ರಾತ್ರಿವೇಳೆಯಲ್ಲಿ ಎಚ್ಚರ ತಪ್ಪಿದ ಆರಕ್ಷಕರು,

 ನಿತ್ಯವಾಣಿ,  ಚಿತ್ರದುರ್ಗ,( ಮೇ. 21) : ಚಿತ್ರದುರ್ಗ ನಗರದಲ್ಲಿ ನಿನ್ನೆ ರಾತ್ರಿ ವೇಳೆ ಇನ್ನೂ10 ಗಂಟೆಗೆ ಪೊಲೀಸ್ ಸಿಬ್ಬಂದಿಗಳು ಚೆಕ್ಕಿಂಗ್ ಸ್ಥಳಗಳಾದ ಮಹಾತ್ಮ ಗಾಂಧಿ ಸರ್ಕಲ್, ಕನಕ ಸರ್ಕಲ್, ಚಳ್ಳಕೆರೆ ಟೋಲ್ಗೇಟ್ ಗಳಲ್ಲಿ ಬ್ಯಾರಿಕೇಡ್ ಗಳು ಓಪನ್ ಇದ್ದು ರಾತ್ರಿ ಡ್ಯೂಟಿ ಮಾಡುವ ಪೊಲೀಸರು ಈ ಸ್ಥಳಗಳಲ್ಲಿ ಚೆಕ್ ಮಾಡಲು ಇರದಿರುವುದು ನಡೆಯುವ ಅನಾಹುತಗಳಿಗೆ ಕಾರಣವಾಗುತ್ತದೆ,                                            ಬೇರೆ ಬೇರೆ ಜಿಲ್ಲೆಗಳಿಂದ ಬರುವ ವಾಹನ ಗಳಲ್ಲಿ ಕೋವಿಡ್ ಸೋಂಕಿತರೇ ಇರಬಹುದು, ಅಥವಾ ಕಳ್ಳಕಾಕರೆ ಇರಬಹುದು, ಮುಖ್ಯರಸ್ತೆಗಳಲ್ಲಿ ಹಾಗೂ ಒಳ ರಸ್ತೆಗಳಲ್ಲಿರುವ ಜನರ ಮತ್ತು ಅಂಗಡಿಗಳ ಸುರಕ್ಷತೆಗಾಗಿ ಏಕೆಂದರೆ ಈ ಲಾಕ್ ಡೌನ್ ಸಮಯದಲ್ಲಿ ಎಲ್ಲರೂ ಮನೆಯಲ್ಲಿರುತ್ತಾರೆ, ಆದ್ದರಿಂದ ಮುನ್ನೆಚ್ಚರಿಕೆಯಾಗಿ ಪೊಲೀಸ್ ರಕ್ಷಣಾಧಿಕಾರಿಗಳಾದ ಜಿ ರಾಧಿಕಾ ರವರು ಬೇಗ ಕ್ರಮವನ್ನು ತೆಗೆದುಕೊಳ್ಳಬೇಕಾಗಿ ಹಾಗೂ ರಾತ್ರಿ ವೇಳೆಯಲ್ಲಿ ತಾವುಗಳು ಒಂದು ರೌನ್ಡ್ಸ್ ವೀಕ್ಷಣೆ ಮಾಡಲು ನಮ್ಮ ನಿತ್ಯವಾಣಿ ಪತ್ರಿಕೆ ಮನವಿ ಮಾಡಿದೆ, ಈ ದೃಶ್ಯಗಳನ್ನು ಸೆರೆಹಿಡಿದ ನಮ್ಮ ವರದಿಗಾರ ಕಲ್ಮೇಶ್

Leave a Reply

Your email address will not be published.