ಉದ್ದೇಶಿತ ಹೊಳಲ್ಕೆರೆ ಪುರಸಭೆಯ ನೂತನ ಕಛೇರಿ ಕಟ್ಟಡ ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನೆ, ಹೊಳಲ್ಕೆರೆ ಪಟ್ಟಣದ ಕರೆಕಲ್ಲುದಿಬ್ಬ ಪ್ರದೇಶದಲ್ಲಿ ನಿರ್ಮಿಸಲಾದ 5.00 ಲಕ್ಷ ಲೀಟರ್ ಸಾಮಥ್ರ್ಯದ ಆರ್.ಸಿ.ಸಿ. ಮೇಲ್ಮಟ್ಟದ ಜಲಸಂಗ್ರಹಾಗಾರದ ಲೋಕಾರ್ಪಣೆ, ಹೊಳಲ್ಕೆರೆ ಪಟ್ಟಣದ ಘನ ತ್ಯಾಜ್ಯ ವಸ್ತು ನಿರ್ವಹಣೆಗಾಗಿ ಬ್ಯಾಕ್ ಹೋ ಲೋಡರ್ (ಜೆಸಿಬಿ) ವಾಹನ ಹಾಗೂ 05 ಆಟೋಟಿಪ್ಪರ್ ಗಳ ಉದ್ಘಾಟನೆ ಕಾರ್ಯಕ್ರಮವನ್ನು ಇಂದು ಹೊಳಲ್ಕೆರೆ ಪಟ್ಟಣ ಪಂಚಾಯಿತಿ ಕಛೇರಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಂ ಚಂದ್ರಪ್ಪನವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹೊಳಲ್ಕೆರೆ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಆರ್ ಎ ಅಶೋಕ್ ಹಾಗೂ ಉಪಾಧ್ಯಕ್ಷರಾದ ಕೆ ಸಿ ರಮೇಶ್, ಸದಸ್ಯರುಗಳಾದ ಬಿ.ಎಸ್. ರುದ್ರಪ್ಪ, ಪಿ.ಹೆಚ್. ಮುರುಗೇಶ್, ನಾಗರತ್ನ. ಹೆಚ್.ಆರ್.ವೇದಮೂರ್ತಿ, ಪಿ.ಆರ್. ಮಲ್ಲಿಕಾರ್ಜುನ, ಡಿ.ಎಸ್. ವಿಜಯ, ವಿಜಯಸಿಂಹ ಖಾಟ್ರೋತ್ ಎಲ್, ಸುಧಾ ಬಸವರಾಜ್, ಸೈಯದ್ ಸಜೀಲ್ ಯಾನೆ ಸೈಯದ್ ಹಕ್, ಸವಿತ ನರಸಿಂಹ ಖಾಟ್ರೋತ್, ಮಮತ ಜಯಸಿಂಹ ಖಾಟ್ರೋತ್, ಶಬೀನ ಅಶ್ರಫ್ವುಬಲ್ಲಾ, ಸೈಯದ್ ಮನ್ಸೂರ್, ಪೂರ್ಣಿಮ ಬಸವರಾಜ್, ಬಿ. ವಸಂತ ಆರ್. ರಾಜಪ್ಪ, ಬಿ.ಜೆ.ಪಿ ತಾಲ್ಲೂಕು ಅಧ್ಯಕ್ಷರಾದ ಸಿದ್ದೇಶ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಕಾರ್ಯಪಾಲಕ ಅಭಿಯಂತರರಾದ ಎಸ್ ಎಸ್ ಮತ್ತಿಕಟ್ಟೆಯವರು, ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ ಎ ವಾಸಿಂ ಹಾಗೂ ಪಟ್ಟಣ ಪಂಚಾಯಿತಿ ಸಿಬ್ಬಂದಿಗಳು, ಪತ್ರಿಕಾ ಪ್ರತಿನಿಧಿಗಳು, ಪಟ್ಟಣದ ನಾಗರಿಕರು ಹಾಗೂ ಪಟ್ಟಣ ಪಂಚಾಯಿತಿ ಸಿಬ್ಬಂದಿ, ಹಾಗೂ ಪಟ್ಟಣದ ನಾಗರಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.