ರಾಜ್ಯದಲ್ಲಿ ನ್ಯೂ ಇಯರ್ ಸೆಲೆಬ್ರೇಷನ್ ಗೆ ಬ್ರೇಕ್

ರಾಜ್ಯದ ಜನತೆ ಹೊಸ ವರ್ಷಾಚರಣೆಯ ಸಂಭ್ರಮದಲ್ಲಿದೆ. ತಮ್ಮ ತಮ್ಮ ಊರಿನಲ್ಲಿ ಪಾರ್ಟಿ ಮೋಜು ಮಸ್ತಿ ಮಾಡಲು ಜನರು ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಕೊರೊನಾ ಜನರ ಸಂಭ್ರಮಕ್ಕೆ ಬ್ರೇಕ್ ಹಾಕಿದೆ.

ಇದರ ನಡುವೆ ಬ್ರಿಟನ್ ಕೊರೊನಾ ಸೋಂಕು ರಾಜ್ಯದಲ್ಲಿ ತಾಂಡವವಾಡುತ್ತಿದೆ. ಈ ಹಿನ್ನೆಲೆ ರಾಜ್ಯದಲ್ಲಿ ನ್ಯೂ ಇಯರ್ ಸೆಲೆಬ್ರೇಷನ್ ಗೆ ಬ್ರೇಕ್ ಹಾಕಲಾಗಿದ್ದು, ಹಲವು ಕಡೆ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ ಹೊರಡಿಸಲಾಗಿದೆ.

ರಾಮನಗರದ ಪ್ರವಾಸಿ ತಾಣಗಳಿಗೆ ಎರಡು ದಿನ ಪ್ರವಾಸಿಗರ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ, ಇಂದಿನಿಂದ ಜನವರಿ 2 ರವರೆಗೆ ರಾಮನಗರ ಜಿಲ್ಲೆಯ ಪ್ರವಾಸಿ ತಾಣಗಳಿಗೆ ನಿಷೇಧ ಹೇರಲಾಗಿದೆ. ಚುಂಚಿ ಪಾಲ್ಸ್ ಸೇರಿದಂತೆ ಹಲವು ಫಾಲ್ಸ್ ಗಳಿಗೆ ನಿಷೇಧ ಹೇರಲಾಗಿದೆ.

ಮಂಡ್ಯದ ಕಾವೇರಿ ನದಿ ತೀರ, ಶ್ರೀರಂಗಪಟ್ಟಣದ ಎಡಮುರಿ ಬಲಮುರಿಗೆ ಸಾರ್ವಜನಿಕರ ಪ್ರವೇಶಕ್ಕೆ ಎರಡು ದಿನ ನಿಷೇಧ ಹೇರಲಾಗಿದೆ. ಇನ್ನೂ ತುಮಕೂರಿನ ಕೆಲವು ಪ್ರಸಿದ್ದ ಪ್ರವಾಸಿ ತಾಣಗಳಿಗೆ ಕೂಡ ನಿಷೇಧ ಹೇರಲಾಗಿದೆ. ಜೊತೆಗೆ ಮಂಗಳೂರಿನಲ್ಲಿ ನಾಳೆ ಸಂಜೆ 6 ಗಂಟೆಯಿಂದ ಜನವರಿ 1 ರ ಬೆಳಗ್ಗೆ 6 ಗಂಟೆವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

Leave a Reply

Your email address will not be published.