ವಿದ್ಯಾರ್ಥಿಗಳು ಬಸ್​ಪಾಸ್​ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ..; ಸಾರಿಗೆ ಸಚಿವರಿಂದ ಗುಡ್​ನ್ಯೂಸ್

​ಬೆಂಗಳೂರು: ಕರೊನಾ ವೈರಸ್​, ಲಾಕ್​ಡೌನ್​ ಶುರುವಾದಾಗಿನಿಂದ ರಾಜ್ಯ ಸಾರಿಗೆ ಸಂಸ್ಥೆ ನಷ್ಟದಲ್ಲಿಯೇ ಇದೆ. ಒಂದಷ್ಟು ಕಾಲ ಬಸ್​​ಗಳು ಸಂಚರಿಸಲಿಲ್ಲ. ಈಗಲೂ ಪೂರ್ಣ ಪ್ರಮಾಣದಲ್ಲಿ ಸಂಚರಿಸುತ್ತಿಲ್ಲ.ಈ ಮಧ್ಯೆ ಇನ್ನೊಂದು ವದಂತಿ ಹಬ್ಬಿತ್ತು. ಈ ಬಾರಿ ವಿದ್ಯಾರ್ಥಿಗಳ ಬಸ್​ ಪಾಸ್​ ದರ ಹೆಚ್ಚಿಸಲಾಗುತ್ತದೆ ಎಂಬ ಸುದ್ದಿಯೊಂದು ಹರಿದಾಡುತ್ತಿತ್ತು.

ಇದೀಗ ಸಾರಿಗೆ ಸಚಿವ ಲಕ್ಷ್ಮಣ್​ ಸವದಿ ಅವರು ಸ್ಪಷ್ಟನೆ ನೀಡಿ, ವಿದ್ಯಾರ್ಥಿಗಳಿಗೆ ಇಷ್ಟುಕಾಲ ರಿಯಾಯಿತಿ ದರದಲ್ಲಿ ನೀಡುತ್ತಿದ್ದ ಬಸ್​ಪಾಸ್​ ದರದಲ್ಲಿ ಹೆಚ್ಚಳ ಮಾಡುವುದಿಲ್ಲ. ಹಿಂದಿನ ಮಾನದಂಡಗಳನ್ನು ಬದಲಿಸುವ ಉದ್ದೇಶವಿಲ್ಲ. ಹಾಗಾಗಿ ವಿದ್ಯಾರ್ಥಿಗಳು, ಪಾಲಕರು ಆತಂಕಪಡುವುದು ಬೇಡ ಎಂದು ಹೇಳಿದ್ದಾರೆ.

ವಿದ್ಯಾರ್ಥಿಗಳ ಬಸ್​ಪಾಸ್​ ದರ ಹೆಚ್ಚು ಮಾಡಲಾಗುತ್ತದೆ ಎಂಬುದು ವದಂತಿಯಷ್ಟೇ. ಕಳೆದ ಶೈಕ್ಷಣಿಕ ವರ್ಷದಲ್ಲಿ ಯಾವ ನಿಯಮಗಳ ಅನುಸಾರ ಬಸ್​ಪಾಸ್​ ವಿತರಣೆ ಮಾಡಲಾಗುತ್ತಿತ್ತೋ, ಅದೇ ದರದಲ್ಲಿಯೇ ಈ ಬಾರಿಯೂ ವಿತರಣೆ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

Leave a Reply

Your email address will not be published.