* ಪಂಚಮಸಾಲಿ ಜನಾಂಗದ ಪ್ರವರ್ಗ-2ಎ ಪ್ರಕರಣ ದೂರದೃಷ್ಟಿ ಇಲ್ಲದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ

ಪಂಚಮಸಾಲಿ ಸಮುದಾಯದ 2ಎ ಪ್ರವರ್ಗದ ವಿಚಾರದಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ನಿರ್ಲಕ್ಷತೆ ಸೂಕ್ತವಲ್ಲ,?
ಕೂಡಲಸಂಗಮ ಪೀಠದ ಶ್ರೀ ಜಯಮೃತ್ಯುಂಜಯ ಶ್ರೀಗಳರವರಿಗೆ ಈ ಮೊದಲೆ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಾಗ ೧ ತಿಂಗಳ ಕಾಲಾವಕಾಶ ಕೊಡಿ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಶ್ರೀಗಳಲ್ಲಿ ಮನವಿ ಮಾಡಿದ್ದರು, ಆಗಲೇ ಸಮಿತಿ ಮಾಡಿ ವರದಿ ತರಿಸಲು ಪೂರ್ವ ಯೋಚನೆ ಮಾಡದೆ ದಿವ್ಯ ನಿರ್ಲಕ್ಷ್ಯ ತೋರಿದ್ದು ಸ್ಪಷ್ಟವಾಗಿದೆ ಮತ್ತೆ ಕಾಲಾವಕಾಶ ಕೊಡಿ ಎಂದು ಕೇಳಿ ಕಾಲಹರಣ ಮಾಡುವುದು ಸರಿಯಲ್ಲ 21ರಂದು ಬೆಂಗಳೂರಿನಲ್ಲಿ ನಡೆದ ಪಂಚಮಸಾಲಿ ಸಮಾವೇಶದ ವೇದಿಕೆಗೆ ಬಾರದೆ ತಮ್ಮಮನೆಯಲ್ಲಿಯೇ ಕುಳಿತು ಸಚಿವರಾದ ಮುರುಗೇಶ್ ನಿರಾಣಿ, ಸಿಸಿ ಪಾಟೀಲ್ ರನ್ನು ಕಾರ್ಯಕ್ರಮಕ್ಕೆ ಕಳಿಸಿದ್ದು ಮತ್ತೊಂದು ಉದಾಸೀನ ಎನ್ನಬಹುದು, ರಾಜ್ಯದಲ್ಲಿ 80 ಲಕ್ಷ ಪಂಚಮಸಾಲಿ ಜನಾಂಗವು ಇದ್ದು, ರಾಜ್ಯದಲ್ಲಿ ರಾಜಕೀಯ ಅಸ್ತಿತ್ವದ ಸರಕಾರ ರಚನೆ ಆಗಬೇಕಾದರೆ ಪಂಚಮಸಾಲಿ ಜನಾಂಗ ನಿರ್ಣಾಯಕ ಪಾತ್ರವಹಿಸಿದ್ದು ಎಂಬುದನ್ನು ಬಿಎಸ್ ಯಡಿಯೂರಪ್ಪನವರು ಅರ್ಥಮಾಡಿಕೊಳ್ಳಬೇಕು ದೂರದೃಷ್ಟಿ ರಾಜಕೀಯ ಆಲೋಚನೆ ಇದ್ದರೆ ಮಾತ್ರ ಅಸ್ತಿತ್ವ ಉಳಿಸಿಕೊಳ್ಳಬಹುದು ಬಲಿಷ್ಠ ಸಮುದಾಯದ ನಿರ್ಲಕ್ಷ್ಯ ಮಾಡಿದರೆ ತಕ್ಕ ಉತ್ತರ ನೀಡುವ ಸಾಧ್ಯತೆಗಳು ಕಾಣುತ್ತಿವೆ, ನಿತ್ಯವಾಣಿ,, ಕನ್ನಡ ದಿನ ಪತ್ರಿಕೆ ಸಂಪಾದಕರು, ಎಸ್. ಟಿ. ನವೀನ್ ಕುಮಾರ್, ಚಿತ್ರದುರ್ಗ, 9901254020

Leave a Reply

Your email address will not be published.