ನಿತ್ಯವಾಣಿ,ಬೆಂಗಳೂರು,(ಜೂ.30) : ಕರ್ನಾಟಕರಾಜ್ಯ ಸರ್ಕಾರಿ ನೌಕರರ ಸಂಘವು 1920ರಲ್ಲಿ ಸ್ಥಾಪನೆಗೊಂಡುರಾಜ್ಯದಲ್ಲಿಕರ್ತವ್ಯ ನಿರ್ವಹಿಸುತ್ತಿರುವ 6.00 ಲಕ್ಷ ಸರ್ಕಾರಿ ನೌಕರರನ್ನು ಪ್ರತಿನಿಧಿಸುವ ಏಕೈಕ ಹಾಗೂ ರಾಷ್ಟ್ರದಲ್ಲೇ ಮಾದರಿ ಸಂಘಟನೆಯಾಗಿದ್ದು, ಹಲವು ವೃಂದ ಸಂಘಗಳಿಗೆ ಸಂಯೋಜನೆ ನೀಡಿರುತ್ತದೆ. ಸಂಘವು 2020ಕ್ಕೆ ನೂರು ವರ್ಷಗಳ ಶತಮಾನೋತ್ಸವಆಚರಣೆಗೆ ಸನ್ನದ್ಧವಾಗಿದ್ದು ಈ ಹಿನ್ನೆಲೆಯಲ್ಲಿ ನೌಕರರ ಭವನವನವನ್ನುಆಧುನಿಕ ಮಾದರಿಯಲ್ಲಿ ನವೀಕರಿಸಲು ಸರ್ಕಾರವುರೂ. 12.00 ಕೋಟಿಗಳ ಅನುದಾನವನ್ನು ಮಂಜೂರು ಮಾಡಿತ್ತು, ಭವನದ ನವೀಕರಣ ಕಾಮಗಾರಿಗಳು 2020ನೇ ಜನವರಿಯಲ್ಲಿ ಪ್ರಾರಂಭಗೊಂಡು ಪ್ರಸ್ತುತಪೂರ್ಣಗೊಂಡಿರು ವಭವ್ಯ ಹಾಗೂ ಅಲಂಕೃತ ಭವನವು ಈ ಕೆಳಕಂಡ ಸವಲತ್ತುಗಳನ್ನು ಹೊಂದಿರುತ್ತದೆ. 1. ಸುಸಜ್ಜಿತ ವಿಶಾಲವಾದಕಾರ್ಯಾಲಯ. 2. ಕಾನೂನು ಸಲಹಾ ಕೇಂದ್ರ. 3. ಬೋರ್ಡ್ ಹಾಲ್.4. ಅತ್ಯಾಧುನಿಕ ಮಾದರಿಯ ಮೀಟಿಂಗ್ ಹಾಲ್.5. ಸುಸಜ್ಜಿತವಾದ ಸುಮಾರು 350 ಆಸನವುಳ್ಳ ಸಭಾಂಗಣ. 6. 08 ಹವಾ ನಿಯಂತ್ರಿತ ವಿ.ವಿ.ಐ.ಪಿ. ಕೊಠಡಿಗಳು. 7. 40 ಸುಸಜ್ಜಿತ ವಸತಿಗೃಹ. 8. ವಿಶಾಲವಾದ ವಾಹನ ನಿಲುಗಡೆ ಪ್ರದೇಶ. 9. ವಿಶಾಲವಾದ ಪ್ರಾಂಗಣ.
ಆಧುನಿಕ ಮಾದರಿಯಲ್ಲಿ ಸುಸಜ್ಜಿತಗೊಂಡಿರುವ ಭವನವುದಿನಾಂಕ: 01-07-2021 ರಂದು ರಾಜ್ಯದ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪರವರಿಂದ ಲೋಕಾರ್ಪಣೆಗೊಳ್ಳಲಿದೆ. ಈ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿಗಳು ಹಾಗೂ ಲೋಕೋಪಯೋಗಿ ಸಚಿವರಾದ ಗೋವಿಂದಎಂ.ಕಾರಜೋಳ ಹಾಗೂ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಪಿ. ರವಿಕುಮಾರ್ ದಂತೆ ಸರ್ಕಾರದಉನ್ನತ ಅಧಿಕಾರಿಗಳು, ಗಣ್ಯರುಹಾಗೂ ಸಂಘದ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.ಎಂದು ಕರ್ನಾಟಕರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ. ಮಂಜುನಾಥ್ ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ.