ಚಿತ್ರದುರ್ಗದ-13 : ಚಿತ್ರದುರ್ಗದಲ್ಲಿ ಮೆಡಿಕಲ್ ಕಾಲೇಜಿಗೆ 50 ಕೋಟಿ ಕೊಡುತ್ತೇನೆಂದು ಸಿಎಂ ಹೇಳಿದ್ದರು ಆದರೆ ಇದುವರೆಗೂ ಆಹಣ ಮಂಜೂರಾಗಿಲ್ಲ, ಸಚಿವ ಸುಧಾಕರ್ ಅವರು ಚಿತ್ರದುರ್ಗಕ್ಕೆ ಬಂದು ಆಶ್ವಾಸನೆ ಕೊಟ್ಟು ಹೋಗಿದ್ದರು, ಹಿಂದೆ ಜವಾಬ್ದಾರಿ ಸ್ಥಾನದಲ್ಲಿದ್ದ ಜಗದೀಶ್ ಶೆಟ್ಟರ್, ಸಿದ್ದರಾಮಯ್ಯ, ಆಂಜನೇಯ ಎಲ್ಲರೂ ವಿಶ್ವಾಸ ಕೊಟ್ಟು ಮರೆತಿದ್ದರು, ಆದರೆ ಈಗ ಚಿತ್ರದುರ್ಗದ ಎಲ್ಲಾ ಶಾಸಕರು ಸೇರಿ ಒಗ್ಗಟ್ಟಿನಿಂದ ವಿಧಾನಸಭೆ ಅಧಿವೇಶನ ಕಾರ್ಯಕ್ರಮಗಳಿಗೆ 50ಕೋಟಿ ಮಂಜೂರಾತಿ ಆಗುವವರೆಗೂ ಬಹಿಷ್ಕಾರ ಹಾಕುತ್ತೇವೆ, ನಾವು ಮೆಡಿಕಲ್ ಕಾಲೇಜ್ ಆಗುವವರೆಗೂ ಹೋರಾಟ ಕೈಬಿಡುವುದಿಲ್ಲ ಸುಖಾಸುಮ್ಮನೆ ರೈತ ಸಂಘಟನೆ ಇನ್ನಿತರ ಸಂಘಟನೆಗಳು ಜಿಲ್ಲೆಯ ಎಲ್ಲಾ ಶಾಸಕರು ನರ ಸತ್ತರು ಎಂದು ಎನ್ನುತ್ತಿದ್ದಾರೆ ಇದು ಸರಿಯಲ್ಲ ಎಂದು ಚಿತ್ರದುರ್ಗ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಸಚಿವ ಶ್ರೀರಾಮುಲು ಇದಕ್ಕೆ ಸಮ್ಮತಿಸಿದರು, ಈ ಸಂದರ್ಭದಲ್ಲಿ ಎಂ ಚಂದ್ರಪ್ಪ, ಗೂಳಿಹಟ್ಟಿ ಶೇಖರ್ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ, ಹಾಗೂ ಇನ್ನಿತರ ಮುಖಂಡರು ಹಾಜರಿದ್ದರು