ವಿಶೇಷ ವರದಿ : ಹೊಳಲ್ಕೆರೆ ರಸ್ತೆಯಲ್ಲಿ ರಸ್ತೆ ಅಗಲೀಕರಣ ಕಾಮಗಾರಿಗಳ ನಿರ್ಲಕ್ಷ್ಯ: ಭಾರಿ ಅಪಘಾತಗಳಿಗೆ ಎಡೆಮಾಡಿಕೊಟ್ಟಿದೆ

 ನಿತ್ಯವಾಣಿ ವಿಶೇಷ ವರದಿ ,ಚಿತ್ರದುರ್ಗ, (ಮೇ. 26) : ನಗರದ ಹೊಳಲ್ಕೆರೆ ರಸ್ತೆ ಮಾರಮ್ಮನ ದೇವಸ್ಥಾನದ ಬಳಿ  ಸೋಮವಾರದ  ಮಳೆ ಹೊಡೆತಕ್ಕೆ ದೊಡ್ಡ ದೊಡ್ಡ ಗುಂಡಿಗಳು  ಕುಸಿದಿವೆ,  ಈ ಜಾಗದಲ್ಲಿ ಬಹಳ ತಿಂಗಳುಗಳಿಂದ ರಸ್ತೆ ಅಗಲೀಕರಣ ಕಾಮಗಾರಿ ಚಾಲ್ತಿಯಲ್ಲಿದ್ದು ಇನ್ನು ಪೂರ್ಣ ಮಾಡದೇ ಇರುವುದು ದುರದೃಷ್ಟಕರ,   ಕೆಲವು ತಿಂಗಳಿಂದ ಗುಂಡಿಗಳನ್ನು ತೆಗೆದು ಬೇಗ ಕೆಲಸವನ್ನು ಮುಗಿಸದೆ ಅಪಘಾತಕ್ಕೆ ಎಡೆಮಾಡಿಕೊಟ್ಟಿದೆ, ಈಗ ಮಳೆಗಾಲ ಪ್ರಾರಂಭವಾಗಿದೆ, ಇದು ಚಿತ್ರದುರ್ಗ ನಗರದ  ಮುಖ್ಯ ರಸ್ತೆಯಾಗಿದ್ದು ಬರುವಂತಹ ಮಳೆಗೆ ಪಕ್ಕದಲ್ಲಿರುವ ಹೊಸ ಕಾಮಗಾರಿ ಮಾಡಿರುವ ರಸ್ತೆಯೂ  ಕೂಡ ಕುಸಿಯುವ ಸಂಭವವಿದೆ,                                   ಇಲ್ಲಿ ಯಾವಾಗಲೂ ಜನಸಂಖ್ಯೆ ಮತ್ತು ವಾಹನಗಳು ಚಲಿಸುವ ಸ್ಥಳವಾಗಿದೆ, ಈ ಕಾಮಗಾರಿಗೆ ಸಂಬಂಧಪಟ್ಟ  ಕಂಟ್ರಾಕ್ಟರುಗಳು, ಪಿಡಬ್ಲ್ಯೂಡಿ ಅಧಿಕಾರಿಗಳು, ಒಳಚರಂಡಿ ಹಾಗೂ ಜಲಮಂಡಳಿ ಇಲಾಖೆ, ಸ್ಥಳೀಯ ನಗರಸಭೆ ಸದಸ್ಯರು, ಹೆಚ್ಚಿನ ರಾಜಕಾರಣಿಗಳು ತ್ವರಿತವಾಗಿ ಕೆಲಸವನ್ನು ಪೂರೈಸಬೇಕಾಗಿದೆ ,ಕೊರೋನಾ ಲಾಕ್ ಡೌನ್ ಅಂತ ನೆಪ ಹೇಳಿ ಕುಳಿತುಕೊಳ್ಳುವುದು ಸರಿಯಲ್ಲ, ಇಲ್ಲವಾದಲ್ಲಿ ಇಲ್ಲಿ ನಡೆಯುವ ಅವಗಡಗಳಿಗೆ ತಾವೇ ಕಾರಣಕರ್ತರು ಆಗುತ್ತೀರಿ, ಇದನ್ನು ಹೋಟೆಲ್ ಉದ್ಯಮಿ ಲೋಕೇಶ್ ಜನಗಳು ಆಕ್ರೋಶಗಳತ್ತಿರುವುದನ್ನು ಮನಗೊಂಡು ನಮ್ಮ ನಿತ್ಯ ವಾಣಿ ಪತ್ರಿಕೆಗೆ ಮಾಹಿತಿಯನ್ನು ತಿಳಿಸಿದಾಗ ನಮ್ಮ ವರದಿಗಾರ ಕಲ್ಮೇಶ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲಿಸಿ ಸುದ್ದಿ ಮಾಡಿದೆ

Leave a Reply

Your email address will not be published.