ನಿತ್ಯವಾಣಿ,ಚಿತ್ರದುರ್ಗ: ಡಿ.02 : ನೀರು ನಿಲ್ಲುವ ಸ್ಥಳಗಳಲ್ಲಿ ಸೊಳ್ಳೆಗಳು ಅಭಿವೃದ್ಧಿಗೊಂಡು ಅನಾಫಿಲಿಸ್ ಎಂಬ ಹೆಣ್ಣು ಸೊಳ್ಳೆಗಳಿಂದ ಮಲೇರಿಯಾ ರೋಗವು ಒಬ್ಬರಿಂದೊಬ್ಬರಿಗೆ ಹರಡುತ್ತದೆ. ಈ ಹಿನ್ನೆಲೆಯಲ್ಲಿ ಸೊಳ್ಳೆಗಳು ಅಭಿವೃದ್ಧಿಯಾಗದಂತೆ ಪ್ರತಿಯೊಬ್ಬರೂ ಮುನ್ನೆಚ್ಚರಿಕೆ ವಹಿಸಬೇಕೆಂದು” ಚಿತ್ರದುರ್ಗ ತಾಲ್ಲೂಕು ವೈದ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ತಿಳಿಸಿದರು.
ಅವರು ಗುರುವಾರ ತಾಲ್ಲೂಕಿನ ಡೊಡ್ಡ ಸಿದ್ದವ್ವನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲ್ಲೂಕು ಅರೋಗ್ಯ ಅಧಿಕಾರಿಗಳ ಕಚೇರಿ, ಜಿಲ್ಲಾ ರೋಗವಾಹಕಗಳ ಅಶ್ರಿತ ರೋಗಗಳ ನಿಯಂತ್ರಣ ಕಚೇರಿಗಳು, ಸಂಯುಕ್ತವಾಗಿ ಡೊಡ್ಡ ಸಿದ್ದವ್ವನ ಹಳ್ಳಿ ಗ್ರಾಮಗಳ ವ್ಯಾಪಿಯ ನೈಸರ್ಗಿಕ ನೀರಿನ ತಾಣಗಳಿಗೆ ಸೊಳ್ಳೆ ಭಕ್ಷಕ ಮೀನುಗಳಾದ ಗಪ್ಪಿ ಮತ್ತು ಗಂಬ್ಯೂಸಿಯ ಮೀನುಗಳನ್ನು ಬಿಡುವುದರ ಮೂಲಕ ಗ್ರಾಮಸ್ಥರಿಗೆ ಮನವಿ ಮಾಡಿದರು.
ತಾಲ್ಲೂಕು ಅರೋಗ್ಯ ಅಧಿಕಾರಿಗಳಾದ ಬಿ.ವಿ. ಗಿರೀಶ್ ಅವರು ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಹಿರಿಯ ಅರೋಗ್ಯ ನೀರಿಕ್ಷಣಾಧಿಕಾರಿಗಳಾದ ಮಲ್ಲಿಕಾರ್ಜುನ, ರಂಗನಾಥ ರೆಡ್ಡಿ, ಹೆಚ್.ಎ. ನಾಗರಾಜ್ ಇತರರು ಭಾಗವಹಿಸಿದ್ದರು.