ಬೆಂಗಳೂರು : ರಾಜ್ಯದಲ್ಲಿ ಆನ್ ಲೈನ್ ಮೂಲಕ ಮದ್ಯ ಮಾರಾಟಕ್ಕೆ ಅನುಮತಿ ನೀಡೋದಕ್ಕೆ ಹೈಕೋರ್ಟ್ ಅನುಮತಿ ನಿರಾಕರಿಸಿದೆ. ಅಲ್ಲದೇ ಆನ್ ಲೈನ್ ಮದ್ಯ ಮಾರಾಟಕ್ಕೆ ಸಲ್ಲಿಸಿದ್ದಂತ ಮೇಲ್ಮನವಿ ಅರ್ಜಿಯನ್ನು ಸಹ ವಜಾಗೊಳಿಸಿದೆ. ಈ ಮೂಲಕ ಆನ್ ಲೈನ್ ಮೂಲಕವೂ ಮದ್ಯ ಖರೀದಿಸವ ನಿರೀಕ್ಷೆಯಲ್ಲಿದ್ದಂತ ಮದ್ಯಪ್ರಿಯರಿಗೆ ಶಾಕ್ ನೀಡಿದೆ.ಹೆಚ್‌ಐಪಿ ಬಾರ್ ಪ್ರೈವೆಟ್ ಲಿಮಿಟೆಡ್ ಗೆ ರಾಜ್ಯ ಸರ್ಕಾರ ಪ್ರಾಯೋಗಿಕವಾಗಿ ಮದ್ಯವನ್ನು ಆನ್ ಲೈನ್ ನಲ್ಲಿ ಮಾರಾಟಕ್ಕೆ ಅಧಿಕಾರ ಪತ್ರವನ್ನು ನೀಡಲಾಗಿತ್ತು. ಇಂತಹ ಸರ್ಕಾರದ ಕ್ರಮಕ್ಕೆ ಸಾರ್ವಜನಿಕರು, ಬಾರ್ ಪರವಾನಗಿದಾರರು ಆಕ್ಷೇಪ ವ್ಯಕ್ತ ಪಡಿಸಿದ್ದರು. ಇದರಿಂದಾಗಿ ಅಬಕಾರಿ ಆಯುಕ್ತರು ಅಧಿಕಾರ ಪತ್ರವನ್ನು ಹಿಂಪಡೆದಿದ್ದರು.ಇಂತಹ ಕ್ರಮವನ್ನು ಪ್ರಶ್ನಿಸಿ ಹೆಚ್‌ಐಪಿ ಬಾರ್ ಪ್ರೈವೇಟ್ ಲಿಮಿಟೆಡ್ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿತ್ತು. ಇಂತಹ ಅರ್ಜಿಯ ವಿಚಾರಣೆ ನಡೆಸಿದಂತ ಹೈಕೋರ್ಟ್ ವಿಭಾಗೀಯ ವೀಠಕ್ಕೆ ರಾಜ್ಯ ಸರ್ಕಾರ ಆನ್ ಲೈನ್ ಮದ್ಯ ಮಾರಟಕ್ಕಿದ್ದ ಅನುಮತಿ ರದ್ದುಪಡಿಸಲಾಗಿದೆ ಅಂತ ತಿಳಿಸಿತ್ತು.
ಹೀಗಾಗಿ ಹೈಕೋರ್ಟ್ ನ ನ್ಯಾಯಮೂರ್ತಿಗಳಾದಂತ ಸತೀಶ್ ಚಂದ್ರ ಹಾಗೂ ನ್ಯಾಯಮೂರ್ತಿ ವಿ.ಶ್ರೀಪಾಷಾನಂದ ವಿಭಾಗೀಯ ಪೀಠವು, ಅಬಕಾರಿ ಕಾಯ್ದೆಯಡಿ ಮದ್ಯಮಾರಾಟಕ್ಕೆ ಅವಕಾಶ ಇಲ್ಲ. ಆನ್ ಲೈನ್ ಮದ್ಯ ಮಾರಾಟಕ್ಕೆ ಅವಕಾಶ ಇಲ್ಲ ಎಂಬುದಾಗಿ ಹೇಳುವ ಮೂಲಕ, ಅನುಮತಿಯನ್ನು ನೀರಾಕರಿಸಿ, ಅರ್ಜಿಯನ್ನು ವಜಾಗೊಳಿಸಿದೆ.