ಅಬುಧಾಬಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ತಂಡಗಳಾದ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ಕೋಲ್ಕತ ನೈಟ್ ರೈಡರ್ಸ್ (ಕೆಕೆಆರ್) ತಂಡಗಳಿಗೆ ಅಭ್ಯಾಸ ನಡೆಸಲು ಸ್ಥಳೀಯ ಆಡಳಿತ ಅನುಮತಿ ನೀಡಿದೆ. ಅಬುಧಾಬಿಯಲ್ಲಿ ಎರಡು ತಂಡಗಳು ಉಳಿದುಕೊಂಡಿದ್ದು, ಸ್ಥಳೀಯ ನಿಯಮದ ಪ್ರಕಾರ 14 ದಿನಗಳ ಕಾಲ ಕ್ವಾರಂಟೈನ್ನಲ್ಲಿ ಇರಬೇಕಿದೆ. ಆದರೆ, ದುಬೈನಲ್ಲಿ ಉಳಿದುಕೊಂಡಿರುವ ತಂಡಗಳು 6 ದಿನಗಳ ಕಡ್ಡಾಯ ಕ್ವಾರಂಟೈನ್ ಮುಗಿಸಿ ಅಭ್ಯಾಸ ಆರಂಭಿಸಿವೆ. ಇದರಿಂದ ಮುಂಬೈ ಹಾಗೂ ಕೆಕೆಆರ್ ತಂಡಗಳು ಅಭ್ಯಾಸ ಆರಂಭಿಸಲು ಅನುಮತಿ ಕೇಳಿದ್ದವು. ಇದೀಗ ಐಪಿಎಲ್ ಆಡಳಿತ ಮಂಡಳಿ ಎಮಿರೈಟ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಜತೆ ಗುರುವಾರ ಮಾತುಕತೆ ನಡೆಸಿ ಅಭ್ಯಾಸ ಅನುಮತಿ ದೊರಕಿಸಿಕೊಟ್ಟಿದೆ.