ಪತ್ರಕರ್ತ ವೃತ್ತಿಧರ್ಮ ಜೀವನ ಧರ್ಮವನ್ನು ಪಾಲಿಸಬೇಕು::ಶಿವಮೂರ್ತಿ ಮುರುಘಾ ಶರಣರು

ಕೊರೋನಾದಿಂದ ಮೃತಪಟ್ಟಾಗ ದೇಶದಲ್ಲಿಯೇ ಪರಿಹಾರ ಕೊಟ್ಟ ಮೊದಲ ರಾಜ್ಯ ಕರ್ನಾಟಕವಾಗಿದ್ದು, ಪತ್ರಕರ್ತರ ಶ್ರೇಯೋಭಿವೃದ್ದಿಗೆ ರಾಜ್ಯ ಸಂಘ ಹಾಗೂ ರಾಜ್ಯ ಸರ್ಕಾರ  ಸದಾ ಬದ್ಧವಾಗಿದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಹೇಳಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಚಿತ್ರದುರ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ದಿಂದ ಭಾನುವಾರ ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಕೋವಿಡ್ 19 ಮತ್ತು ಮಾಧ್ಯಮಗಳು ವಿಚಾರ ಸಂಕಿರಣ    ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಉದ್ಘಾಟಿಸಿ ಮಾತನಾಡುತ್ತಾ,

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮೃತ ಪತ್ರಕರ್ತರಿಗೆ ತಲಾ ಐದು ಲಕ್ಷ ರೂ ಗಳನ್ನು ನೀಡುವ ಮೂಲಕ ಪತ್ರಕರ್ತರ ಕುಟುಂಬಗಳಿಗೆ ಧೈರ್ಯ ತುಂಬಿದರು. ಪತ್ರಕರ್ತರ ವೃತ್ತಿ ಬಹಳ ಮಹತ್ವವಾದುದು, ಕೋವಿಡ್ ಅಟ್ಟಹಾಸದ ಸಂದರ್ಭದಲ್ಲಿ ಎಲ್ಲರಿಗೂ ಮನೆಯಲ್ಲಿ ಇರಿ ಮನೆಯಲ್ಲಿ ಇರಿ ಎಂದು ಹೇಳಿದ ಸರ್ಕಾರ ಪತ್ರಕರ್ತರನ್ನು ಕೊರೋನಾ ವಾರಿಯರ್ಸ್ ಆಗಿ ಮಾಡಿತು ಅಂತಹ ಪತ್ರಕರ್ತರು ಬೀದಿಗೆ ಬೀಳಲು ಸಂಘ ಬಿಡುವುದಿಲ್ಲ. ನಾವು ಸದಾ ನಿಮ್ಮೊಂದಿಗೆ ಇರುತ್ತೇವೆ ಎಂದರು.

ಮಹಾತ್ಮ ಗಾಂಧೀಜಿ ಹಾಗೂ ಡಾ.ಬಿ.ಆರ್.‌ ಅಂಬೇಡ್ಕರ್ ಅವರು ದೇಶ ಕಂಡ ಮಹಾನ್ ಪತ್ರಕರ್ತರು ಆಗಿದ್ದು ಅವರ‌ ಆದರ್ಶಗಳನ್ನು ಪಾಲಿಸಬೇಕು. ಪತ್ರಕರ್ತರು ಹೊಂದಾಣಿಕೆ ಮನೋಭಾವದಿಂದ ಸಂಘಟನೆಯನ್ನು ಮಾಡಿ, ಸಹಭಾಗಿತ್ವದಿಂದ ಮುನ್ನಡೆಯಿರಿ ಎಂದರು.

ದಾವಣಗೆರೆ ವಿಶ್ವವಿದ್ಯಾಲಯ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಡಾ.ಶಿವಕುಮಾರ್ ಕಣಸೋಗಿ ಮಾತನಾಡಿ, ಇಂದು ಎಲ್ಲರೂ ಪ್ರಜ್ಞಾವಂತರಾಗಿದ್ದು, ಹಿಂದಿನಂತೆ ಇಲ್ಲ. ಡಿಜಿಟಲ್ ಮಾಧ್ಯಮದ ಕಾಲದಲ್ಲಿ ಪತ್ರಕರ್ತರಿಗೆ ವೃತ್ತಿ ಕೌಶಲ್ಯ ಮುಖ್ಯ. ವೃತ್ತಿ ಪರತೆ, ವೃತ್ತಿ ನಿಷ್ಠೆ ಅತಿಮುಖ್ಯ. ಪತ್ರಕರ್ತರು ಓದುವ ಹವ್ಯಾಸವನ್ನು ಬಳಸಿಕೊಳ್ಳಿ. ಡಿಜಿಟಲ್ ತಂತ್ರಜ್ಞಾನದಲ್ಲಿ ಜಾಣರಾಗದಿದ್ದರೇ ಬರೆಯುವ ಕೌಶಲ್ಯ ಇಲ್ಲದಿದ್ದರೇ ಪತ್ರಕರ್ತರು ಫೇಲ್ ಆಗುತ್ತಿರಾ. ಮಧ್ಯ ಕರ್ನಾಟಕ ಭಾಗದಲ್ಲಿ ಪತ್ರಕರ್ತರಲ್ಲಿ ಅಧ್ಯಯನ ಕೊರತೆ ಇದೆ ಎಂದರು.

ಸಾನಿಧ್ಯವಹಿಸಿ ಮಾತನಾಡಿದ ಮುರುಘಾ ಮಠದ ಡಾ. ಶಿವಮೂರ್ತಿ ಮುರುಘಾ ಶರಣರು ಮಾತನಾಡಿ, ವೃತ್ತಿ ಧರ್ಮವನ್ನು ಕಾಯಕವಾಗಿ ಕಾಯವಾಗಿ ಮಾಡಬೇಕು. ಪತ್ರಕರ್ತರಿಗೂ ತಲೆ ಇರಬೇಕು, ‌ತಲೆಯೊಳಗೆ ತಲೆ ಇರಬೇಕು. ಬೌದ್ಧಿಕ ಶಕ್ತಿ, ಮೇದಾಶಕ್ತಿ ಹೊಂದಿರಬೇಕು. ಆಗ ಪ್ರಖರ, ನಿಖರ ಪ್ರಖ್ಯಾತ ಪತ್ರಕರ್ತರಾಗುತ್ತಾರೆ. ಜತೆಗೆ ವೃತ್ತಿಧರ್ಮ ಜೀವನ ಧರ್ಮವನ್ನು ಪಾಲಿಸಬೇಕು ಎಂದರು.

ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಲೋಕೇಶ್, ರಾಷ್ಟ್ರೀಯ ಮಂಡಳಿ ಸದಸ್ಯ ಮಾಲತೇಶ್ ಅರಸ್ ಹರ್ತಿಕೋಟೆ, ಹಿರಿಯ ಪತ್ರಕರ್ತರಾದ ಟಿ.ಕೆ.ಬಸವರಾಜ್, ನರೇನಹಳ್ಳಿ ಅರುಣ್ ಕುಮಾರ್, ಜಿಲ್ಲಾ ಅಧ್ಯಕ್ಷ ಹೆಚ್.ಲಕ್ಷ್ಮಣ್ ಉಪಾಧ್ಯಕ್ಷ ಡಿ.ಕುಮಾರಸ್ವಾಮಿ, ನಾಗರಾಜ್ ಕಟ್ಟೆ, ಪ್ರಧಾನ ಕಾರ್ಯದರ್ಶಿ ದಿನೇಶ್ ಗೌಡಗೆರೆ , ಖಜಾಂಚಿ ಮೇಘ ಗಂಗಾಧರ ನಾಯ್ಕ, ಈಶ್ವರಪ್ಪ ಇದ್ದರು.

ಜಿಲ್ಲೆಯ ಎಲ್ಲಾ ತಾಲ್ಲೂಕಿನ ಪತ್ರಕರ್ತರು ಭಾಗವಹಿ

Leave a Reply

Your email address will not be published.