ವೃದ್ಧ ಆಟೋ ಚಾಲಕ ತನ್ನ ಇಬ್ಬರು ಮಕ್ಕಳ ಮರಣಾನಂತರವೂ ಮೊಮ್ಮಗಳಿಗೆ ಶಿಕ್ಷಣವನ್ನ ನೀಡಬೇಕು ಎಂಬ ಉದ್ದೇಶದಿಂದ ಮನೆ ಮಾರಲು ಮುಂದಾದ ಘಟನೆಯೊಂದು ನೆಟ್ಟಿಗರ ಕಣ್ಣಂಚನ್ನ ತೇವಗೊಳಿಸಿತ್ತು.
74 ವರ್ಷದ ದೇಶರಾಜ್ ಎಂಬ ವೃದ್ಧ ತನ್ನ ಮೊಮ್ಮಗಳು ಶಿಕ್ಷಕಿಯಾಗಬೇಕೆಂಬ ಕನಸನ್ನ ಪೂರ್ಣಗೊಳಿಸಲು ಮನೆ ಮಾರಾಟಕ್ಕೆ ಮುಂದಾಗಿದ್ದರು. ಆದರೆ ಈ ವೃದ್ಧನಿಗಾಗಿ ಕ್ರೌಡ್ ಫಂಡಿಂಗ್ ಸಂಗ್ರಹಿಸೋದ್ರ ಮೂಲಕ ಆಟೋ ಚಾಲಕನಿಗೆ 24 ಲಕ್ಷ ರೂಪಾಯಿ ಧನಸಹಾಯ ಮಾಡಲಾಗಿದೆ.
ಹ್ಯೂಮನ್ಸ್ ಆಫ್ ಬಾಂಬೆ ತನ್ನ ಸೋಶಿಯಲ್ ಮೀಡಿಯಾ ಪೋಸ್ಟ್ನಲ್ಲಿ ಮೊಮ್ಮಗಳ ಶಿಕ್ಷಣಕ್ಕಾಗಿ ಮನೆ ಮಾರಿ ಆಟೋದಲ್ಲಿ ವಾಸಿಸುತ್ತಿರುವ ವೃದ್ಧ ಎಂಬ ಕತೆಯನ್ನ ಹಂಚಿಕೊಂಡಿತ್ತು. ಈ ಕತೆಯು ಸಾವಿರಾರು ಜನರನ್ನ ಭಾವುಕರನ್ನಾಗಿ ಮಾಡಿತ್ತು.
ಕ್ರೌಡ್ ಫಂಡಿಂಗ್ನಲ್ಲಿ 20 ಲಕ್ಷ ರೂಪಾಯಿಯನ್ನ ಸಂಗ್ರಹಿಸುವ ಗುರಿಯನ್ನ ಹೊಂದಲಾಗಿತ್ತು. ಆದರೆ ಇದೀಗ ಈ ಹಣವು 24 ಲಕ್ಷ ರೂಪಾಯಿ ತಲುಪಿದೆ. ಈ ಹಣದಿಂದ ಮನೆ ಖರೀದಿಸುವಂತೆ ವೃದ್ಧನಿಗೆ ಚೆಕ್ ನೀಡಲಾಗಿದೆ.