ಪ್ರಿಯಕರನೊಂದಿಗೆ ಪಿತೂರಿ ಗಂಡನ ಕೊಲೆ,,

 ನಿತ್ಯ ವಾಣಿ, ಚಿತ್ರದುರ್ಗ,(ಜೂ.21) : ಚಿತ್ರದುರ್ಗ ತಾಲೂಕು ಬರಮಸಾಗರ ಪೊಲೀಸ್ ಠಾಣಾ ವ್ಯಾಪ್ತಿಯ ಹಳುವುದರ ಗ್ರಾಮದ ಆರೋಪಿ ನಾಗಮ್ಮ ಗಂಡ ಮುರುಗೇಶ ಅವಳು ಅಕ್ರಮ ಸಂಬಂಧ ಹೊಂದಿದ ತನ್ನ ಪ್ರಿಯಕರ ಬಸವರಾಜ ಇವನೊಂದಿಗೆ ಪ್ರಚೋದನೆ ಹಾಗೂ ಸಂಚು ರೂಪಿಸಿ ತನ್ನ ಗಂಡ ಮುರುಗೇಶ ತಂದೆ ಮಹಾರುದ್ರಪ್ಪ ಅವರನ್ನು ಕೊಲೆ ಮಾಡಿರುತ್ತಾರೆ, ಆರೋಪಿ ಬಸವರಾಜ ಹಾಗೂ ನಾಗಮ್ಮ ಗಂಡ ಮುರುಗೇಶ ಇಬ್ಬರು ಹಲವು ದಿನಗಳಿಂದ ಒಬ್ಬರಿಗೊಬ್ಬರು ಪರಿಚಿತರಾಗಿದ್ದಾರೆ, ನಾಗಮ್ಮ ಮತ್ತು ಬಸವರಾಜ ಇವರ ನಡುವೆ ಅಕ್ರಮ ಸಂಬಂಧ ಹೊಂದಿದ್ದು ತನ್ನ ಗಂಡನನ್ನು ಕೊಲೆ ಮಾಡಲು ತನ್ನ ಪ್ರಿಯಕರ ಬಸವರಾಜನಿಗೆ ಪ್ರಚೋದನೆ ಹಾಗೂ ಸಂಚು ರೂಪಿಸಿರುತ್ತಾರೆ, ದಿನಾಂಕ 18 6 2021 ರಂದು ಅಳುವುದರ ಗ್ರಾಮದ ಬಳಿ ಹೆಗ್ಗೆರೆ ರಸ್ತೆಗೆ ಹೊಂದಿಕೊಂಡಿರುವ ಜಮೀನಿನಲ್ಲಿರುವ ಕೃಷಿ ಹೊಂಡದಲ್ಲಿ ಶವವಾಗಿ ಸಿಕ್ಕಿದ್ದು ಆತನ ಸಾವಿನ ಬಗ್ಗೆ ಅನುಮಾನಗೊಂಡ ಭರಮಸಾಗರ ಪೊಲೀಸರು ಕೇಸು ದಾಖಲಿಸಿಕೊಂಡು ಪರಿಶೀಲಿಸಿ ಸಂಶಯಗೊಂಡ ಹೆಂಡತಿ ಹಾಗೂ ಆಕೆಯ ಪ್ರಿಯಕರನನ್ನು ಬಂಧಿಸಿದ್ದಾರೆ, ಇದಕ್ಕೆ ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಜಿ ರಾಧಿಕಾ ರವರು ಭರಮಸಾಗರ ಪೊಲೀಸ್ ಠಾಣೆಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.ಉಚಿತ ಸುದ್ದಿ, ಜಾಹೀರಾತಿಗಾಗಿ ,👉ನಿತ್ಯವಾಣಿ  ಕನ್ನಡ ದಿನಪತ್ರಿಕೆ, ಸಂಪಾದಕರು ಎಸ್. ಟಿ .ನವೀನ್ ಕುಮಾರ್, ಚಿತ್ರದುರ್ಗ, ಮೊಬೈಲ್ -9901254020 , www.nithyavaninews.com

Leave a Reply

Your email address will not be published.