ಪಂಚಮಸಾಲಿ ಸಮಾಜಕ್ಕೆ ಸಚಿವ ಸ್ಥಾನಕ್ಕಿಂತ ಮೀಸಲಾತಿ ಮುಖ್ಯ -ಜಯ ಮೃತ್ಯುಂಜಯ ಸ್ವಾಮೀಜಿ
ಬಾಗಲಕೋಟೆ: ಪಂಚಮಸಾಲಿ ಸಮಾಜದ ಶಾಸಕರಿಗೆ ಸಚಿವ ಸ್ಥಾನ ಕೊಡುವ ವಿಚಾರ ಸಿಎಂ ಅವರಿಗೆ ಬಿಟ್ಟದ್ದು ಅಂತಾ ಲಿಂಗಾಯತ ಪಂಚಮಸಾಲಿ ಪೀಠಾಧ್ಯಕ್ಷ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಸ್ವಾಮೀಜಿ.. ನಮ್ಮ ಸಮಾಜಕ್ಕೆ ಶಾಸಕರ ಸಂಖ್ಯೆ ಆಧರಿಸಿ ಸಚಿವ ಸ್ಥಾನ ಕೊಡೋದು ಸಿಎಂ ವಿವೇಚನೆಗೆ ಬಿಟ್ಟಿರೋ ವಿಚಾರ. ವರ್ಷದ ಹಿಂದೆ ಸಮಾಜದ ಶಾಸಕರಿಗೆ ಸಚಿವ ಸ್ಥಾನ ಕೊಡಿ ಎಂದು ಕೇಳಿದ್ದೆ. ನಾವು ಈಗ ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ಹೋರಾಟಕ್ಕೆ ಧುಮುಕಿದ್ದೇವೆ. ನಮ್ಮ ಸಮಾಜಕ್ಕೆ ಸಚಿವ ಸ್ಥಾನ ಯಾರಿಗಾದರೂ ಕೊಡ್ರಿ, ಯಾವಾಗಬೇಕಾದರೂ ಕೊಡಿ. ನಿಮಗೆ, ನಿಮ್ಮ ಹೈಕಮಾಂಡ್ಗೆ ಬಿಟ್ಟದ್ದು. ಸಚಿವ ಸ್ಥಾನ ಕೊಡಿ ಎಂದು ನಾನು ಒತ್ತಡ ಹಾಕೋಕೆ ಹೋಗಲ್ಲ. ನಮಗೆ ಸಚಿವ ಸ್ಥಾನಕ್ಕಿಂತ ಮೀಸಲಾತಿ ಮುಖ್ಯ ಅಂತಾ ಆಗ್ರಹಿಸಿದರು.
ನಮ್ಮ ಸಮಾಜದ ಶಾಸಕರ ಸಂಖ್ಯೆ ಅನುಗುಣವಾಗಿ ಇನ್ನಿಬ್ಬರು ಶಾಸಕರಿಗೆ ಸಚಿವ ಸ್ಥಾನ ಕೊಡ್ಬೇಕು. ಆ ಎರಡು ಸಚಿವ ಸ್ಥಾನ ಯಾವಾಗ ಕೊಡ್ತಿರೋ, ಯಾವ ಸಂದರ್ಭದಲ್ಲಿ ಯಾರಿಗೆ ಕೊಡ್ತಿರೋ ನಿಮಗೆ ಬಿಟ್ಟಿದ್ದು ಅಂತಾ ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.