ರಾಜ್ಯಸರ್ಕಾರಗಳ ಪಾಲುದಾರಿಕೆಯೊಂದಿಗೆ ದೇಶಾದ್ಯಂತ 7,00,000 ಮಾದರಿಗಳನ್ನು ಯಶಸ್ವಿಯಾಗಿ ಪರೀಕ್ಷಿಸಿದ ಲೈಫ್ಸೆಲ್
ನಿತ್ಯವಾಣಿ, ಬೆಂಗಳೂರು,(ಜೂನ್ 21, 2021) : ಭಾರತದ ಪ್ರಮುಖರೋಗ ನಿರ್ಣಯ ಮತ್ತು ಆರೋಗ್ಯ ಪರಿಹಾರ ಪೂರೈಕೆ ದಾರರಾಗಿರುವ ಲೈಫ್‌ಸೆಲ್ ಇತ್ತೀಚೆಗೆ ತನ್ನ ರೋಗ ನಿರ್ಣಯದ ಹೆಜ್ಜೆ ಗುರುತುಗಳನ್ನು ಕೋಲ್ಕತಾ ಮತ್ತು ಪುಣೆ ಸೇರಿದಂತೆ ಪ್ರಮುಖ ಮಾರುಕಟ್ಟೆಗಳಲ್ಲಿ ವಿಸ್ತರಿಸಿದೆ. ಐಸಿಎಂಆರ್ ಮತ್ತು ಎನ್/ಎಬಿ ಎಲ್ ಮಾನ್ಯತೆಯನ್ನು ಪಡೆದಿರುವ ಈಪರೀಕ್ಷಾಕೇಂದ್ರಗಳು ಕೋವಿಡ್ ಮತ್ತು ಇತರ ಕ್ಷಿಪ್ರ ಜೀವ ರಾಸಾಯನಿಕ ಮತ್ತು ಸುಧಾರಿತ ಆನುವಂಶಿಕ ಪರೀಕ್ಷೆಗಳನ್ನು ನಡೆಸಲು ಸಜ್ಜುಗೊಂಡಿವೆ. ಇಲ್ಲಿಯವರೆಗೆ 7,00,000 ಕೋವಿಡ್ ಮಾದರಿಗಳನ್ನುನಿರ್ವಹಿಸುವ ವ್ಯಾಪಕ ಅನುಭವದೊಂದಿಗೆ, ಕಂಪನಿಯು ತಮಿಳುನಾಡು, ಕರ್ನಾಟಕ, ದೆಹಲಿ ಮತ್ತು ಹರಿಯಾಣದರಾಜ್ಯ ಸರ್ಕಾರಗಳಿಗೆ ದಿನಕ್ಕೆ 8,000 ಮಾದರಿಗಳನ್ನು ಸಂಸ್ಕರಿಸಿ ಕೊಡುವ ಮೂಲಕ ಬೆಂಬಲ ನೀಡಿದ್ದು, ಈಮೂಲಕ ಸಾಂಕ್ರಾಮಿಕ ರೋಗವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಹಾಯಮಾಡುತ್ತಿದೆ. 
ಈ ಅಭಿವೃದ್ಧಿ ಕುರಿತು ಪ್ರತಿಕ್ರಿಯಿಸಿದ ಲೈಫ್‌ಸೆಲ್ ಇಂಟರ್‌ನ್ಯಾಷನಲ್‌ನ ಸಿಇಒ ಶ್ರೀ ಇಶಾನ್ ಖನ್ನಾ, ‘ಸಮಗ್ರ ಆರೋಗ್ಯ ರಕ್ಷಣೆಯ ಬ್ರಾಂಡ್ಆಗಿರುವ ಲೈಫ್‌ಸೆಲ್ ಯವಾಗಲೂ ವೈದ್ಯಕೀಯ ವಲಯ ಮತ್ತು ಸರ್ಕಾರಕ್ಕೆ ತನ್ನ ಬೆಂಬಲವನ್ನು ನೀಡುತ್ತ ಬಂದಿದೆ. ಭಾರತದಲ್ಲಿ ಕೋವಿಡ್ ಪರೀಕ್ಷೆಯನ್ನು ನಿರ್ವಹಿಸಲು ನಾವು ಮೊದಲಿಗರಾಗಿ ಪ್ರವೇಶಿಸಿದ್ದರೂ, ಎರಡನೆಯ ಅಲೆಯಲ್ಲಿ ತ್ವರಿತ ಪ್ರತಿಕ್ರಿಯೆಯ ತೀವ್ರ ಅಗತ್ಯ ಏರ್ಪಟ್ಟಿದೆ. ಆದ್ದರಿಂದ, ಕೋವಿಡ್-19 ವಿರುದ್ಧದ ಹೋರಾಟದ ಕಡೆಗೆ ನಮ್ಮ ಬೆಂಬಲ ಮತ್ತು ಬದ್ಧತೆಯನ್ನು ಮತ್ತಷ್ಟು ಹೆಚ್ಚಿಸಲು ನಮ್ಮ ಪರೀಕ್ಷಾ ಸೇವೆಗಳನ್ನು ವಿಸ್ತರಿಸುತ್ತಿದ್ದೇವೆ. ನಾವು ಇಲ್ಲಿಯವರೆಗೆ 7.3 ಲಕ್ಷಮಾದರಿಗಳನ್ನು ಯಶಸ್ವಿಯಾಗಿ ಪರೀಕ್ಷಿಸಿದ್ದೇವೆ ಮತ್ತು ಬೆಳೆಯುತ್ತಿರುವ ಅಗತ್ಯವನ್ನು ಪೂರೈಸಲು ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಕೇಂದ್ರಗಳನ್ನು ಆರಂಭಿಸುವ ಗುರಿಹೊಂದಿದ್ದೇವೆ”ಎಂದರು.
ಚೆನ್ನೈ, ಮಾನೇಸರ್, ಬೆಂಗಳೂರು, ಕೋಲ್ಕತಾ, ಮತ್ತು ಪುಣೆ ಸೇರಿದಂತೆ ಲೈಫ್‌ಸೆಲ್ ಐದು ಪರೀಕ್ಷಾ ಕೇಂದ್ರಗಳು ಭಾರತದಾದ್ಯಂತ ಆಯಕಟ್ಟಿನ ಸ್ಥಳಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಇವುಗಳು ಸುಸಜ್ಜಿತ ವೃತ್ತಿ ಪರರ ತಂಡದೊಂದಿಗೆ ನಿರಂತರ ಪರೀಕ್ಷೆ ಮತ್ತು ಸಂಗ್ರಹದ ಸಾಮರ್ಥ್ಯವನ್ನು ಹೊಂದಿದ್ದು, ಲೈಫ್‌ಸೆಲ್ನ್ನ ಗ್ರಾಹಕರಿಗೆ ಅಂತಹ ಕಷ್ಟದ ಸಮಯದಲ್ಲೂ ತ್ವರಿತ ಸೇವೆ ಮತ್ತು ಪ್ರಾಯೋಗಿಕವಾಗಿ ಅನುಮೋದಿತ ವರದಿಗಳೊಂದಿಗೆ ತಡೆರಹಿತ ಸೇವೆಯನ್ನು ನೀಡಲು ಸಜ್ಜಾಗಿದೆ.
ಹೆಚ್ಚುವರಿಯಾಗಿ, ಕೋವಿಡ್-19 ರೋಗಿಗಳ ಚೇತರಿಕೆಯ ಸಮಯದಲ್ಲಿ ಉತ್ತಮ ಆರೈಕೆಯನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ, ಲೈಫ್‌ಸೆಲ್ ಕಪ್ಪು ಶಿಲೀಂಧ್ರ, ಕೋವಿಡ್ ಅಲೈಡ್ ಮತ್ತು ಸ್ಪೈಕ್ಪ್ರ್ ಪ್ರೊಟೀನ್ ಪ್ರತಿ ಕಾಯ ಪರೀಕ್ಷೆಯ ಪ್ರಮುಖ ರೋಗ ನಿರ್ಣಯ ಪೂರೈಕೆ ದಾರ ರಾಗಿಯೂ ಹೊರಹೊಮ್ಮಿದೆ. ವಾಸ್ತವವಾಗಿ, ಪ್ರಸವ ಪೂರ್ವ ಆರೋಗ್ಯ ಮತ್ತು ನವಜಾತ ಆರೈಕೆ ವಿಭಾಗಗಳಲ್ಲಿ ರೋಗ ನಿರ್ಣಯ ಸೇವೆಗಳನ್ನು ನೀಡಲು ಲೈಫ್‌ಸೆಲ್ಸ ಹಕಾರಿಯಾಗಿದೆ. ಕೋವಿಡ್-19 ಸಮಯದಲ್ಲಿ ಜೀವ ರಾಸಾಯನಿಕ ಪರೀಕ್ಷೆಗಳು ಮತ್ತು ಪ್ರಸವ ಪೂರ್ವ ಹಾಗೂ ಡಿಎನ್‌ಎ ಆಧಾರಿತ ಸುಧಾರಿತ ಸ್ಕ್ರೀನಿಂಗ್ ಸೇರಿದಂತೆ ಹಲವು ಸ್ಯಾಂಪಲ್‌ಗಳನ್ನು ಮನೆಯಿಂದಲೇ ಪಡೆಯುವ ವ್ಯವಸ್ಥೆಯನ್ನು ಪರಿಚಯಿಸಿದೆ. ಇತ್ತೀಚಿನ ಈ ವಿಸ್ತರಣೆಯೊಂದಿಗೆ, ಲೈಫ್‌ಸೆಲ್ ನ್ನ ಗ್ರಾಹಕರಿಗೆ ತಮ್ಮ ರೋಗ ನಿರ್ಣಯದ ಪ್ರಯಾಣವನ್ನು ತ್ವರಿತಗೊಳಿಸಲು ಸಹಾಯಕ ವಾಗುವಂತೆ ಕೈಗೆಟುಕುವ ಮತ್ತು ಪ್ರವೇಶಿಸ ಬಹುದಾದ ಆರೋಗ್ಯ ಸೇವೆಯನ್ನು ಒದಗಿಸುವುದನ್ನು ಮುಂದುವರಿಸುತ್ತದೆ.