಕ ನಿಗದಿಪಡಿಸಲು ಆಗ್ರಹ : ಎಂಎಲ್‍ಸಿ ಜಿ.ರಘು ಆಚಾರ್ ಪತ್ರ

ನಿತ್ಯವಾಣಿ, ಚಿತ್ರದುರ್ಗ, (ಜೂ. 17) : ಶಿಕ್ಷಣ ಸಂಸ್ಥೆಗಳು ಹಾಗೂ ಪೋಷಕರಿಗೆ ಹೊರೆಯಾಗದ ರೀತಿಯಲ್ಲಿ ಶಾಲಾ ಪ್ರವೇಶ ಶುಲ್ಕವನ್ನು ಮರು ನಿಗದಿಪಡಿಸಬೇಕು ಎಂದು ವಿಧಾನಪರಿಷತ್ ಸದಸ್ಯ ಜಿ.ರಘು ಆಚಾರ್ ಶಿಕ್ಷಣ ಸಚಿವರಿಗೆ ಪತ್ರ ಬರೆದಿದ್ದಾರೆ.

‘ರಾಜ್ಯದಲ್ಲಿ ಕೊರೊನಾ ಸೋಂಕು ಉಲ್ಬಣಗೊಂಡಿದೆ. ಇಂತಹ ಸಂದರ್ಭದಲ್ಲಿಯೇ ಶೈಕ್ಷಣಿಕ ವರ್ಷವೂ ಆರಂಭವಾಗಿದೆ. ಶಾಲಾ ಪ್ರವೇಶ ಪ್ರಕ್ರಿಯೆ ಶುರುವಾಗಿದೆ. ಕೆಲವೆಡೆ ಆನ್‍ಲೈನ್ ಪಾಠವೂ ನಡೆಯುತ್ತಿದೆ. ಖಾಸಗಿ ಶಾಲೆಗಳ ಆಡಳಿತ ಮಂಡಳಿ ಹಾಗೂ ಪೋಷಕರನ್ನು ಗಮನದಲ್ಲಿಟ್ಟುಕೊಂಡು ಶುಲ್ಕ ನಿಗದಿ ಮಾಡುವ ಅಗತ್ಯವಿದೆ’ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

‘ಕೋವಿಡ್ ಸಂಕಷ್ಟದಲ್ಲಿ ಶಾಲಾ ಶುಲ್ಕ ಪಾವತಿ ಮಾಡುವುದು ಪೋಷಕರಿಗೆ ಕಷ್ಟವಾಗಿದೆ. ಶಾಲೆಯ ನಿರ್ವಹಣೆ, ಶಿಕ್ಷಕರಿಗೆ ವೇತನ ಪಾವತಿ ಆಡಳಿತ ಮಂಡಳಿಗಳಿಗೂ ಸವಾಲಾಗಿದೆ. ಇದರ ನಡುವೆಯೂ ತರಗತಿಗಳು ಆರಂಭ ಆಗುತ್ತಿವೆ’ ಎಂದು ಗಮನ ಸೆಳೆದಿದ್ದಾರೆ.

‘ಆನ್‍ಲೈನ್ ತರಗತಿಯ ಪರಿಣಾಮವಾಗಿ ಶಿಕ್ಷಣ ಸಂಸ್ಥೆಗಳ ವೆಚ್ಚ ಕಡಿಮೆ ಆಗಿದೆ. ಶಿಕ್ಷಕರ ಸಂಬಳ ಕಡಿತಗೊಂಡಿದೆ. ಪ್ರಯೋಗಾಲಯಗಳು ಸ್ಥಗಿತಗೊಂಡಿವೆ. ನೀರು ಹಾಗೂ ವಿದ್ಯುತ್ ಬಳಕೆ ಶುಲ್ಕವೂ ಕಡಿಮೆ ಆಗಿದೆ. ಶಾಲೆಯ ವಾರ್ಷಿಕ ನಿರ್ವಹಣಾ ವೆಚ್ಚ ಗಣನೀಯವಾಗಿ ತಗ್ಗಿದೆ. ಈ ಎಲ್ಲ ಅಂಶಗಳನ್ನು ಪರಿಗಣಿಸಿ ಶುಲ್ಕ ನಿಗದಿಪಡಿಸುವುದು ಸೂಕ್ತ’ ಎಂದು ಸಲಹೆ ನೀಡಿದ್ದಾರೆ.ಸುದ್ದಿಗಾಗಿ, ಜಾಹೀರಾತಿಗಾಗಿ ,👉ನಿತ್ಯವಾಣಿ  ಕನ್ನಡ ದಿನಪತ್ರಿಕೆ, ಸಂಪಾದಕರು ಎಸ್ ಟಿ ನವೀನ್ ಕುಮಾರ್, ಚಿತ್ರದುರ್ಗ, ಮೊಬೈಲ್ -9901254020   www.nithyavaninews.com

 

Leave a Reply

Your email address will not be published.