ಅವಮಾನವನ್ನು ಮೆಟ್ಟಿಲುಗಳನ್ನಾಗಿ ಮಾಡಿಕೊಂಡು ಎದ್ದು ಬಂದು ನಮಗೆ ಸಂವಿಧಾನ ಕೊಟ್ಟವರು ಡಾ. ಬಾಬಾಸಾಹೇಬ್ ಅಂಬೇಡ್ಕರ್ : ಡಾ. ಶಿವಮೂರ್ತಿ ಮುರುಘಾ ಶರಣರು

ಅವಮಾನವನ್ನು ಮೆಟ್ಟಿಲುಗಳನ್ನಾಗಿ ಮಾಡಿಕೊಂಡು ಎದ್ದು ಬಂದು ನಮಗೆ ಸಂವಿಧಾನ ಕೊಟ್ಟವರು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಎಂದು ಚಿತ್ರದುರ್ಗ ಮುರುಘಾ ಮಠದ ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು.

ಅವರು ನಗರದ ಯಂಕವ್ವನಕಟ್ಟೆಯ ರುದ್ರಭೂಮಿಯಲ್ಲಿ ಭಾನುವಾರ ಡಾ.ಬಿಆರ್.ಅಂಬೇಡ್ಕರ್ ರವರ ಮಹಾ ಪರಿ ನಿರ್ವಾಹಣ ಅಂಗವಾಗಿ ಹಮ್ಮಿಕೊಂಡಿದ್ದ ಮೌಢ್ಯ ಪರಿವರ್ತನಾ ದಿನದ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿ, ಸಂಪ್ರದಾಯಗಳಿರಬೇಕು ಆದರೆ ಗೊಡ್ಡು ಸಂಪ್ರದಾಯಗಳಿರಬಾರದು .ಸತ್ಸಂಪ್ರದಾಯಗಳಿರಬೇಕು. ಮಾನವ ಬದುಕಿನಲ್ಲಿ ನಂಬಿಕೆ ಇರಬೇಕು ಮೂಢ ನಂಬಿಕೆಮೌಢ್ಯತೆ ಇರಬಾರದು. ಪ್ರಜಾÐನವಂತಿಕೆ ಇರಬೇಕು. ವಿಚಾರವಾದದ ಕಿಚ್ಚನ್ನು ಹಚ್ಚಿದವರು ಬಾಬಾ ಸಾಹೇಬ್ ಅಂಬೇಡ್ಕರ್ . ಅಂಬೇಡ್ಕರ್ ಅವರಲ್ಲಿದ್ದಂತಹ ವೈಚಾರಿಕತೆ ನೋಡಬೇಕು. ಸಿದ್ದಾಂತಕ್ಕಾಗಿ ಅವರು ಹೋರಾಟ ಮಾಡಿದ್ದಾರೆ ಎಂದರು.

ಇಂದು ಬಾಬಾ ಸಾಹೇಬ್ ಅವರ ಸ್ಮರಣೆಯನ್ನು ಮಾಡಿಕೊಳ್ಳುವ ದಿನ. ಪ್ರಗತಿಪರ, ಚಿಂತಕರು ಅಂಬೇಡ್ಕರ್, ನಾವುಗಳು ಅಂಬೇಡ್ಕರ್ ಚಿಂತನೆಗಳನ್ನಿಟ್ಟುಕೊಂಡು ಅವರಂತೆ ವಿಚಾರ ಮಾಡಬೇಕು. ಅವರ ಬದುಕಿನಲ್ಲಿ ಗೊಂದಲವಿರಲಿಲ್ಲ. ದೇಶಕ್ಕಾಗಿ ಸ್ಪಷ್ಟ ವಿಚಾರಧಾರೆಯನ್ನು ಇಟ್ಟುಕೊಂಡಿದ್ದವರು. ಸಾಮಾನ್ಯ ಅಸಮಾನ್ಯನಾಗ ಬೇಕಾದರೆ ಮೆದುಳಿನ ಶಕ್ತಿಯನ್ನು ಅರಿತು ನಡೆಯಬೇಕು.ಅಂಬೇಡ್ಕರ್ ಅವರು ತಮ್ಮಮೆದುಳನ್ನು ದಮನಿತ ಸಮೂದಾಯಗಳನ್ನು ಮೇಲೆತ್ತಲು ಬಳಿಸಿಕೊಂಡರು.ಇದರಿಂದ ಭಾರತವೇ ಜಾಗೃತವಾಯಿತು. ಶೇಕಡ 70 ರಷ್ಟು ಸ್ವಾತಂತ್ರ್ಯದಮನಿತರಿಗೆ ಅಂಬೇಡ್ಕರ್ ಕೊಡಿಸಿದರು ಎಂದು ಶರಣರು ತಿಳಿಸಿದರು.

ಗಾಂಧಿಜಿ ಕೊಡಿಸಿದ ಸ್ವಾತಂತ್ರ್ಯ ಶೇಕಡ 30 ರಷ್ಟು ಮಂದಿಗೆ ಸಿಕ್ಕಿದೆ. ಬಾಬಾ ಸಾಹೇಬ್ ಅವರು ಕೊಡಿಸಿರುವ ಸೌಲಭ್ಯಗಳನ್ನು ಬಳಸಿಕೊಂಡು ದಮನಿತರು ಬೆಳೆಯಬೇಕು ಇನ್ನಿತರೆಯರನ್ನು ಬೆಳೆಸಬೇಕು. ಸ್ವಾಭಿಮಾನಿ ಭಾರತವನ್ನು ಕಟ್ಟಬೆಕಾದರೆ ಅಂಬೇಡ್ಕರ್ ಬಹಳಷ್ಟು ಅವಮಾನಕ್ಕೊಳಗಾಗಿದ್ದಾರೆ. ಅಂಬೇಡ್ಕರ್ ಅವರು ಅವಮಾನವನ್ನು ಮೆಟ್ಡಿಲುಮಾಡಿಕೊಂಡು ಎದ್ದು ಬಂದು ಸಂವಿಧಾನ ರಚನೆ ಮಾಡಿಕೊಟ್ಟರು. ದೇಶವನ್ನು ಧರ್ಮಗಳು ಆಳುವುದಕ್ಕಿಂತ ವಿಚಾರಗಳು ಇಂದು ಆಳುತ್ತಿವೆ. ಸಂವಿಧಾನ ನಮ್ಮ ರಾಷ್ಟ್ರ ಗ್ರಂಥ. ಸಂವಿಧಾನದ ಪುಸ್ತಕವನ್ನು ಇಟ್ಟುಕೊಂಡು ಗೌರವನ್ನು ಸಲ್ಲಿಸಿದರೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸಿದಂತಾಗುತ್ತದೆ. ಎಂದರು.

Leave a Reply

Your email address will not be published.