ನಿತ್ಯವಾಣಿ, ಚಿತ್ರದುರ್ಗ(ಮೇ.30) : ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ತರಗತಿಗಳು ನಡೆಯದೆ ಒಂದು ವರ್ಷವೇ ಕಳೆದುಹೋಗಿದೆ. ಕರೋನ ಲಾಕ್ ಡೌನ್ ನಿಂದಾಗಿ ಮಕ್ಕಳು ಕಲಿತಿರುವುದನ್ನು ಮರೆತು ಹೋಗುವ ಸಂದರ್ಭ ಸೃಷ್ಟಿಯಾಗಿರುವುದು ಅತ್ಯಂತ ವಿಷಾದನೀಯ. ಅದರಲ್ಲೂ ಎಸ್.ಎಸ್.ಎಲ್.ಸಿ ಹಾಗೂ ದ್ವಿತೀಯ ಪಿಯುಸಿ ಮಕ್ಕಳ
ವಿದ್ಯಾರ್ಥಿ ಜೀವನ ಅಕ್ಷರಶಃ ಪ್ರವಾಹದಲ್ಲಿ ಸಿಲುಕಿದಂತಾಗಿದೆ. ಇದೆಲ್ಲದರ ನಡುವೆ ಪೋಷಕರು ಮಕ್ಕಳ ಭವಿಷ್ಯದ ಬಗ್ಗೆ ಚಿಂತೆಗೀಡಾಗಿದ್ದಾರೆ.

ಈ ದಿಸೆಯಲ್ಲಿ *ಚಿತ್ರದುರ್ಗ ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ತು ವತಿಯಿಂದ ಯೋಗೀಶ್ ಸಹ್ಯಾದ್ರಿ ಎಜುಕೇಷನ್ ಫೌಂಡೇಶನ್ (ರಿ.),* ಸಹಯೋಗದೊಂದಿಗೆ “ವಿದ್ಯಾರ್ಥಿಗಳಿಗಾಗಿ ಉಚಿತ ಆನ್ಲೈನ್ ಇಂಗ್ಲಿಷ್ ಕಾರ್ಯಾಗಾರ” ವನ್ನು ಆಯೋಜಿಸಲಾಗಿದೆ ಎಂದು ಉಪನ್ಯಾಸಕ ಹಾಗೂ ಮಕ್ಕಳ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಯೋಗೀಶ್ ಸಹ್ಯಾದ್ರಿ ತಿಳಿಸಿದ್ದಾರೆ. ಜೂನ್ 02 ಮತ್ತು 03 ರ ಬುಧವಾರ ಹಾಗು ಗುರುವಾರದಂದು ಬೆಳಗ್ಗೆ 10 ರಿಂದ 12.30 ಗಂಟೆವರೆಗೆ ತರಗತಿಗಳನ್ನು ನಡೆಸಲಾಗುವುದು. ಗೂಗಲ್ ಮೀಟ್ ಮೂಲಕ ಹಮ್ಮಿಕೊಂಡಿರುವ ಕಾರ್ಯಾಗಾರದಲ್ಲಿ ರಾಜ್ಯದ ಯಾವುದೇ ಭಾಗದಿಂದ ಉಚಿತವಾಗಿ 5 ನೇ ತರಗತಿಯಿಂದ ಯಾವುದೇ ಪದವಿ ಓದುತ್ತಿರುವ ಆಸಕ್ತ ವಿದ್ಯಾರ್ಥಿಗಳು ನೊಂದಾಯಿಸಬಹುದು ಹಾಗು ಮೊದಲ 250 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ಎಂದು ಪ್ರಕಟಣೆ ತಿಳಿಸಿದೆ.
ಸಂಪರ್ಕಿಸಿ : 9972240239, 9036974702, 9964376364.
ಯೋಗೀಶ್ ಸಹ್ಯಾದ್ರಿ,
ಉಪನ್ಯಾಸಕರು ಹಾಗು
ಅಧ್ಯಕ್ಷರು, ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ತು, ಚಿತ್ರದುರ್ಗ.
ReplyForward
|