ಚಿತ್ರದುರ್ಗ: ಬಾದಾಮಿ ಕ್ಷೇತ್ರದಲ್ಲಿ ಜನ ಅಲ್ಲ, ಬಿಜೆಪಿ ನಾಯಕರೇ ನನ್ನನ್ನು ಸೋಲಿಸಿದರು ಎಂದು ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಹೇಳಿಕೆ ನೀಡಿದ್ದಾರೆ.
ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕಿನ ಕೊಂಡ್ಲಹಳ್ಳಿ ಯಲ್ಲಿ ಗ್ರಾ.ಪಂ ಅಧ್ಯಕ್ಷ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ನಾಯಕರು 2 ಕಡೆ ಸ್ಪರ್ಧೆಗೆ ಅವಕಾಶ ನೀಡಿದ್ದರು. ಆದರೆ ಮೋದಿ, ಅಮಿತ್ ಶಾ ಅಂತವರು ಮಾತ್ರ ಎರಡು ಕಡೆ ಸ್ಪರ್ಧೆ ಮಾಡಲು ಸಾಧ್ಯ. ಶ್ರೀರಾಮುಲು ವಾಲ್ಮೀಕಿ ನಾಯಕ ಸಮಾಜದ ಸಣ್ಣ ಕುಲದವನು. ಗೆದ್ದರೆ ನಮಗೆ ಮುಳ್ಳು ಆಗುತ್ತಾನೆಂದು ಬಿಜೆಪಿ ನಾಯಕರೇ ಸೋಲಿಸಿದರು ಎಂದರು.
ಬಾದಾಮಿ ಕ್ಷೇತ್ರದಲ್ಲಿ ಸಿದ್ಧರಾಮಯ್ಯ ಎದುರು 1400 ಅಲ್ಪ ಮತಗಳಿಂದ ಸೋತಿದ್ದೇನೆ ಎಂದು ಈ ವೇಳೆ ಪ್ರತಿಕ್ರಿಯೆ ನೀಡಿದರು.