ಕೂನಬೇವು ಅಂಗನವಾಡಿ ಮಕ್ಕಳ ಆರೋಗ್ಯ ತಪಾಸಣೆ ನಡೆಯಿತು

ನಿತ್ಯವಾಣಿ,ಚಿತ್ರದುರ್ಗ, (ಆ.10) : ಚಿತ್ರದುರ್ಗ ತಾಲ್ಲೂಕು ಬೆಳಗಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಕೂನಬೇವು ಗ್ರಾಮದಲ್ಲಿ ಅಂಗನವಾಡಿ ಶಾಲಾ ಮಕ್ಕಳ ಸಾಮಾನ್ಯ ಆರೋಗ್ಯ ತಪಾಸಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು
ಈ ವೇಳೆಯಲ್ಲಿ ಮಕ್ಕಳ ಆರೋಗ್ಯ ತಪಾಸಣೆ ನಡೆಸಿದ ಆರೋಗ್ಯ ಸುರಕ್ಷಣಾಧಿಕಾರಿ ಶ್ರೀಮತಿ ಭಾರತೀ ಕಟ್ಟಿಮನಿ ಮಾತನಾಡಿ ” ಕೋವಿಡ್ ಮೂರನೆ ಅಲೆ ಮಕ್ಕಳಿಗೆ ಬೇಗ ಬರುತ್ತದೆ ಎಂದು ಆತಂಕಪಡುವ ಅಗತ್ಯವಿಲ್ಲ ಆದರೆ ಮಕ್ಕಳ ಸುಚಿತ್ವದ ಕಡೆ ಗಮನ ಹರಿಸಿ, ಮಕ್ಕಳ ಆರೋಗ್ಯದಲ್ಲಿ ಏನೇ ವೆತ್ಯಾಸವಾದರು ತಕ್ಷಣ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬೇಟಿಕೊಡಿ” ಎಂದು ಪೋಷಕರಿಗೆ ಸಲಹೆ ನೀಡಿದರು.
ಈ ಸಂಧರ್ಭದಲ್ಲಿ ಬೆಳಗಟ್ಟ ಪ್ರಾ.ಆ.ಕೇಂದ್ರದ ಸಮುದಾಯ ಆರೋಗ್ಯಾಧಿಕಾರಿ ಕು. ಭಾರತಮ್ಮ,
ಆಶಾ ಕಾರ್ಯಕರ್ತೆಯರಾದ ಸರಸ್ವತಿ , ಅನುರಾಧ, ತಿಪ್ಪಮ್ಮ, ಅಂಗನವಾಡಿ ಕಾರ್ಯಕರ್ತೆ ಸುನಂದ, ಸವಿತಾ, ಮತ್ತು ಶೈಲಾ ಹಾಜರಿದ್ದರು.

 

Leave a Reply

Your email address will not be published.