ಲಯನ್ಸ್ ಕ್ಲಬ್ ನಿಂದ ಪ್ರಥಮ ವಿಡಿಜಿ ಲಯನ್ ಕೆ ಸಿ ವೀರಭದ್ರರವರ ಶ್ರದ್ಧಾಂಜಲಿ ಕಾರ್ಯಕ್ರಮ

ನಿತ್ಯವಾಣಿ,ಚಿತ್ರದುರ್ಗ,(ನ.29) : ಲಯನ್ ಕೆ ಸಿ ವೀರಭದ್ರ ಅವರು ಲಯನ್ಸ್ ಜಿಲ್ಲೆ 317C ನಲ್ಲಿ ಹೃದಯವಂತಿಕೆಗೆ ಹೆಸರಾಗಿದ್ದವರು. ಹಲವಾರು ವರ್ಷಗಳಿಂದ ಲಯನ್ಸ್ ಅಂತರಾಷ್ಟ್ರೀಯ ಸಂಸ್ಥೆಯಲ್ಲಿ ತಮ್ಮ ಸೇವೆಯ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದರು ಎಂದು ಲೇಖಕ ಹಾಗು ಲಯನ್ಸ್ ಕ್ಲಬ್ ಚಿತ್ರದುರ್ಗ ಫೋರ್ಟ್ ಸಿಟಿಯ ಕಾರ್ಯದರ್ಶಿ ಲಯನ್ ಯೋಗೀಶ್ ಸಹ್ಯಾದ್ರಿ ಅಭಿಪ್ರಾಯಪಟ್ಟರು.

ನಗರದ ಖಾಸಗಿ ಹೋಟೆಲ್ ಐಶ್ವರ್ಯ ಫೋರ್ಟ್ ನಲ್ಲಿ ಲಯನ್ಸ್ ಕ್ಲಬ್ ಚಿತ್ರದುರ್ಗ ಫೋರ್ಟ್ ಸಿಟಿ ವತಿಯಿಂದ ಆಯೋಜಿಸಲಾಗಿದ್ದ ಲಯನ್ಸ್ ಜಿಲ್ಲೆ 317C ಯ ಪ್ರಥಮ ವಿಡಿಜಿ ಆಗಿದ್ದ ಲಯನ್ ಕೆ ಸಿ ವೀರಭದ್ರರವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಲಯನ್ ಕೆ ಸಿ ವೀರಭದ್ರ ಅವರು ತಮ್ಮ ಸೇವಾ ಕಾರ್ಯಗಳ ಮೂಲಕ ಲಯನ್ಸ್ ಗಳ ಅಪಾರ ಪ್ರೀತಿ ಗಳಿಸಿದ್ದರು ಹಾಗು ಅವರ ಸಮಾಜಮುಖಿ ಚಿಂತನೆಗಳ ಮೂಲಕ ನಮ್ಮೆಲ್ಲರ ಹೃದಯದಲ್ಲಿ ಸದಾ ನೆನಪಿನಲ್ಲಿ ಉಳಿಯುತ್ತಾರೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಲಯನ್ಸ್ ಕ್ಲಬ್ ಅಧ್ಯಕ್ಷ ಲಯನ್ ಆರ್ ಉದಯಶಂಕರ್, ಕೆ ಸಿ ವೀರಭದ್ರ ಅವರು ಎಲ್ಲರಿಗೂ ಆತ್ಮೀಯ ವ್ಯಕ್ತಿಯಾಗಿದ್ದರು ಹಾಗು ಯುವ ಲಯನ್ಸ್ ಗಳಿಗೆ ಸ್ಪೂರ್ತಿಯ ಚಿಲುಮೆಯಾಗಿದ್ದರು ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಖಜಾಂಚಿ ಲಯನ್ ಪಿ ನಾಗೇಂದ್ರಚಾರ್ ಮಾತನಾಡಿದರು. ಮೌನಾಚರಣೆ ಮೂಲಕ ಲಯನ್ ಕೆ ಸಿ ವೀರಭದ್ರ ಅವರ ಆತ್ಮಕ್ಕೆ ಚಿರಶಾಂತಿ ಕೋರಲಾಯಿತು.
ಲಯನ್ಸ್ ಗಳಾದ ಚಲ್ಮೇಶ್, ಸೋಮನಾಥ ಶೆಟ್ಟಿ, ಸಹಕಾರ್ಯದರ್ಶಿ ದಾದಾಪೀರ್, ಗಿರೀಶ್ ಯು ಸಿ, ಮಂಜುನಾಥ್ ಬಿ, ಕಿರಣ್ ಕುಮಾರ್, ಮಹೇಶ್ವರಪ್ಪ ಹೆಚ್ ಸಿ, ಕೃಷ್ಣಮೂರ್ತಿ, ಸತ್ಯನಾರಾಯಣ ಇತರರು ಹಾಜರಿದ್ದರು.

 

Leave a Reply

Your email address will not be published.