ಚಿತ್ರದುರ್ಗ,ನಿತ್ಯವಾಣಿ , ಏ.01 : ಹಿರಿಯೂರು ಕ್ಷೇತ್ರದ ಬಿಜೆಪಿ ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್ ಹಿರಿಯೂರು ನಗರದ ಬಸ್ ನಿಲ್ದಾಣ ಸಮೀಪವಿರುವ ಸರ್ಕಾರಿ. ಹಿರಿಯ. ಪ್ರಾಥಮಿಕ. ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ “ವಂಶವೃಕ್ಷ”ದ ಬಗ್ಗೆ ಪಾಠ ಹೇಳಿ ಕೊಟ್ಟರು.
ಹಿರಿಯೂರು ಕ್ಷೇತ್ರದಲ್ಲಿ ಆಗಾಗ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಪಾಠ ಹೇಳಿ ಕೊಡುವ ಮೂಲಕ ಗಮನ ಸೆಳೆಯುತ್ತಿದ್ದಾರೆ. ಇಂದು ಕೂಡ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಗೆ ಭೇಟಿ ನೀಡಿ,ಮಕ್ಕಳಿಗೆ ವಂಶವೃಕ್ಷದ ಬಗ್ಗೆ ಪಾಠ ಮಾಡಿದರು. ವಂಶವೃಕ್ಷದಲ್ಲಿ ಬರುವ ವಿವರಗಳನ್ನು ಕಪ್ಪು ಹಲಗೆಯ ಮೇಲೆ ಬರೆದು ತೋರಿಸಿದರು.
ವಂಶವೃಕ್ಷ ಹೇಗೆ ಬೆಳೆಯುತ್ತದೆ ಎನ್ನುವುದರ ಮೂಲಕ ಅಜ್ಜಿ, ತಾತ ನಂತರ ಅಪ್ಪ, ಅಮ್ಮ ನಂತರ ಅಣ್ಣ ತಂಗಿ,ಹೀಗೆ ವಂಶ ವೃಕ್ಷದ ಬೆಳವಣಿಗೆಯಾಗುತ್ತದೆ ಎಂದು ಹೇಳಿದರು.
ಇನ್ನೊಂದು ರೀತಿ ಕಥೆ ಹೇಳುವ ಮೂಲಕ ಅಜ್ಜಿ ತಾತ ಇವರಿಗೆ ನಾಲ್ಕು ಜನ ಮಕ್ಕಳಿರುತ್ತಾರೆ. ನಂತರ ಇವರಿಗೆ ಎರಡು ಗಂಡು, ಎರಡು ಹೆಣ್ಣು ಮಕ್ಕಳು ಇರುತ್ತಾರೆ. ನಂತರ ಇವರಿಗೆ ಮದುವೆಯಾದ ನಂತರ ಮಕ್ಕಳು ಹೆಸರು ಬರೆಯುತ್ತಾರೆ ಎಂದು ಮಕ್ಕಳಿಗೆ ಬರೆದು ತೋರಿಸುವ ಮೂಲಕ ಪಾಠ ಹೇಳಿದ್ದಾರೆ. ಇನ್ನು ಶಾಲೆ ಬಗ್ಗೆ ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಿದರು.
ಕಳೆದ ಬಾರಿ ನಾನು ಶಾಲೆಗೆ ಬಂದಾಗ ನಿಮ್ಮ ಕಟ್ಟಡ ಸೋರುತ್ತಿತ್ತು ಈಗ ರೀಪೇರಿ ಆಗಿದೆ ನೀವು ಕೂಡ ಚನ್ನಾಗಿ ಓದಬೇಕು ಎಂದರು.
ಶಾಸಕರು ನಿಮ್ಮ ಶಾಲೆ ಯಾವ ರೀತಿ ಅಭಿವೃದ್ಧಿ ಆಗಿದೆ ಎಂದು ವಿದ್ಯಾರ್ಥಿಗಳನ್ನು ಕೇಳಿದರು. ಅದಕ್ಕೆ ಉತ್ತರ ನೀಡಿದ ವಿದ್ಯಾರ್ಥಿಗಳು ಗಿಡ ಬೆಳೆಸಿ, ಬಿಲ್ಡಿಂಗ್ ಸ್ವಲ್ಪ ರೀಪೇರಿ ಆಗಿದೆ, ಗೋಡೆ ಕಟ್ಟಿ, ಶಾಲೆಗೆ ಬಣ್ಣ ಆಗಿದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳು ಶಾಸಕರಿಗೆ ಹೊಸ ಕಟ್ಟಡ ಹಾಗೂ ಶೌಚಾಲಯ ಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕಿ ಇನ್ನೊಮ್ಮೆ ನೋಡೋಣ ಎಂದು ಸಕಾರಾತ್ಮಕವಾಗಿ ಉತ್ತರ ನೀಡಿದ್ದು, ಶಾಲೆಗೆ ಶೌಚಾಲಯದ ಅವಶ್ಯಕತೆ ಇದ್ದು, ಇದರ ಬಗ್ಗೆ ನೀಲಿ ನಕ್ಷೆ ತಯಾರಿಸಿ ಎಂದು ಶಿಕ್ಷಕರಿಗೆ ಶಾಸಕರು ತಿಳಿಸಿದರು.