ನಿತ್ಯವಾಣಿ ನ್ಯೂಸ್, ಚಿತ್ರದುರ್ಗ, ಜ.04 : ಕೆಲವು ದಿನಗಳ ಹಿಂದೆ ಚಿತ್ರದುರ್ಗದ ಮುರುಘ ಮಠದ ಶಿವಮೂರ್ತಿ ಶರಣರ ವಿರುದ್ಧ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಬಂದಿದ್ದ ಕಾರಣದಿಂದ ಶ್ರೀಗಳ ಬಂಧನವಾಗಿದ್ದು, ಇದಕ್ಕೆ ಸಂಬಂಧಪಟ್ಟಂತೆ ಇಲಾಖೆಗಳ ಅಧಿಕಾರಿಗಳು ಸಾಕಷ್ಟು ತನಿಖೆ ನಡೆಸಿ ಮಠದಲ್ಲಿ ವ್ಯಾಸಾಂಗ ಮಾಡುತ್ತಿದ್ದ ಮಕ್ಕಳನ್ನು ವಿಚಾರಣೆ ಮಾಡಿದಾಗ ಶರಣರ ವಿರುದ್ಧ ಮಕ್ಕಳು ಲೈಂಗಿಕ ದೌರ್ಜನ್ಯ ಆರೋಪದ ಬಗ್ಗೆ ತನಿಖೆಯಲ್ಲಿ ಹೇಳಿಕೆ ಕೊಟ್ಟಿಲ್ಲ ಎಂದು ಈ ಪ್ರಕರಣಕ್ಕೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ವರದಿಯನ್ನು ಕೊಟ್ಟಿರುತ್ತಾರೆ, ಆದರೂ ಕೂಡ ಕೆಲವು ವ್ಯಕ್ತಿಗಳು ಶ್ರೀಗಳ ವಿರುದ್ಧ ಪಿತ್ತೂರಿಗಳನ್ನು ಮಾಡುತ್ತಾ ಇವರ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಮಾಡಿರುವುದು, ಅವರಿಗೆ ದೊಡ್ಡದಾದ ಶಿಕ್ಷೆ ಕಾದಿದೆ, ಶರಣರು ಈ ಆರೋಪದಿಂದ ಮುಕ್ತರಾಗಿ ಅತಿ ಶೀಘ್ರದಲ್ಲೇ ಹೊರ ಬರುತ್ತಾರೆ ಎಂದು ಶರಣರ ಪರವಾಗಿರುವ ಭಕ್ತಾದಿಗಳು,