ಇಂದು ಮುರುಘಾ ಶರಣರಿಗೆ ಗುರುವಂದನೆ

 

ನಿತ್ಯವಾಣಿ,ಚಿತ್ರದುರ್ಗ, (ಅ.18) : ಮೈಸೂರಿಗೆ ತೆರಳಿ ದಸರಾ ಉತ್ಸವ ನೋಡಲಾಗದ ಕೋಟೆನಾಡಿನ ಜನರಿಗೆ ಹಾಗೂ ಮಧ್ಯ ಕರ್ನಾಟಕದ ಜನರಿಗೆ ಶರಣ ಸಂಸ್ಕೃತಿ ಉತ್ಸವವೇ ಮಿನಿ ದಸರಾವಾಗಿರುತ್ತೆ. ಇಲ್ಲಿ ಸತತ ಮೂರು ದಶಕಗಳಿಂದ ನಡೆಯುತ್ತಿರುವ ಶರಣ ಸಂಸ್ಕೃತಿ ಉತ್ಸವದಲ್ಲಿ ವಿವಿಧೆಡೆಗಳಿಂದ ಮಠಾಧೀಶರು, ಭಕ್ತರು ಹಾಗೂ ಪ್ರವಾಸಿಗರು ಬರುತ್ತಾರೆ. ಇಲ್ಲಿನ ಸೊಬಗು ಹಾಗು ಉತ್ಸವದ ಆಚರಣೆಯಲ್ಲಿ ಭಾಗಿಯಾಗಿ ದಸರಾ ಹಬ್ಬವನ್ನು ಸಡಗರದಿಂದ ಆಚರಿಸುತ್ತಾರೆ. ಶರಣರ ಗುರುವಂದನೆಗೆ ನಾಳೆ ಸಾರ್ವಜನಿಕರಿಗೆ ಮುಕ್ತ ಅವಕಾಶ ಎಂದು ಶಿಮುಶ ಅವರ ಪೀಠಾರೋಹಣ ತೃತೀಯ ದಶಮಾನೋತ್ಸವ ಸಮಿತಿಯ ಭೀಮಸಮುದ್ರದ ಸಿ. ಶಂಕರಮೂರ್ತಿ ಹೇಳಿದರು.


ಶ್ರೀಮಠದಲ್ಲಿ ನಡೆದ ಭಾನುವಾರ ಸಂಜೆ   ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ
ಬಸವತತ್ವ ಅನುಯಾಯಿಗಳಾಗಿರುವ ಶರಣರು ನಾಡಿನಲ್ಲಿ ಅನೇಕ ಬದಲಾವಣೆ ತಂದಿದ್ದಾರೆ. ಅವರಿಗೆ ಅಭಿನಂದಿಸುವುದು ನಮ್ಮ ಕರ್ತವ್ಯ. ವಿವಿಧ ಮಠಾಧೀಶರು ಭಕ್ತರು ಡಾ.ಶಿವಮೂರ್ತಿ ಮುರುಘಾ ಶರಣರಿಗೆ ಅವರದೇ ಬೆಳ್ಳಿ ಪ್ರತಿಮೆ ನೀಡಿ ಗುರುವಂದನೆ ಸಲ್ಲಿಸಲಾಗುತ್ತದೆ ಎಂದರು.ಡಾ.ಶಿವಮೂರ್ತಿ ಮುರುಘಾ ಶರಣರ ಮೂರನೇ ದಶಮಾನೋತ್ಸವ ಹಾಗೂ ಶರಣ ಸಂಸ್ಕೃತಿ ಉತ್ಸವದ ಅಂತಿಮ ದಿನವಾದ ಸೋಮವಾರ ನಡೆಯುವ ಗುರುವಂದನೆ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಭಾಗವಹಿಸಲಿದ್ದಾರೆ ಎಂದು ಉತ್ಸವ ಸಮಿತಿ ಗೌರವಾಧ್ಯಕ್ಷರಾದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಹೇಳಿದರು.

ಶರಣ ಸಂಸ್ಕೃತಿ ಉತ್ಸವ ಸಮಿತಿಯ ಕಾರ್ಯಾಧ್ಯಕ್ಷರಾದ ಕೆ.ಎಸ್.ನವೀನ್ ಮಾತನಾಡಿ,
ಐತಿಹಾಸಿಕ ಹಿನ್ನೆಲೆಯ ಶೂನ್ಯಪೀಠ ಪರಂಪರೆ ಮುರುಘಾ ಮಠದ ಪೀಠಾಧಿಪತಿಗಳು ಪೂರ್ವಜರ ಕಾಲದಿಂದಲೂ ಐಶಾರಾಮಿಯಾದ ಬಂಗಾರ ಕಿರೀಟ ಧರಿಸಿ ಪೀಠಾರೋಹಣ ಮಾಡೋದು ವಾಡಿಕೆ ಯಾಗಿತ್ತು. ಆದರೆ ಸಾಂಪ್ರದಾಯಿಕ ಆಚರಣೆ ನಿಲ್ಲಿಸಿ, ವೈಚಾರಿಕತೆ ಆಚರಣೆಗೆ ನಾಂದಿ ಹಾಡಿ ಬಂಗಾರದ ಕಿರೀಟ ಧಾರಣೆ ಮಾಡದೇ ರುದ್ರಾಕ್ಷಿ ಕಿರೀಟ ಧರಿಸಿ ಪೀಠಾರೋಹಣ ಮಾಡಿದ್ದಾರೆ ಅಂತಹ ಶರಣರ ಮೂರನೇ ಪೀಠಾರೋಹಣ ಯಶಸ್ವಿಯಾಗಿದೆ ಸೋಮವಾರ ನಮಗೆ ಹಬ್ಬ ಎಂದರು.

ಸುದ್ದಿಗೋಷ್ಟಿಯಲ್ಲಿ ಡಾ.ಹನುಮಲಿ ಷಣ್ಮುಖಪ್ಪ, ಪಟೇಲ್ ಶಿವಕುಮಾರ್, ಸಿದ್ದಾಪುರದ ಎಸ್.ವಿ.ನಾಗರಾಜಪ್ಪ ಇದ್ದರು.

Leave a Reply

Your email address will not be published.