ಪ್ರೇಕ್ಷಕರಿಗೆ ಬೇಡವಾದ ಆಲಿಯಾ; ಸಡಕ್-​2 ಗೆ ಅತಿ ಕಡಿಮೆ ರೇಟಿಂಗ್​

ಬೆಂಗಳೂರು:- ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರ ಬಾಲಿವುಡ್​ನಲ್ಲಿ ನೆಪೋಟಿಸಂ (ಸ್ವಜನಪಕ್ಷಪಾತ) ಕುರಿತಾಗಿ ಸಾಕಷ್ಟು ಚರ್ಚೆಗಳಾಗುತ್ತಿವೆ. ಸ್ಟಾರ್ ಮಕ್ಕಳಿಂದಾಗಿ, ಹೊರಗಿನವರಿಗೆ ಸಮಸ್ಯೆಗಳಾಗುತ್ತಿವೆ ಎಂಬ ದೂರು ವ್ಯಾಪಕವಾಗಿ ಕೇಳಿ ಬರುತ್ತಿದೆ. ಆಲಿಯಾ ಭಟ್ ಸಹ ಸಿನಿಮಾ ಕುಟುಂಬದವರಾದ್ದರಿಂದ, ಅವರು ಸಹ ನೆಟ್ಟಿಗರ ಕಂಗಣ್ಣಿಗೆ ಗುರಿಯಾಗಿದ್ದಾರೆ. ಈಗಾಗಲೇ ಅವರ ‘ಸಡಕ್ 2’ ಚಿತ್ರದ ಟ್ರೇಲರ್​ಗೆ ಒಂದು ಕೋಟಿಗೂ ಹೆಚ್ಚು ಡಿಸ್ಲೈಕ್​ಗಳು ಸಿಗುವ ಮೂಲಕ, ಅತೀ ಹೆಚ್ಚು ಡಿಸ್ಲೈಕ್​ಗಳಿಗೆ ಪಾತ್ರವಾದ ಮೊದಲ ಭಾರತೀಯ ಚಿತ್ರ ಎಂಬ ದಾಖಲೆಗೆ ಪಾತ್ರವಾಗಿತ್ತು. ಈಗ ಚಿತ್ರ ಇನ್ನೊಂದು ದಾಖಲೆ ಮಾಡಿದೆ. ಮಹೇಶ್ ಭಟ್ ನಿರ್ದೇಶನದ ‘ಸಡಕ್ 2’ ಚಿತ್ರವು ಆಗಸ್ಟ್ 28ರ (ಶುಕ್ರವಾರ) ರಾತ್ರಿ 7.30ಕ್ಕೆ ಡಿಸ್ನಿ ಹಾಟ್​ಸ್ಟಾರ್​ನಲ್ಲಿ ಪ್ರೀಮಿಯರ್ ಆಗಿದೆ. ಚಿತ್ರವನ್ನು ಜಗತ್ತಿನಾದ್ಯಂತ ಕೋಟ್ಯಂತರ ಜನ ನೋಡಿದ್ದರೂ, ಐಎಂಡಿಬಿಯಲ್ಲಿ ಅತೀ ಕಡಿಮೆ ರೇಟಿಂಗ್ ಪಡೆದ ಚಿತ್ರ ಎಂಬ ಹೊಸ ದಾಖಲೆಯನ್ನು ‘ಸಡಕ್ 2’ ತನ್ನದಾಗಿಸಿಕೊಂಡಿದೆ.

Leave a Reply

Your email address will not be published.