ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಹುರುಗಲವಾಡಿ ಗ್ರಾಮಕ್ಕೆ ಕಬ್ಬು ಕಟಾವ್ ಮಾಡಲು ಬಂಜಾರ ಸಮುದಾಯದ ಕೂಲಿಗಾರರ ಜೊತೆಗೆ ವಲಸೆ ಹೋಗಿದ್ದ ಅಪ್ರಾಪ್ತ ಬಾಲಕಿ ಆರತಿಬಾಯಿಯ ಮೇಲೆ ಅತ್ಯಾಚಾರ ಮತ್ತು ಬರ್ಬರ ಕೊಲೆ ನಡೆದಿರುವುದನ್ನು ನಾವು ಖಂಡಿಸುತ್ತೇವೆ. ಇಂತಹ ಅಮಾನವೀಯ ಘಟನೆಗಳು ಮರುಕಳಿಸದಂತೆ ಕ್ರಮವಹಿಸಲು ಒತ್ತಾಯಿಸುತ್ತೇವೆ. ಹೊಟ್ಟೆಪಾಡಿಗಾಗಿ ದುಡಿಯಲು ಬಳ್ಳಾರಿ ಜಿಲ್ಲೆಯಿಂದ ದೂರದ ಮಂಡ್ಯ ಜಿಲ್ಲೆಗೆ ಕುಟುಂಬದ ಜೊತೆಗೆ ವಲಸೆ ಹೋಗಿದ್ದ ಹೊಸಪೇಟೆ ತಾಲ್ಲೂಕಿನ ತಾಳೆಬಸಾಪುರ ತಾಂಡದ ಕುಮಾರಿ ಆರತಿಬಾಯಿಗೆ (11 ವರ್ಷ) ನ್ಯಾಯ ಒದಗಿಸಲು ಈ ಕೆಳಗಿನ ಬೇಡಿಕೆ ಈಡೇರಿಸಲು ಒತ್ತಾಯಿಸುತ್ತೇವೆ.
1. ಕುಮಾರಿ ಆರತಿಬಾಯಿಯ ಮೇಲೆ ಅತ್ಯಾಚಾರ ಮತ್ತು ಬರ್ಬರ ಕೊಲೆ ಮಾಡಿರುವ ಹುರುಗಲವಾಡಿ ಗ್ರಾಮದ ಆಕಾಶ್ ತಂದೆ ಅಪ್ಪಾಜಣ್ಣನನ್ನು ಕಠಿಣ ಶಿಕ್ಷೆಗೊಳಪಡಿಸಬೇಕು.
2.ಈ ಬರ್ಬರ ಕೃತ್ಯ ನಡೆಸಿದ ಆಕಾಶ್ ನಿಗೆ ಕುಮ್ಮಕ್ಕು ನೀಡಿರುವ ಕೆಲವರು ಮತ್ತು ಸಾಕ್ಷ್ಯ ನಾಶಪಡಿಸಲು ಪ್ರಯತ್ನ ಮಾಡುತ್ತಿರುವ ಕೆಲವರನ್ನು ತಕ್ಷಣದಲ್ಲಿ ಬಂಧಿಸಬೇಕು.
3. ಈ ಅತ್ಯಾಚಾರಿ ಕೊಲೆಗಡುಕರಿಗೆ ಶೀಘ್ರವಾಗಿ ಕಠಿಣ ಶಿಕ್ಷೆಯಾಗಲು ತಕ್ಷಣ ತ್ವರಿತ ನ್ಯಾಯಾಲಯವನ್ನು ಸ್ಥಾಪಿಸಿ ವಿಚಾರಣೆ ಪ್ರಾರಂಭಿಸಬೇಕು.
4. ಮೃತ ಆರತಿಬಾಯಿ ಕುಟುಂಬಕ್ಕೆ ಕನಿಷ್ಠ 25 ಲಕ್ಷ ರೂ ಪರಿಹಾರ ಘೋಷಿಸಬೇಕು.
5. ಬಡತನದ ಕಾರಣಕ್ಕಾಗಿ ವಲಸೆ ಹೋಗುತ್ತಿರುವ ಬಂಜಾರರಿಗೆ ಸೂಕ್ತ ರಕ್ಷಣೆ, ಸೌಲಭ್ಯಗಳನ್ನು ನೀಡಬೇಕು. ಮಕ್ಕಳಿಗೆ ಶಿಕ್ಷಣ, ಸುರಕ್ಷತೆಯ ಕ್ರಮವಹಿಸಬೇಕು. ವಲಸೆಗೆ ಶಾಶ್ವತ ಪರಿಹಾರ ಕಂಡು ಹಿಡಿಯಬೇಕು.
ಈ ಮೇಲಿನ ಎಲ್ಲಾ ಬೇಡಿಕೆಗಳನ್ನು ಈಡೇರಿಸಲು ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತೇವೆ. ಇಲ್ಲವಾದ್ದಲ್ಲಿ ರಾಜ್ಯದಲ್ಲಿ ಉಗ್ರವಾದ ಹೋರಾಟವನ್ನು ನಡೆಸಲಾಗುತ್ತದೆ.
ಈ ಸಂದರ್ಭದಲ್ಲಿ ಗಿರೀಶ್‍ನಾಯ್ಕ್ ನಿರ್ದೇಶಕರು ತಾಂಡ ಅಭಿವೃದ್ಧಿ ನಿಗಮ, ಸುರೇಶ್‍ನಾಯ್ಕ್ ತಾಲ್ಲೂಕು ಪಂಚಾಯಿತಿ ಸದಸ್ಯರು, ವೀಣಾಬಾಯಿ, ಟಿ.ಶಫೀವುಲ್ಲಾ ಜನಶಕ್ತಿ ರಾಜ್ಯ ಸಮಿತಿ ಸದಸ್ಯರು, ಶಿವುಯಾದವ್ ವಕೀಲರು, ಸತೀಶ್‍ಕುಮಾರ್, ರಮೇಶ್, ಗೀತಾ, ತ್ರಿವೇಣಿಸೇನ್, ರವಿಕುಮಾರ್, ಮೋಹನ್ ಪೂಜಾರಿ, ಮನೋಹರ್, ಶಫೀವುಲ್ಲಾ, ನಾಗರಾಜ್‍ನಾಯ್ಕ್, ರಾಜಗೋಪಾಲ್‍ಆಚಾರ್, ಅಶ್ವಿನಿ, ಅರ್ಜುನ್, ಸಂದೇಶ್, ಸಂಜಯ್, ಜಗದೀಶ್, ವಸಂತಕುಮಾರ್, ಉಮಾಪತಿ, ಚಂದ್ರನಾಯ್ಕ್, ಅನಿಲ್‍ಕುಮಾರ್, ವಿಕಾಸ್, ಜಯರಾಮ್, ಕುಶಾಲ್, ಕುಮುದ, ಚಂದ್ರು ಇನ್ನು ಉಪಸ್ಥಿತರಿದ್ದರು.