ಐಪಿಎಲ್‌ನಿಂದ ಹೊರಬಿದ್ದ ಲಸಿತ್ ಮಾಲಿಂಗ, ಆಸೀಸ್ ವೇಗಿಗೆ ಮುಂಬೈ ಇಂಡಿಯನ್ಸ್ ಬುಲಾವ್

ದುಬೈ: ಸುರೇಶ್ ರೈನಾ ಐಪಿಎಲ್‌ನಿಂದ ಹೊರನಡೆದು ಚೆನ್ನೈ ಸೂಪರ್‌ಕಿಂಗ್ಸ್ ತಂಡಕ್ಕೆ ಆಘಾತ ನೀಡಿರುವ ಬೆನ್ನಲ್ಲೇ, ಶ್ರೀಲಂಕಾದ ಅನುಭವಿ ವೇಗಿ ಲಸಿತ್ ಮಾಲಿಂಗ ಕೂಡ ಐಪಿಎಲ್ 13ನೇ ಆವೃತ್ತಿಯಿಂದ ಹೊರಗುಳಿದು ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡಕ್ಕೆ ಹಿನ್ನಡೆ ತಂದಿದ್ದಾರೆ.

ಕಳೆದ ವರ್ಷದ ಐಪಿಎಲ್ ೈನಲ್‌ನಲ್ಲಿ ಸಿಎಸ್‌ಕೆ ವಿರುದ್ಧ ನಿರ್ಣಾಯಕ ಅಂತಿಮ ಓವರ್ ಎಸೆದಿದ್ದ ಮಾಲಿಂಗ ಕೇವಲ 1 ರನ್‌ನಿಂದ ಮುಂಬೈಗೆ ರೋಚಕ ಗೆಲುವು ತಂದಿದ್ದರು. ವೈಯಕ್ತಿಕ ಕಾರಣ ನೀಡಿ ಮಾಲಿಂಗ ಐಪಿಎಲ್‌ನಿಂದ ಹಿಂದೆ ಸರಿದಿದ್ದು, ಶ್ರೀಲಂಕಾದಲ್ಲಿ ಕುಟುಂಬದೊಂದಿಗೆ ಉಳಿದುಕೊಳ್ಳಲಿದ್ದಾರೆ.

Leave a Reply

Your email address will not be published.