ನಿತ್ಯವಾಣಿ ನ್ಯೂಸ್, ಚಿತ್ರದುರ್ಗ, ನ.02 :ನಗರದ ಎಸ್ ಜೆ ಎಂ ಕಾಲೇಜ್ ಆಫ್ ಫಾರ್ಮಸಿಯಲ್ಲಿ ಹೊಸ ಶೈಕ್ಷಣಿಕ ಪ್ರವೇಶ 2022-23ರ ಕಾರ್ಯಕ್ರಮಕ್ಕೆ ಇಂದು ಚಾಲನೆ ನೀಡಲಾಯಿತು. ಕಾರ್ಯಕ್ರಮವನ್ನು ಪ್ರಾಂಶುಪಾಲರಾದ ಡಾ ಟಿಎಸ್ ನಾಗರಾಜ್ ಹಾಗೂ ಎಲ್ಲಾ ವಿಭಾಗದ ಮುಖ್ಯಸ್ಥರು ಉದ್ಘಾಟನೆಯನ್ನು ನೆರವೇರಿಸಿದರು. ಡಾ ಟಿಎಸ್ ನಾಗರಾಜ್ ಪ್ರಾಂಶುಪಾಲರು ಹೊಸ ಮಕ್ಕಳನ್ನು ಸ್ವಾಗತಿಸಿ ಔಷಧಿ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದಕ್ಕೆ ಶುಭಾಶಯಗಳು ಹಾಗೂ ಈ ಕ್ಷೇತ್ರವು ಕಳೆದ ವರ್ಷಗಳಿಂದ ಗಣನೀಯವಾಗಿ ಬೆಳೆಯುತಿರುವ ರೀತಿ ಹಾಗೂ ಔಷಧಿ ತಜ್ಞರ ಬೇಡಿಕೆಯನ್ನು ವಿವರಿಸಿದರು. ನಂತರ ಔಷಧಿ ಕ್ಷೇತ್ರ ನಿಮ್ಮ ಜೀವನ ಮತ್ತು ಬದುಕನ್ನು ಬಂಗಾರ ಮಾಡಲಿದೆ ಎಂದು ಹೇಳಿದರು. ಡಾ ಆರ್ ಯೋಗಾನಂದ ಔಷಧ ಉಪಚಾರ ವಿಭಾಗದ ಮುಖ್ಯಸ್ಥರು ಮಾತನಾಡಿ ಫಾರ್ಮಾ ಡಿ ವಿಭಾಗವು ಆಸ್ಪತ್ರೆಯಲ್ಲಿ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂದು ಭಾರತಕ್ಕೆ ಆಸ್ಪತ್ರೆಗಳಲ್ಲಿ ಇದರ ಅನಿವಾರ್ಯತೆ ಬಗ್ಗೆ ತಿಳಿಸಿದರು. ಅಭಿನಂದನ್ ಮುನ್ನಳ್ಳಿ ಮಾತನಾಡುತ್ತಾ ಎಸ್ ಜೆ ಎಂ ವಿದ್ಯಾಪೀಠ ಹಾಗು ಫಾರ್ಮಸಿ ಕಾಲೇಜು 1983 ರಿಂದ ಬೆಳೆದು ಬಂದ ದಾರಿ ಹಾಗೂ ಪರೀಕ್ಷೆಗಳು, ಮೌಲ್ಯಮಾಪನಗಳು, ಫಾರ್ಮಸಿ ಶಿಕ್ಷಣದ ವಿವಿಧ ವಿಭಾಗಗಳ ಹಾಗೂ ಅವುಗಳ ಕಾರ್ಯಗಳನ್ನು ವಿವರಿಸಿದರು. ಡಾ. ನಟರಾಜ್ ಜಿ ಆರ್ ಫಾರ್ಮಕಾಲಜಿ ವಿಭಾಗ ಮುಖ್ಯಸ್ಥರು ಮಾತನಾಡಿ ಔಷಧಿಗಳು ಮನುಷ್ಯನ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಮತ್ತು ಅಡ್ಡ ಪರಿಣಾಮಗಳು ವಿಚಾರವನ್ನು ಮಂಡಿಸಿದರು. ಡಾ ಮಾರುತಿ ಟಿಇ ಹರ್ಬಲ್ ಔಷಧಿಗಳು ಗಿಡಮೂಲಿಕೆಗಳು ಹೇಗೆ ಔಷಧೀಯ ರೂಪಕ್ಕೆ ತರಲಾಯಿತು ಎಂದು ತಿಳಿಸಿದರು. ಡಾ ಸ್ನೇಹಲತಾ ಮುಖ್ಯಸ್ಥರು ಫಾರ್ಮಸಿಟಿಕಲ್ ವಿಭಾಗ ಅವರು ಮಾತನಾಡಿ ನಾನು ಈ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿ ಉಪನ್ಯಾಸಕಿಯಾಗಿ ಹಾಗೂ ಪೋಷಕರಾಗಿ ಕೆಲಸ ಮಾಡಿದ ಅನುಭವಗಳನ್ನು ಹೊಸ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ತಿಳಿಸಿದರು. ಡಾ ಬಸವರಾಜ್ ಎಚ್ಎಸ್ ಫಾರ್ಮ ಕೆಮಿಸ್ಟ್ರಿ ಮುಖ್ಯಸ್ಥರು ಮಾತನಾಡಿ ಔಷಧಿಗಳು ತಯಾರಿಕೆಯಲ್ಲಿ ಕೆಮಿಸ್ಟ್ರಿ ವಿಭಾಗದ ವಿವಿಧ ವಿಷಯಗಳನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ಚೈತ್ರ ಹಾಗೂ ಅಭಿಜ್ಞಾ ಪ್ರಾರ್ಥನೆಯನ್ನು ನೆರವೇರಿಸಿದರು. ವೈಷ್ಣವಿ ಸಹಾಯಕ ಪ್ರಾಧ್ಯಾಪಕಿ ಕಾರ್ಯಕ್ರವನ್ನು ನಿರ್ವಹಿಸಿದರು ಹಾಗು ವಂದನಾರ್ಪಣೆಯನ್ನು ವಿನಯ್ ಆರ್ ಸಹಾಯಕ ಪ್ರಾಧ್ಯಾಪಕರು ನೆರವೇರಿಸಿದರು.
ಈ ಕಾರ್ಯಕ್ರಮವನ್ನು ಮೊದಲ ವರ್ಷದ ಬಿ ಫಾರ್ಮ್ , ಫಾರ್ಮಾ ಡಿ ಹಾಗೂ ಡಿ ಫಾರ್ಮ ವಿದ್ಯಾರ್ಥಿಗಳು ಹಾಗೂ ಪೋಷಕರು ಪಡೆದರು.