ಮಡಿವಾಳ ಸಮುದಾಯವನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸುವಂತೆ ಸರ್ಕಾರವನ್ನು ಒತ್ತಾಯಿಸಲು ಬಸವ ಮಾಚಿದೇವ ಸ್ವಾಮೀಜಿ ನೇತೃತ್ವದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಳಿಗೆ ನಿಯೋಗ ತೆರಳಲು ‘ಕಾಯಕ ಜನೋತ್ಸವ’ದಲ್ಲಿ ತೀರ್ಮಾನಿಸಲಾಯಿತು.
ಸವ ಮಾಚಿದೇವ ಸ್ವಾಮೀಜಿ ಅವರ ಮೂರನೇ ಪಟ್ಟಾಧಿಕಾರ ಮಹೋತ್ಸವ, 37ನೇ ಜನ್ಮದಿನ ಹಾಗೂ 22ನೇ ಜಂಗಮದೀಕ್ಷೆಯ ಅಂಗವಾಗಿ ಮಾಚಿದೇವ ಮಹಾಸಂಸ್ಥಾನ ಮಠದಲ್ಲಿ ಬುಧವಾರ ನಡೆದ ಕಾಯಕ ಜನೋತ್ಸವದಲ್ಲಿ ಸಮುದಾಯದ ಮುಖಂಡರು ಮೀಸಲಾತಿಯ ಬೇಡಿಕೆಯನ್ನು ಮುನ್ನೆಲೆ ತಂದು ಚರ್ಚಿಸಿದರು.
‘ಹೆದರಿಸಿ, ಬೆದರಿಸಿ ಸೌಲಭ್ಯ ಪಡೆಯುವ ಸಮುದಾಯ ನಮ್ಮದಲ್ಲ. ಊರಿಗೆ ಒಂದೊ, ಎರಡೊ ಮಡಿವಾಳರ ಮನೆಗಳಿವೆ. ಸ್ಪರ್ಧೆ, ಪೈಪೆÇೀಟಿ ಮಾಡಲು ಸಾಧ್ಯವಿಲ್ಲ ಎಂಬುದೂ ಗೊತ್ತಿದೆ. ಮಡಿವಾಳ ಸಮುದಾಯದ ಸ್ಥಿತಿ ನೋಡಿ ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಿ. ನಿಮ್ಮೊಂದಿಗೆ (ಮುಖ್ಯಮಂತ್ರಿ) ನಾವು ಇರುತ್ತೇವೆ’ ಎಂದು ಬಸವ ಮಾಚಿದೇವ ಸ್ವಾಮೀಜಿ ಮನವಿ ಮಾಡಿದರು.
12 ವರ್ಷಗಳ ಹಿಂದೆ ಬಿ.ಎಸ್.ಯಡಿಯೂರಪ್ಪ ಅವರು ಮಡಿವಾಳರನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸುವ ಆಶ್ವಾಸನೆ ನೀಡಿದ್ದರು. ಕುಲಶಾಸ್ತ್ರೀಯ ಅಧ್ಯಯನ ನಡೆದು ಶಿಫಾರಸು ಸಿದ್ಧವಾಗಿದೆ. ಸಚಿವ ಸಂಪುಟದ ಒಪ್ಪಿಗೆಗೆ ಕಾಯುವ ಅಗತ್ಯವಿಲ್ಲ. ಮಕ್ಕಳ ಶೈಕ್ಷಣಿಕ ಅಭಿವೃದ್ಧಿಯ ದೃಷ್ಟಿಯಿಂದ ಮೀಸಲಾತಿಯ ಅಗತ್ಯವಿದೆ. ಮಡಿವಾಳರ ಬಗ್ಗೆ ಕರುಣೆ, ಅನುಕಂಪ ಇದ್ದರೆ ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಿ’ ಎಂದರು.
ಈ ಸಂದರ್ಭದಲ್ಲಿ ಮಾದಾರ ಗುರು ಪೀಠದ ಬಸವ ಮೂರ್ತಿ ಮಾದಾರ ಚನ್ನಯ್ಯ ಶ್ರೀಗಳು, ಕಾಯಕ ಯೋಗಿ ಶ್ರೀ ಶಾಂತವೀರ ಸ್ವಾಮಿಜೀ, ಬೋವಿ ಗುರು ಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮಿಜಿ ಸೇರಿದಂತೆ ಸಮಾಜದ ಮುಖಂಡರು ಭಾಗವಹಿಸಿದ್ದರು