ದೆಹಲಿಯಲ್ಲಿನಡೆದ ರೈತರ ಹೋರಾಟ ಹಿಂಸಾಚಾರಕ್ಕೆ ತಿರುಗಲು ಕಾಂಗ್ರೆಸ್ ಕೈವಾಡವಿದೆ :: ಸಚಿವ ಜಗದೀಶ್ ಶೆಟ್ಟರ್

ನಿನ್ನೆ ದೆಹಲಿಯಲ್ಲಿನಡೆದ ರೈತರ ಹೋರಾಟ ಹಿಂಸಾಚಾರಕ್ಕೆ ತಿರುಗಲು ಕಾಂಗ್ರೆಸ್ ಮತ್ತು ಇನ್ನಿತರೆ ಪ್ರತಿಪಕ್ಷಗಳೇ ಕಾರಣ ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಆರೋಪಿಸಿದ್ದಾರೆ.

ಚಿತ್ರದುರ್ಗದಲ್ಲಿಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದರು.ಎಪಿಎಂಸಿ ಕಾಯ್ದೆಯನ್ನು ತಿದ್ದುಪಡಿ ಮೋದಿ ಮಾಡಿದ್ದರು. ಇದರ ವಿರುದ್ದ ಪ್ರತಿಭಟನೆಗಳು ಆರಂಭವಾದಾಗ ಮೋದಿ ಪ್ರತಿಭಟನಾಕಾರರಿಗೆ ಮನವೊಲಿ ಸುವ ಕೆಲಸವನ್ನು ಮಾಡಿದ್ದರು. ಆದರೆ ಕಾಂಗ್ರೆಸ್ ಪಕ್ಷ ಹಾಗೂ ಪ್ರತಿಪಕ್ಷಗಳು ಪ್ರತಿಭಟನಾಕಾರರಿಗೆ ಕುಮ್ಮಕ್ಕು ನೀಡುವ ಮೂಲಕ ಹುನ್ನಾರ ಮಾಡಿದ್ದಾರೆ. ಆದರೆ ರೈತರ ಅಧಾಯ ದ್ವಿಗುಣವಾಗಬೇಕು ಎನ್ನುವ ನಿಟ್ಟಿನಲ್ಲಿ ಮೋದಿ ಎಪಿಎಂಸಿ ಕಾಯ್ದೆಯಲ್ಲಿ ಸುಧಾರಣೆಗಳನ್ನು ಮಾಡುತ್ತಿದ್ದಾರೆ. ಆದರೆ ಅವರಿಗೆ ಎರಡು ವರ್ಷ ಅವಕಾಶ ಕೊಡಿ ಅದು ರೈತರಿಗೆ ಸರಿಯಾದ ಕಾಯ್ದೆಯಲ್ಲ ಎಂದು ಅನಿಸಿದರೆ ವಾಪಾಸ್ಸು ಪಡೆಯಬಹುದಾಗಿದೆ . ಯಾವುದೇ ಸರ್ಕಾರ ವಾಪಾಸ್ಸು ಪಡೆಯುತ್ತದೆ. ಆದ್ದರಿಂದ ಹೋರಾಟ ಶಾಂತಿಯುತವಾಗಿರಬೇಕು. ಕಾನೂನು ಕೈಗೆ ತೆಗೆದುಕೊಳ್ಳುವ ಕೆಲಸ ಆಗಬಾರದು. ಆದರೆ ನಿನ್ನೆ ಹಿಂಸಾಚಾರಕ್ಕೆ ತಿರುಗಿ ವ್ಯತಿರಿಕ್ತ ಪರಿಣಾಮವುಂಟಾಗಿದೆ. ಇದರಿಂದ ಈ ಘಟನೆಯ ಹಿಂದೆ ಕಾಂಗ್ರೆಸ್ ಕೈವಾಡವಿದೆ ಎಂದು ಸಾಬೀತಾಗಿದೆ. ಅವರಿಗೆ ಮಾಡಲು ಕೆಲಸವಿಲ್ಲ ಎಂದು ದೂರಿದರು.

ಮೋದಿ ಮೇಲೆ ಒಂದು ಕಪ್ಪು ಚುಕ್ಕೆ ಇಲ್ಲ. ಕಾಂಗ್ರೆಸ್ ನವರು ಇದನ್ನು ಟೀಕಾಸ್ತ್ರ ಮಾಡಿಕೊಂಡು ದೇಶವನ್ನು ಅಧೋಗತಿಗೆ ತೆಗೆದುಕೊಂಡು ಹೋಗುವ ಕೆಲಸ ಮಾಡುತ್ತಿದ್ದಾರೆ. ಮಹಾರಾಷ್ಟ್ರದ ಖ್ಯತೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮಹಾರಾಷ್ಟ್ರದಲ್ಲಿ ರಾಜಕೀಯ ಅಸ್ಥಿರತೆ ಶುರುವಾದಾಗ ಬೇಜವಾಬ್ದಾರಿ ಹೇಳಿಕೆಗಳು, ಕನ್ನಡ, ಮಾರಾಠಿ ಹಾಗೂ ಗಢಿಭಾಗದ ಇಶ್ಯೂಗಳನ್ನು ಆರಂಭಿಸುತ್ತಾರೆ. ಈಗಾಗಲೇ ಮಹಾರಾಷ್ಟ್ರದಲ್ಲಿ ರಾಜಕೀಯ ಅಸ್ಥಿರತೆ ಶುರುವಾಗಿದೆ. ಸರ್ಕಾರದ ಪಾಪ್ಯೂಲಾರಿಟಿ ಕಡಿಮೆ ಆಗಿದೆ. ಅದ್ದರಿದಲೇ ಗಢಿವಿಚಾರ ಬೆಳಗಾವಿ ತಂಟೆಯಂತಹ ಖ್ಯಾತೆ ತೆಗೆಯುತ್ತಾರೆ. ಆದರೆ ಇವೆಲ್ಲವೂ ಮುಗಿದು ಹೋದ ಅಧ್ಯಾಯ. ಕಾನೂನು ಹೋರಾಟ ಮಾಡಿ ನಾವು ಅದಕ್ಕೆ ಸರಿಯಾಗಿ ಕ್ರಮವನ್ನು ತೆಗೆದುಕೊಳ್ಳುತ್ತೆವೆ. ಆದರೆ ಒಬ್ಬ ಮುಖ್ಯ ಮಂತ್ರಿ ಬೇಜವಾಬ್ದಾರಿ ಹೇಳಿಕೆ ಕೊಡುವಂತದ್ದು ಅವರಿಗೆ ಶೋಭೆ ತರುವಂತದ್ದಲ್ಲ. ಇದನ್ನು ನಾನು ಖಂಡಿಸುತೇನೆ. ನಾವೇನು ಅವರ ಮೇಲೆ ದೌರ್ಜನ್ಯ ನಡೆಸಿಲ್ಲ.ಕರ್ನಾಟಕದಲ್ಲಿ ಮಾಠಿಗರು ನಾವೂ ಕರ್ನಾಟಕದವರೇ ಎಂದು ಸಹಬಾಳ್ವೆ ನಡೆಸಿಕೊಂಡು ಹೋಗುತ್ತಿದ್ದಾರೆ. ಆದ್ದರಿಂದ ಇಲ್ಲಿ ವ್ಯತ್ಯಾಸಗಳನ್ನು ತರಬೇಡಿ ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದರು.

 

Leave a Reply

Your email address will not be published.