ಸಂಘರ್ಷ ನಿವಾರಣೆಗಾಗಿ ಶಾಂತಿ ಸೌಹಾರ್ದತೆ ಸಮಿತಿ ಮಹತ್ವ ಕುರಿತು ಚಿಂತನ ಸಭೆ

ನಿತ್ಯವಾಣಿ, ಚಿತ್ರದುರ್ಗ,(ಆ.27) : ಮಠದ ಕುರುಬರಹಟ್ಟಿ ಯಲ್ಲಿ ವಿಮುಕ್ತಿ ವಿದ್ಯಾಸಂಸ್ಥೆ ಚಿತ್ರದುರ್ಗ, ಧಮ್ಮ ಕೇಂದ್ರದಲ್ಲಿ ಸಂಘರ್ಷ ನಿವಾರಣೆಗಾಗಿ ಶಾಂತಿ ಸೌಹಾರ್ದತೆ ಸಮಿತಿ ಮಹತ್ವ ಕುರಿತು ಚಿಂತನ ಸಭೆ ನಡೆಸಲಾಯಿತು. ಈ ದಿನದ ಕಾರ್ಯಕ್ರಮ ಉದ್ದೇಶ ಮತ್ತು ಪ್ರಾಸ್ತಾವಿಕ ನುಡಿಯನ್ನು ಸಂಸ್ಥೆ ನಿರ್ದೇಶಕರಾದ ವಿಶ್ವ ಸಾಗರ ಮಾತಾಡುತ್ತಾ, ಪ್ರಸ್ತುತ ಈಗಿನ ಸಂದರ್ಭದಲ್ಲಿ ಧರ್ಮ-ಧರ್ಮದ ನಡೆಯುವ ಸಂಘರ್ಷ, ಜಾತಿ ಸಂಘರ್ಷ, ಹಬ್ಬ-ಹರಿದಿನಗಳಲ್ಲಿ ನಡೆಯುವ ಸಂಘರ್ಷ, ಅಂತರಾಷ್ಟ್ರೀಯ ಮಟ್ಟದಲ್ಲಿ ಆಗುವಂತ ಸಂಘರ್ಷ ಕುರಿತು ವಿಡಿಯೋ ಮೂಲಕ ಮಾಹಿತಿ ತಿಳಿಸಿರಿ. ಹಿರೋಶಿಮ ನಾಗಸಾಕಿ ಮೇಲೆ ನಡೆದ ಬಾಂಬ್ ದಾಳಿ, ತಾಜ್ ಹೋಟೆಲ್ ನಲ್ಲಿ ನಡೆದ ಘಟನೆ, ಇನ್ನಿತರೆ ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆದ ಸಂಘರ್ಷ, ಹಿಂಸೆ, ಕುರಿತು ವಿಡಿಯೋ ತೋರಿಸಿದರು ಅದೇ ರೀತಿ ಒಗ್ಗಟ್ಟಿನಿಂದ, ಶಾಂತಿಯಿಂದ, ಸಹೋದರತೆಯಿಂದ, ಬಾತೃತ್ವ ದಿಂದ ಯಾವ ರೀತಿ ಜೀವನ ನಡೆಸಬೇಕೆಂಬುದು ಮಕ್ಕಳ ಹಾಡಿನೊಂದಿಗೆ ವಿಡಿಯೋ ತೋರಿಸುವ ಮೂಲಕ ಗಮನ ಸೆಳೆದರು. ನಂತರ ASI ಗಂಗಾಧರಪ್ಪ ನಗರ ಪೊಲೀಸ್ ಠಾಣೆ ಚಿತ್ರದುರ್ಗ ಇವರು ಮಾತನಾಡಿ, ವಿವಿಧ ಸಂದರ್ಭಗಳಲ್ಲಿ ನಡೆದ ಸಂಘರ್ಷ ಮಾಹಿತಿ, ಹಾಗೂ ಪೊಲೀಸ್ ಇಲಾಖೆಯಲ್ಲಿ ನಡೆದ ಶಾಂತಿ ಸಭೆ ಕುರಿತು ಮಾತನಾಡುತ್ತಾ, ಮೊಹರಂ, ಬಕ್ರೀದ್, ರಂಜಾನ್, ಹಿಂದೂ ಮಹಾಗಣಪತಿ ಸಂದರ್ಭದಲ್ಲಿ ಆಯ ಏರಿಗಳಲ್ಲಿ, ಬೀಟ್ ಪೊಲೀಸ್ ಮುಖಾಂತರ ಮಾಹಿತಿ ಪಡೆದು, ಶಾಂತಿಸಭೆ ಮಾಡುತ್ತೇವೆ, Corona ಇರುವ ಪ್ರಯುಕ್ತ
ಒಂದು ವರ್ಷದಿಂದ ಹಿಂದೂ ಮಹಾ ಗಣಪತಿ ಮೆರವಣಿಗೆ ಇಲ್ಲ, ತುರ್ತಾಗಿ 112 ಫೋನ್ ಮಾಡಿದರೆ, ಹತ್ತು ನಿಮಿಷದಲ್ಲಿ ಸಂಘರ್ಷ ನಡೆಯುವ, ಜಾಗಕ್ಕೆ ವ್ಯಾನ್ ಸಮೇತ ಪೊಲೀಸ್ ಸಿಬ್ಬಂದಿ ಬರುತ್ತದೆ ಎಂದು ತಿಳಿಸಿದರು. ಈಗಿನ ಯುವಕರು, ಬೇರೆಬೇರೆ ಚಟಗಳಿಗೆ ಬಲಿಯಾಗಿ ಸಮಾಜದಲ್ಲಿ ಅಶಾಂತಿಯನ್ನು ಉಂಟು ಹುಟ್ಟುಹಾಕುತ್ತಿದ್ದಾರೆ ಎಂದು ತಿಳಿಸಿದರು, ವಿಮುಕ್ತಿ ಸಂಸ್ಥೆ ಮುಂದಿನ ದಿನಗಳಲ್ಲಿ ಚಿತ್ರದುರ್ಗದ ನಗರದ ಕೊಳಚೆ ಪ್ರದೇಶದಲ್ಲಿ, ಈ ರೀತಿ ಶಾಂತಿ ಸಭೆಗಳನ್ನು ನಡೆಸಬೇಕು, ನಮ್ಮ ಇಲಾಖೆಯ ಸಹಕಾರ ಸದಾ ಇರುತ್ತದೆ ತಿಳಿಸಿದರು. ನಂತರ ಚೆನ್ನೈಯಿಂದ ಬಂದಿರುವ ಡಾಕ್ಟರ್ ರಿಚರ್ಡ್ ದೇವದಾಸ್ ಹಿರಿಯ ಸಂಶೋಧಕರು ಇವರು ಸಭೆಯನ್ನುದ್ದೇಶಿಸಿ ಮಾತನಾಡುತ್ತಾ, ರಾಷ್ಟ್ರಗೀತೆ, ರಾಷ್ಟ್ರಧ್ವಜ, ಸಂಬಂಧ ಭಾತೃತ್ವ ಬಗ್ಗೆ ಮಾಹಿತಿ ತಿಳಿಸಿದರು, ಯಾವುದೇ ಧರ್ಮ, ಗ್ರಂಥಗಳು, ಅಸಮಾನತೆ ಸಂಘರ್ಷವನ್ನು ಉಂಟುಮಾಡುವುದಿಲ್ಲ, ಮತ್ತು ಯಾವುದೇ ಧರ್ಮ ಹಿಂಸೆ, ಗಲಭೆಗಳನ್ನು ಟೀಚ್ ಮಾಡುವುದಿಲ್ಲ, ಇದು ಎಲ್ಲರ ಗಮನಕ್ಕೆ ಇರಲಿ, ಬದಲಾಗಿ ರಾಜಕೀಯ ಶಕ್ತಿಗಳಿಂದ ಈ ರೀತಿ ಆಗುತ್ತದೆ ಎಂದು ತಿಳಿಸಿದರು, ಆಳವಾಗಿ ಬಂದಿರುವ ಜಾತಿವಾದ, ಕೋಮುಗಲಭೆಗಳು, ನಮ್ಮ ಹಳ್ಳಿ ನಗರಗಳಲ್ಲಿ ಯುವಕರ ಮೇಲೆ, ಆಗುವಂತಹ ದುಷ್ಪರಿಣಾಮ ಯಾವ ರೀತಿ ತಡೆಗಟ್ಟಬಹುದು, ಎಂಬುದರ ಬಗ್ಗೆ ಮನವರಿಕೆ ಮಾಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿರುತ್ತದೆ ಎಂದು ತಿಳಿಸಿದರು. ಈ ಸಂಘರ್ಷ ಗಳನ್ನು ತಡೆಗಟ್ಟಬೇಕಾದರೆ, ನಗರ ಹಳ್ಳಿ ಪ್ರದೇಶದಲ್ಲಿ ಎಲ್ಲಾ ಜನಾಂಗವಿರುವ, ಮಕ್ಕಳಿಗೆ ಟ್ಯೂಷನ್ ಮಾಡುವಂತದ್ದು, ಎರಡು ಧರ್ಮದ ನಡುವೆ, ಸಹೋದರತೆ, ಬಾಂಧವ್ಯ ಬರುವ ವೃತ್ತಿ ಕೌಶಲ್ಯಗಳನ್ನು ಏರ್ಪಡಿಸುವುದು, ಎರಡು ಧರ್ಮದ ಯುವಕರಿಗೆ ಸಾಂಸ್ಕೃತಿ ಕಾರ್ಯಕ್ರಮ ಏರ್ಪಡಿಸುವುದು, ಬೇಸಿಗೆ ಶಿಬಿರವನ್ನು ಏರ್ಪಡಿಸಿ, ಸಹೋದರತೆ, ಸಂಬಂಧವನ್ನು ಬೆಳೆಸುವುದು, ಈ ನಿಟ್ಟಿನಲ್ಲಿ ಕೆಲಸ ಮಾಡುವಂತದ್ದು ಅನಿವಾರ್ಯತೆ ಇದೆ ಎಂದು ತಿಳಿಸಿದರು. ಇವಂದು ಚಿಂತನ ಸಭೆಯಲ್ಲಿ, ಶಾಂತಿ ಸೌಹಾರ್ದ ವೇದಿಕೆ ಅಧ್ಯಕ್ಷರು ಅರುಣ್ ಕುಮಾರ್, ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಅನ್ನಪೂರ್ಣ,
ವಿಮುಕ್ತಿ ಸಂಯೋಜಕರು ಕುಮಾರ ಟಿ, ಕುಮಾರ ಎಚ್, ಗುರುರಾಜ್, ಅರಣ್ಯ ಸಾಗರ್, ಕುಮಾರಿ ಅರ್ಪಿತ, ಬಿಬಿಜಾನ, ಹಾಗೂ ಇಸ್ಲಾಂ ಧರ್ಮದ ಮುಖಂಡರು, ಸಾಮಾಜಿಕ ಚಿಂತಕರು, ಪ್ರಗತಿಪರ ಸಂಘಟಕರು, ಗ್ರಾಮ ಪಂಚಾಯತಿ ಸದಸ್ಯರು, ಶಾಲಾ ಶಿಕ್ಷಕರು, ಅರಳಿ ಸಂಘಟಕರು, ಇನ್ನಿತರೆ ಮುಖ್ಯಸ್ಥರು ಭಾಗವಹಿಸಿದರು.

Leave a Reply

Your email address will not be published.