Breaking News,ನಿತ್ಯವಾಣಿ,ಚಿತ್ರದುರ್ಗ,(ಸೆ.10) :ಚಿತ್ರದುರ್ಗ ನಗರದಲ್ಲಿ ನಡು ರಸ್ತೆಯಲ್ಲಿಯೇ ಪತ್ನಿಗೆ ಚಾಕು ಹಿರಿದು ಪತಿಯಿಂದಲೇ ಬರ್ಬರ ಹತ್ಯೆ ನಡೆದಿದೆ,ಅಮೀನಾ ಬಾನು (32) ಪತಿಯಿಂದ ಕೊಲೆಯಾದ ಪತ್ನಿ,ಚಳ್ಳಕೆರೆ ರಸ್ತೆ ಇಂಡಿಯನ್ ಪೆಟ್ರೊಲ್ ಬಂಕ್ ಬಳಿ ಘಟನೆ.
ಚಿತ್ರದುರ್ಗದ ಮದಕರಿಪುರ ನಿವಾಸಿ ಅಮಿನಾ ಭಾನು, ಹೊಸಪೇಟೆ ಜಿಲ್ಲೆ, ಕಮಲಾಪುರ ನಿವಾಸಿ ಮೆಹಬೂಬ್ ಪಾಷ ದಂಪತಿಗಳು.
ಕಳೆದ 13 ವರ್ಷಗಳ ಹಿಂದೆ ವಿವಾಹವಾಗಿದ್ದ ಅಮಿನಾಭಾನು, ಮೆಹಬೂಬ್ ಪಾಷ,ಮದ್ಯಾಹ್ನ ಚಳ್ಳಕೆರೆ ತಾಲ್ಲೂಕಿನ ಚಿಕ್ಕಮ್ಮನಹಳ್ಳಿ ದರ್ಗಾಕ್ಕೆ ತೆರಳಿದ್ದ ದಂಪತಿ.ಅಮೀನಾ ಬಾನು ಪತಿ ಮೆಹಬೂಬ್ ಬಾಷಾ ಕೊಲೆ ಆರೋಪಿ.ಕೌಟುಂಬಿಕ ಕಲಹ ಹಿನ್ನೆಲೆ ಚಾಕು ಇರಿದು ಹತ್ಯೆ ಮಾಡಿರುವ ಶಂಕೆ.ಕೊಲೆ ಬಳಿಕ ಆರೋಪಿಯನ್ನ ವಶಕ್ಕೆ ಪಡೆದಿರುವ ಪೋಲೀಸರು.ಸ್ಥಳಕ್ಕೆ ಚಿತ್ರದುರ್ಗ SP ಜಿ.ರಾಧಿಕಾ ಭೇಟಿ, ಪರಿಶೀಲನೆ.ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ,