ನಿತ್ಯವಾಣಿ ಚಿತ್ರದುರ್ಗ,(ಮೇ. 27) : ನಮ್ಮ ನಿತ್ಯವಾಣಿ ಪತ್ರಿಕೆ ನಿನ್ನೆ ಅಂದರೆ 26.05.2021 ರಂದು ವಿದ್ಯಾರ್ಥಿಗಳು ಹಾಗೂ ಪೋಷಕರು ಕೆಲವು ಖಾಸಗಿ ಕಾಲೇಜುಗಳ ವಿರುದ್ಧ ಆಕ್ರೋಶದ ಸುದ್ದಿ ಪ್ರಸಾರ ಮಾಡಿತ್ತು, ಇದನ್ನು ಪರಿಶೀಲಿಸಿ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ಚಿತ್ರದುರ್ಗ ಇವರು ಚಿತ್ರದುರ್ಗ ಜಿಲ್ಲೆಯ ಎಲ್ಲಾ ಕಾಲೇಜುಗಳಿಗೆ ಜ್ಞಾಪನ ನೋಟಿಸ್ ಜಾರಿಗೊಳಿಸಿದ್ದಾರೆ

ಈ ನೋಟಿಸ್ ನಲ್ಲಿ ಪ್ರಥಮ ಪಿಯುಸಿ ದಾಖಲಾತಿಯನ್ನು2021-22ನೇ ಶೈಕ್ಷಣಿಕ ಸಾಲಿನಲ್ಲಿ ಇಲಾಖೆಯಿಂದ ದಾಖಲಾತಿ ಆದೇಶ ಬಂದ ನಂತರ ದಾಖಲಾತಿ ಮಾಡಿಕೊಳ್ಳಬೇಕು, ದಾಖಲಾತಿ ಇದಕ್ಕೂ ಮುಂಚೆ ಎಸ್ ಎಸ್ ಎಲ್ ಸಿ ಪಾಸ್ ಆದವರನ್ನು ದಾಖಲಾತಿ ಮಾಡಿಕೊಳ್ಳುವಂತಿಲ್ಲ, ಸರ್ಕಾರದ ಹಾಗೂ ಇಲಾಖೆಯ ಆದೇಶ ಬಂದ ನಂತರ ದಾಖಲಾತಿ ಮಾಡಿಕೊಂಡು ಆನ್ಲೈನ್ ಕ್ಲಾಸ್ ನಡೆಸಬೇಕೆಂದು ನೋಟಿಸ್ ನಲ್ಲಿ ತಿಳಿಸಿದೆ, ಇದಕ್ಕೂ ಮೀರಿ ಖಾಸಗಿ ಕಾಲೇಜುಗಳು ದಾಖಲಾತಿ ಪ್ರಾರಂಭ ಆರಂಭಿಸಿದರೆ, ನಮ್ಮ ಪತ್ರಿಕೆ ಮುಂದಿನ ವರದಿ ಕಾಲೇಜ್ ಲೇಸನ್ಸ್ ಗಳ ತೆಗೆದುಹಾಕುವುದಕ್ಕೆ ಹಾಗೂ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಆಗುವರೆಗೂ ಬಿಡುವುದಿಲ್ಲ ಎಂದು ಎಚ್ಚರಿಸಿದೆ